ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ದೇವಸ್ಥಾನದಲ್ಲೂ ಅಂತರ ಕಾಯ್ದುಕೊಳ್ಳಿ

ದೇವಾಲಯಗಳಲ್ಲಿ ಅಂತರ ಇರಲಿ, ಮಾಸ್ಕ್‌ ಧರಿಸಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 20:25 IST
Last Updated 17 ಅಕ್ಟೋಬರ್ 2020, 20:25 IST
ಡಾ. ಗಂಗಾಧರ ಕೆ.ಎಚ್‌.
ಡಾ. ಗಂಗಾಧರ ಕೆ.ಎಚ್‌.   

ದಾವಣಗೆರೆ: ಕೊರೊನಾ ಸೋಂಕು ನೀರಿನಿಂದ ಬರುವುದಿಲ್ಲ, ಗಾಳಿಯ ಮೂಲಕ ಹರಡುತ್ತದೆ. ಹೀಗಾಗಿ ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದ ತೆಗೆದುಕೊಳ್ಳುವುದರಿಂದ ಸೋಂಕು ಬರುವುದಿಲ್ಲ.

‘ಈ ತಿಂಗಳು ನವರಾತ್ರಿ, ಮುಂದಿನ ತಿಂಗಳು ದೀಪಾವಳಿ ಹಬ್ಬ ಇರುವುದರಿಂದ ದೇವಾಲಯಗಳಲ್ಲಿ ಜನಜಂಗುಳಿ ಸಾಮಾನ್ಯ. ಆದರೆ ಈ ಬಾರಿ ಕೋವಿಡ್‌–19 ಇರುವ ಕಾರಣ ಜನರು ಜಾಗ್ರತೆ ವಹಿಸಬೇಕು’ ಎನ್ನುತ್ತಾರೆ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಗಂಗಾಧರ ಕೆ.ಎಚ್‌.

‘ದಸರಾ ಇರುವುದರಿಂದ ದೇವಿ ದೇವಾಲಯಕ್ಕೆ ಬರುವ ಜನರ ಸಂಖ್ಯೆ ಹೆಚ್ಚು. ಆದರೆ ಜನರು ಮೈಮರೆಯುವಂತಿಲ್ಲ. ದೇವಾಲಯದಲ್ಲಿ ತೀರ್ಥ, ಪ್ರಸಾದ ತಿನ್ನುವುದರಿಂದ ಕೊರೊನಾ ಬಾರದು. ಆದರೆ ತೀರ್ಥ, ಪ್ರಸಾದ ನೀಡುವವರಿಗೆ ಸೋಂಕು ತಗುಲಿದ್ದರೆ ಎಚ್ಚರ ವಹಿಸುವುದು ಮುಖ್ಯ. ಅವರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಂತಹವರು ದೇವಾಲಯಕ್ಕೆ ಬರಬಾರದು. ಅಲ್ಲದೇ ತೀರ್ಥ, ಪ್ರಸಾದ ನೀಡುವವರು ಆದಷ್ಟು ಅಂತರಕಾಯ್ದುಕೊಂಡು, ಮಾಸ್ಕ್ ಧರಿಸಿಯೇ ಪ್ರಸಾದ ನೀಡುವುದು ಒಳಿತು. ಈಗ ಕೆಲ ದೇವಸ್ಥಾನಗಳಲ್ಲಿ ಸ್ವಯಂಚಾಲಿತ ಡಿಸ್ಪೆನ್ಸರ್‌ ಬಂದಿದೆ. ಅದನ್ನು ಒತ್ತಿದರೆ ತೀರ್ಥ ಬರುತ್ತದೆ. ಇಂತಹಡಿಸ್ಪೆನ್ಸರ್‌ ಅನ್ನು ಎಲ್ಲ ದೇವಾಲಯಗಳಲ್ಲಿ ಬಳಸುವುದು ಉತ್ತಮ’ ಎಂದು ಸಲಹೆ ನೀಡುತ್ತಾರೆ ಅವರು.

ADVERTISEMENT

‘ಜನರು ದೇವಾಲಯಗಳಲ್ಲಿಪ್ರಸಾದ ತಿನ್ನದೆ ಮನೆಗೆ ತಂದು ತಿನ್ನುವುದೂ ಆರೋಗ್ಯದ ದೃಷ್ಟಿಯಿಂದ ಒಳಿತು. ಈ ರೀತಿ ಮಾಡುವುದರಿಂದ ಸೋಂಕು ಹರಡುವುದರಿಂದ ದೂರ ಇರಬಹುದು. ದೇವಾಲಯದಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟ. ಅಂತಹ ಸಂದರ್ಭದಲ್ಲಿ ಜನರೇ ಮುಂಜಾಗ್ರತೆ ವಹಿಸಬೇಕು’ ಎನ್ನುತ್ತಾರೆ ಡಾ. ಗಂಗಾಧರ್‌.

ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು ಅಥವಾ ಸ್ಯಾನಿಟೈಸರ್‌ ಬಳಕೆ ಈ ಮೂರು ನಮ್ಮ ಸೂತ್ರವಾಗಬೇಕು. ಕೊರೊನಾಗೆ ಲಸಿಕೆ ಬಂದರೂ ಇದನ್ನು ಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.