ADVERTISEMENT

ನಿಮಿರುವಿಕೆ ಸಮಸ್ಯೆಗೆ ಅಶ್ಲೀಲ ವಿಡಿಯೊ ವೀಕ್ಷಣೆಯೂ ಕಾರಣ!

ಏಜೆನ್ಸೀಸ್
Published 19 ನವೆಂಬರ್ 2019, 9:49 IST
Last Updated 19 ನವೆಂಬರ್ 2019, 9:49 IST
 ಅಶ್ಲೀಲ ವಿಡಿಯೊ (pornography) ವೀಕ್ಷಣೆ
ಅಶ್ಲೀಲ ವಿಡಿಯೊ (pornography) ವೀಕ್ಷಣೆ   

ಲಂಡನ್‌: ಇಂಗ್ಲೆಂಡ್‌ನ ಲೈಂಗಿಕ ಆರೋಗ್ಯ ತಜ್ಞರ ಪ್ರಕಾರ,ಕಾಮ ಪ್ರಚೋದಿತ ದೃಶ್ಯಗಳು ಅಥವಾ ಅಶ್ಲೀಲ ವಿಡಿಯೊ ವೀಕ್ಷಣೆಯ ಚಟಕ್ಕೆ ದಾಸರಾಗಿರುವವರು ನಿಮಿರುವಿಕೆ ದೌರ್ಬಲ್ಯದಿಂದ ಬಳಲುತ್ತಿರುತ್ತಾರೆ.

ಅಪೃಪ್ತಿಕರ ಲೈಂಗಿಕ ಜೀವನ, ಒಂಟಿತನ, ದಂಪತಿಗಳಲ್ಲಿ ವಿರಸ,..ಇಂಥ ಹಲವು ಸಮಸ್ಯೆಗಳಿಗೂ ಅಶ್ಲೀಲ ವಿಡಿಯೊ (pornography) ವೀಕ್ಷಣೆಗೂ ಇರುವ ಸಂಬಂಧದ ಬಗ್ಗೆ ಈಗಾಗಲೇ ಹಲವು ಅಧ್ಯಯನಗಳು ನಡೆದಿವೆ. ವಿಚ್ಛೇದನ ಪಡೆದಿರುವ ಪುರುಷ ಅಥವಾ ಒಂಟಿಯಾಗಿರುವವರು ನಿಮಿರುವಿಕೆ ಸಮಸ್ಯೆಗೆ ಒಳಗಾಗಿರುತ್ತಾರೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿರುವ ಶೇ 80ರಷ್ಟು ಪುರುಷರು ನಿಮಿರುವಿಕೆ ಸಮಸ್ಯೆ ಅನುಭವಿಸಿರುವುದಾಗಿ ಲಂಡನ್‌ ಮೂಲದ ನೂಮ್ಯಾನ್‌ ಕ್ಲಿನಿಕ್‌ ವರದಿಯಲ್ಲಿ ಹೇಳಿದೆ.

'ದಂಪತಿ ನಡುವೆ ಲೈಂಗಿಕ ನಿರಾಸಕ್ತಿ, ಅತೃಪ್ತಿ, ಅಪನಂಬಿಕೆ, ಭಯ ಎಲ್ಲವೂ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದರ ಪರಿಣಾಮವೂ ನಿಮಿರುವಿಕೆ ದೌರ್ಬಲ್ಯಕ್ಕೆ ಕಾರಣವಾಗುತ್ತದೆ' ಎನ್ನುತ್ತಾರೆ ಮನಃಶಾಸ್ತ್ರಜ್ಞರು.

ADVERTISEMENT

ಮಾರ್ಕೆಟ್‌ ರಿಸರ್ಚ್‌ ಸೊಸೈಟಿ ನಡೆಸಿರುವ ಅಧ್ಯಯನದ ವೇಳೆವಿಚ್ಛೇದನ ಪಡೆದಿರುವ 1,000 ಪುರುಷರ ಅಭಿಪ್ರಾಯ ಪಡೆಯಲಾಗಿದೆ. ಲೈಂಗಿಕ ಆರೋಗ್ಯದಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿರುವುದಾಗಿ ಡೈಲಿ ಮೇಲ್‌ ವರದಿ ಮಾಡಿದೆ. ಇವರಲ್ಲಿ ಶೇ 80ರಷ್ಟು ಜನ ನಿಮಿರುವಿಕೆ ದೌರ್ಬಲ್ಯ ಅನುಭವಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಕೆಲಸ ಮತ್ತು ಗುರಿಯ ವಿಚಾರಗಳಲ್ಲಿ ಆಘಾತಗೊಂಡಿರುವ ಪುರುಷನಿಗೆ ಲೈಂಗಿಕ ಕ್ರಿಯೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಅಶ್ಲೀಲ ವಿಡಿಯೊ ವೀಕ್ಷಣೆಯು ನಿಮಿರುವಿಕೆ ದೌರ್ಬಲ್ಯಕ್ಕೆ ಕಾರಣವಾಗುತ್ತದೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.