ADVERTISEMENT

ಕೋಳಿ, ಹಂದಿ, ದನದ ಮಾಂಸದಲ್ಲಿ ಹೊಸ ಬಗೆಯ ಆಂಟಿಆಕ್ಸಿಡೆಂಟ್‌ಗಳು ಪತ್ತೆ

ಐಎಎನ್ಎಸ್
Published 18 ಫೆಬ್ರುವರಿ 2023, 11:11 IST
Last Updated 18 ಫೆಬ್ರುವರಿ 2023, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ಕೋಳಿ, ಹಂದಿ ಹಾಗೂ ದನದ ಮಾಂಸದಲ್ಲಿ ಹೊಸ ಬಗೆಯ ಆಂಟಿಆಕ್ಸಿಡೆಂಟ್‌ಗಳನ್ನು (ಉತ್ಕರ್ಷಣಗಳು) ಜಪಾನ್ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಈ ಹೊಸ ಬಗೆಯ ಆಂಟಿಆಕ್ಸಿಡೆಂಟ್‌ಗಳು ಮನುಷ್ಯನ ಆಯಾಸವನ್ನು ಕಡಿಮೆ ಮಾಡಲು ಹಾಗೂ ಬುದ್ಧಿಮಾಂದ್ಯತೆ ತಡೆಗಟ್ಟಲು ಸಹಾಯ ಮಾಡುತ್ತವೆ ಎಂದು ಕಂಡುಕೊಳ್ಳಲಾಗಿದೆ.

ಜಪಾನ್‌ನ ಒಸಾಕಾ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯದ ಪ್ರೊ. ಹಿದೇಶಿ ಇಹಾರಾ ನೇತೃತ್ವದ ಸಂಶೋಧನಾ ತಂಡವು ಈ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಸಾಮಾನ್ಯವಾಗಿ ಮಾಂಸ ಮತ್ತು ಮೀನುಗಳಲ್ಲಿ ಆಯಾಸ ನಿಯಂತ್ರಿಸುವ ಆಕ್ಸೋ-ಐಡಿಪಿಗಳು (ಆಂಟಿಆಕ್ಸಿಡೆಂಟ್‌ಗಳು) ಹೇರಳವಾಗಿರುತ್ತವೆ.

ADVERTISEMENT

ಈಗ ಕಂಡುಕೊಂಡಿರುವ ಸಂಶೋಧನೆಗಳಲ್ಲಿ ಕೋಳಿ, ದನ ಹಾಗೂ ಹಂದಿ ಮಾಂಸದಲ್ಲಿ 2-ಆಕ್ಸೋ-ಐಡಿಪಿಗಳು ಪತ್ತೆಯಾಗಿವೆ. ಇದು ಸಾಮಾನ್ಯ ಐಡಿಪಿಗಳಿಗಿಂತ ಹೆಚ್ಚು ಆಮ್ಲಜನಕದ ಪ್ರಮಾಣವನ್ನು ಹೊಂದಿದೆ ಎಂದು ತಿಳಿದು ಬಂದಿದೆ.

ಹೊಸ ಸಂಶೋಧನೆ ಕಂಡುಕೊಂಡಿರುವ ಸಂಗತಿ ಪ್ರಕಾರ ಔಷಧ ವಿಜ್ಞಾನ ಹಾಗೂ ಕೃಷಿ ಕ್ಷೇತ್ರದಲ್ಲಿನ ರಾಸಾಯಿನಿಕ ವಿಭಾಗದ ಬೆಳವಣಿಗೆಗೆ ಸಹಾಯಕವಾಗಬಹುದು ಎಂದು ಪ್ರೊಫೆಸರ್ ಹಿದೇಶಿ ಇಹಾರಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.