ಮೂಳೆ, ಸ್ನಾಯು ಮತ್ತು ಕೊಬ್ಬಿನ ಸಂಯೋಜಿತ ಅಂಗಾಂಶಗಳಿಂದ ಸರ್ಕೋಮಾ ಕ್ಯಾನ್ಸರ್ ಉಂಟಾಗುತ್ತದೆ. ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಕೇವಲ ಶೇ 1ರಷ್ಟು ಮಾತ್ರ ಈ ಕ್ಯಾನ್ಸರ್ ಕಂಡುಬರುತ್ತದೆ.
ಅಸ್ಪಷ್ಟ ಹಾಗೂ ಯಾವುದೇ ಗುಣಲಕ್ಷಣಗಳಿಲ್ಲದೇ ಈ ರೋಗ ಬೆಳವಣಿಗೆಯ ಹಂತವನ್ನು ಕಾಣಬಹುದು. ಹಾಗಾಗಿ ಪತ್ತೆ ಹಚ್ಚುವುದು ಕಷ್ಟ. ಸರ್ಕೋಮಾ ಜಾಗೃತ ಮಾಸ ನಡೆಯುತ್ತಿರುವ ಸಂದರ್ಭದಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯ.
ಊತ, ನೋವು, ತೂಕ ನಷ್ಟ, ದಣಿವು ಮತ್ತು ಹಸಿವಿನ ಗುಣಲಕ್ಷಣಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸುವುದು ವೈದ್ಯರಿಗೆ ಸವಾಲಾಗಿದೆ. ಸರ್ಕೋಮಾ ಸಾಮಾನ್ಯವಾಗಿ ಕಾರ್ಸಿನೋಮಾಗಳಿಗಿಂತ ಹೆಚ್ಚು ಭಿನ್ನವಾಗಿರುವ ಕ್ಯಾನ್ಸರ್ ಇದಾಗಿದೆ. ಹಾಗಾಗಿ ವಿಶೇಷ ಜಾಗೃತಿಯ ಅಗತ್ಯವಿದೆ ಎಂದರು.
ಈ ರೋಗವು ಸರ್ಕೋಮಾ ಮೆಸೆಂಚೈಮಲ್ ಕೋಶಗಳಿರುವ ಅನುವಂಶಿಕ ರೂಪಾಂತರಿಗಳಿಂದ ಬೆಳವಣಿಗೆಯನ್ನು ಹೊಂದುತ್ತದೆ. ನಂತರ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಪ್ರಾಥಮಿಕವಾಗಿ ಶ್ವಾಸಕೋಶ ಮತ್ತು ಯಕೃತ್ತಿನ ಭಾಗದಲ್ಲಿ ಹರಡುತ್ತದೆ. ಮತ್ತು ದಗ್ಧರಸ ಗ್ರಂಥಿಗಳಿಗೂ ಹರಡುತ್ತದೆ. ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಕರ್ಸಿನೋಮಾಗಳಿಗೆ ಹೋಲಿಸಿದರೆ ಸರ್ಕೊಮಾಗಳು ಕಡಿಮೆಯಾಗಿರುತ್ತವೆ.
ಆಸ್ಟಿಯೋಸರ್ಕೋಮಾ ಮತ್ತು ಎವಿಂಗ್ಸ್ ಸರ್ಕೋಮಾದ ವಿವಿಧ ಬಗೆಗಳು ಮಕ್ಕಳು ಹಾಗೂ ಹದಿಹರೆಯವರಲ್ಲಿ, ಲಿಪೋಸಾರ್ಕೋವಾ ಮತ್ತು ಲಿಯೋಮಿಯೋ ಸರ್ಕೋಮಾಗಳು ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತವೆ.
ಸರ್ಕೋಮಾಗೆ ಕಾರಣವಿನ್ನು ಪತ್ತೆಯಾಗಿಲ್ಲ. ಆದರೆ ಇದರಲ್ಲಿ ರೇಡಿಯೇಶನ್ ಹಾಗೂ ಅನುವಂಶಿಕ ಪ್ರವೃತ್ತಿಗಳನ್ನೊಳಗೊಂಡಂತೆ ಕೆಲವು ಅಪಾಯಕಾರಿ ಅಂಶಗಳನ್ನು ಗುರುತಿಸಲಾಗಿದೆ. ಕೈಗಾರಿಕೆಗಳ ರಾಸಾಯನಿಕಗಳು ಇದಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಸರ್ಕೋಮಾಗಳು ನಯವಾಗಿ ಹಾಗೂ ದುಂಡಾದ ರಚನೆಯಿಂದ ಕಂಡುಬರುತ್ತದೆ.
ವಿವಿಧ ಹಂತಗಳಲ್ಲಿ ಕಂಡುಬರುವ ಸರ್ಕೋಮಾ ಕ್ಯಾನ್ಸರ್‌ನ ತೀವ್ರತೆಯ ಆಧಾರದ ಮೇಲೆ ಚಿಕಿತ್ಸಾ ವಿಧಾನ ಅವಲಂಬನೆಗೊಂಡಿರುತ್ತದೆ. ತಡವಾಗಿ ಪತ್ತೆಯಾದರೆ ಗುಣಪಡಿಸುವ ಪ್ರಮಾಣ ಕಡಿಮೆ ಇರುತ್ತದೆ. ಮಕ್ಕಳಲ್ಲಿ ಕಂಡುಬರುವ ಈ ರೋಗವನ್ನು ಕಡಿಮೆ ಮಾಡುವ ಪ್ರಮಾಣ ಹೆಚ್ಚಿದೆ. ಸದ್ಯಕ್ಕೆ ಅತ್ಯುತ್ತಮ ಚಿಕಿತ್ಸೆಗಳು ದೊರಕುವುದರಿಂದ ರೋಗಿಗಳ ಜೀವನಮಟ್ಟ ಹಿಂದಿಗಿಂತಲೂ ಉತ್ತಮವಾಗಿದೆ.
ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾಗಿ ತಜ್ಞ ವೈದ್ಯರಿಂದ ವಿಶೇಷ ಕೇಂದ್ರಗಳಲ್ಲಿ ಚಿಕಿತ್ಸೆ ಸಿಗಬೇಕು. ಧೂಮಪಾನ, ಮದ್ಯಪಾನ ಮಾಡುವಂತಹ ಪ್ರವೃತ್ತಿಯಿಂದ ಹಿಂದೆ ಸರಿದು ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು.
ಲೇಖಕರು: ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ತಜ್ಞ. ಸಂಪ್ರದಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.