ADVERTISEMENT

ಹೊಸ ಟ್ರೆಂಡ್‌ಗಳು

ಪೃಥ್ವಿರಾಜ್ ಎಂ ಎಚ್
Published 2 ಫೆಬ್ರುವರಿ 2020, 19:30 IST
Last Updated 2 ಫೆಬ್ರುವರಿ 2020, 19:30 IST
ಫಿಟ್‌ನೆಸ್‌
ಫಿಟ್‌ನೆಸ್‌   

ಆರೋಗ್ಯ ಕಾಳಜಿ ಹೆಚ್ಚಿದಂತೆಲ್ಲಾ ವಿವಿಧ ಸೇವೆಗಳನ್ನು ಪಡೆಯಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇಷ್ಟು ದಿನ ವೈದ್ಯಕೀಯ ಚಿಕಿತ್ಸೆಗೆ ಒಂದೆಡೆ ಹೋದರೆ, ತಜ್ಞರ ನೆರವು ಪಡೆಯಲು ಮತ್ತೊಂದು ಕಡೆಗೆ ಹೋಗಬೇಕಿತ್ತು. ಮುಂದಿನ ದಿನಗಳಲ್ಲಿ ಫಿಟ್‌ನೆಸ್‌, ಆರೋಗ್ಯ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ನೀಡುವ ಸಂಸ್ಥೆಗಳು ಒಂದೇ ಕಡೆ ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ ನ್ಯೂಯಾರ್ಕ್‌ನ ‘ದಿ ವಾಲ್‌’ ಫಿಟ್‌ ನೆಸ್‌ ಕೆಂದ್ರದ ನಿರ್ದೇಶಕ ಎರಿಕ್‌ ರೊಫೊಕ್ಸಿ.

ಹೊಸ ಸಾಧನಗಳು

ದೇಹಸ್ಥಿತಿಗೆ ತಕ್ಕಂತೆ ಯಾವ ವ್ಯಾಯಾಮ ಯಾವಾಗ ಎಷ್ಟು ಹೊತ್ತು ಮಾಡ ಬೇಕೆಂದು ಮಾಹಿತಿ ನೀಡುವ ಸಾಧನಗಳು ಹೆಚ್ಚು ಬಳಕೆಗೆ ಬರಲಿವೆ ಎನ್ನುತ್ತಾರೆ, ದಿ ಸ್ಕ್ಲಪ್ಟ್ ಸೊಸೈಟಿ ಆ್ಯಪ್‌ ತಯಾರಿಸಿರುವ ಮೆಗಾನ್ ರೂಪ್‌. ಫಿಟ್‌ನೆಸ್ ಕೇಂದ್ರ, ತರಬೇತುದಾರರ ಮಾಹಿತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಅಗ್ಗವಾಗಿ ಒದಗಿಸಲು ನೆರವಾಗುವ ಸಾಧನಗಳು ಬಳಕೆಗೆ ಬರಬಹುದು ಎಂಬುದು ಅವರ ಅಭಿಪ್ರಾಯ.

ADVERTISEMENT

ಒಟ್ಟೊಟ್ಟಿಗೆ ವ್ಯಾಯಾಮ

ಒಂದೇ ಸಮಸ್ಯೆ ಎದುರಿಸುತ್ತಿರುವ ಅಥವಾ ಒಂದೇ ರೀತಿಯ ವ್ಯಾಯಾಮ ಮಾಡುವಂಥ ಕಮ್ಯೂನಿಟಿ ಫಿಟ್‌ನೆಸ್ ಎಂಬ ಪರಿಕಲ್ಪನೆ ಮಹಿಳೆಯರಿಗೆ ಹೆಚ್ಚು ನೆರವಾಗುತ್ತದೆ. ಅವರ ಸುರಕ್ಷತೆ ದೃಷ್ಟಿಯಿಂದ ಕೂಡಿ ವ್ಯಾಯಾಮ ಮಾಡುವುದು ಉತ್ತಮ ಎಂಬುದು ‘ಟೋನ್‌ ಇಟ್‌ ಅಪ್‌’ ಸಂಸ್ಥೆಯ ಸಂಸ್ಥಾಪಕರಾದ ಕತ್ರಿನಾ ಸ್ಕಾಟ್‌ ಮತ್ತು ಕರೆನಾ ಡ್ವಾನ್‌ ಅಭಿಪ್ರಾಯ.

ಮತ್ತಷ್ಟು ಡಿಜಿಟಲೀಕರಣ

ಬಿಡುವು ಮಾಡಿಕೊಂಡು ಫಿಟ್‌ನೆಸ್‌ ಕೇಂದ್ರಗಳಿಗೆ ಹೋಗಿ ವ್ಯಾಯಾಮ ಮಾಡಲು ಅವಕಾಶ ಇಲ್ಲದವರು ಮನೆಯಲ್ಲೇ ತಜ್ಞರ ಸೂಚನೆಯಂತೆ ಫಿಟ್‌ನೆಸ್ ಕಾಪಾಡಿಕೊಳ್ಳಬಹುದಾದ ವ್ಯವಸ್ಥೆ ಮತ್ತಷ್ಟು ವಿಸ್ತಾರವಾಗಲಿದೆ. ಈ ದಶಕದಲ್ಲಿ ತಂತ್ರಜ್ಞಾನ ಮತ್ತಷ್ಟು ಅಭಿವೃದ್ಧಿಯಾಗಲಿರುವುದರಿಂದ ಇಂತಹ ಆನ್‌ಲೈನ್ ಸೇವೆಗಳು ಮತ್ತಷ್ಟು ಅಗ್ಗವಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ನ್ಯೂಯಾರ್ಕ್‌ನಲ್ಲಿ ಕಾರ್ಯನಿ ರ್ವಹಿಸುತ್ತಿರುವ ಆನ್‌ಲೈನ್ ಫಿಟ್‌ನೆಸ್ ತರಬೇತುದಾರ ಜೆನ್‌ ಟಲ್‌ಮನ್‌.

ವರ್ಚುವಲ್ ತರಬೇತುದಾರರು

ಫಿಟ್‌ನೆಸ್‌ಗೆ ತಜ್ಞರ ನೆರವು, ತರಬೇತಿ ಅಗತ್ಯ. ಅವರಿಗೆ ಅನು ಕೂಲವಾಗುವ ಸಮಯದಲ್ಲೇ ನಾವೂ ತರಬೇತಿ ಪಡೆಯಬೇಕಾಗುತ್ತದೆ. ಇದು ದುಬಾರಿಯೂ ಹೌದು. ಆದರೆ ವರ್ಚುವಲ್ ತಂತ್ರಜ್ಞಾನದಿಂದಾಗಿ ಕಂಪ್ಯೂಟರ್‌ ಮೂಲಕ ಸಲಹೆ ಪಡೆದು ತರಬೇತಿ ಪೂರ್ಣಗೊಳಿಸಬಹುದು. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.