ADVERTISEMENT

ದಿನ ಭವಿಷ್ಯ: ಈ ರಾಶಿಯವರು ಶುಭ ಸಮಾಚಾರ ಕೇಳುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಡಿಸೆಂಬರ್ 2023, 18:30 IST
Last Updated 31 ಡಿಸೆಂಬರ್ 2023, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಯಾವುದೇ ಅನಿವಾರ್ಯತೆಗಳಿಲ್ಲದೆ ಕೇವಲ ಹಿರಿಮೆಗಾಗಿ ವಿಲಾಸಿ ವಸ್ತುಗಳನ್ನು ಖರೀದಿಸುವಿರಿ. ಸಂಜೆ ಮನೆಗೆ ಒಬ್ಬ ಮುಖ್ಯ ಅತಿಥಿ ಬರುವ ಸಾಧ್ಯತೆ ಇದ್ದು, ಶುಭ ಸಮಾಚಾರ ಕೇಳುವಿರಿ. ಎಲ್ಲರನ್ನೂ ಗೌರವಯುತವಾಗಿ ನೋಡಿ.
  • ವೃಷಭ
  • ರಾಜಕೀಯದಲ್ಲಿ ತಮ್ಮವರಿಂದಲೇ ತೋರಿ ಬರುವ ವಿರೋಧಗಳನ್ನು ಜಾಣ್ಮೆಯಿಂದ ನಿವಾರಿಸಿಕೊಳ್ಳುವ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಿರಿ. ಇಂದು ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಅಧಿಕ ಲಾಭವನ್ನು ಹೊಂದುವಿರಿ.
  • ಮಿಥುನ
  • ವಿದ್ಯಾರ್ಥಿಗಳು ಸರಾಗವಾಗಿ ತಮ್ಮ ಅಭ್ಯಾಸವನ್ನು ಮುಂದುವರಿಸುವುದರಿಂದ ಜಯವನ್ನು ಕಾಣುವರು. ನಿಮಗೆ ವಹಿಸಿದ ಹಣಕಾಸಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ.
  • ಕರ್ಕಾಟಕ
  • ಅನಾವಶ್ಯಕ ಪ್ರಯಾಣ ನಾನಾ ರೀತಿಯ ಅನಾವಶ್ಯಕ ಖರ್ಚು-ವೆಚ್ಚ ಹೆಚ್ಚುಮಾಡಲಿದ್ದು, ಆರ್ಥಿಕ ಬಿಕ್ಕಟ್ಟಿನ ಕಡೆಗೆ ಕಂಡೊಯ್ಯುವಂತಾಗಲಿದೆ. ಯಾವುದಕ್ಕೂ ಆತುರ ಪಡದೆ ಸ್ಥಿತಪ್ರಜ್ಞರಾಗಿ ಕಾರ್ಯ ನಿರ್ವಹಿಸಿ.
  • ಸಿಂಹ
  • ವಸ್ತುಗಳ ರಫ್ತು ವ್ಯವಹಾರ ಮಾಡುವವರಿಗೆ ಕಾರ್ಯದಲ್ಲಿ ತಾಪತ್ರಯಗಳು ಕಾಣಿಸಿಕೊಳ್ಳಲಿದೆ. ನಿಮ್ಮ ಹಲವು ದಿನಗಳ ಕನಸು ಸ್ನೇಹಿತರ ಸಹಾಯದಿಂದ ನೆರವೇರುವುದು. ಶತ್ರು ಬಾಧೆ ನಿವಾರಣೆ ಆಗಲಿದೆ.
  • ಕನ್ಯಾ
  • ಸಾಮಾಜಿಕ ಬದುಕಿನಲ್ಲಿ ಗೌರವಯುತವಾಗಿ ವರ್ತಿಸುವುದನ್ನು ಮರೆಯದಿರಿ. ಸಂಗೀತಗಾರರಿಗೆ ಮತ್ತು ಕ್ರೀಡಾಪಟುಗಳಿಗೆ ಸಾಧನೆಗೆ ಉತ್ತಮ ಅವಕಾಶ ಸಿಗುವುದು. ಸಾಲದ ಹಣ ಈ ದಿನ ಹಿಂತಿರುಗಿ ಬರುವುದು.
  • ತುಲಾ
  • ದಾಂಪತ್ಯದಲ್ಲಿ ಯಾವುದೇ ರೀತಿಯ ಬಿರುಕು ಬರದಂತೆ ನೋಡಿಕೊಳ್ಳಿ. ಧನಾಗಮನದಲ್ಲಿ ವ್ಯತ್ಯಯ, ವಿಳಂಬ ತೋರಿಬರಲಿದೆ. ಸಿದ್ಧ ಉಡುಪು ಮಾರಾಟಗಾರರಿಗೆ ಶುಭದಿನ. ಹಂತ ಹಂತವಾಗಿ ಪ್ರಗತಿ ಪ್ರಾಪ್ತಿಯಾಗುವುದು.
  • ವೃಶ್ಚಿಕ
  • ನಿಮ್ಮ ತೀಕ್ಷ್ಣ ಮಾತುಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುವ ಸಂಧರ್ಭ ಬರಲಿದೆ. ಕ್ರಿಯಾತ್ಮಕವಾಗಿ, ಸೃಜನಶೀಲತೆಯಿಂದ ಕಾರ್ಯ ನಿರ್ವಹಿಸಿ ಹೆಸರು ಗಳಿಸುವಿರಿ. ಮನರಂಜನೆಗಿಂತ ಕೆಲಸದ ಬಗ್ಗೆ ಗಮನವಿರಲಿ.
  • ಧನು
  • ಇಂದು ಪ್ರಭಾವಿ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕಾಗುವುದು. ವೈಯಕ್ತಿಕ ಜೀವನದ ಸಮಸ್ಯೆ ಬಗೆಹರಿದು ಮನಸ್ಸಿಗೆ ನೆಮ್ಮದಿ ಮೂಡಲಿದೆ. ನಿಮ್ಮ ಬಹುಕಾಲಿಕ ಯೋಜನೆಗಳು ಅರ್ಧದಲ್ಲಿ ನಿಲ್ಲುವ ಲಕ್ಷಣಗಳಿದೆ.
  • ಮಕರ
  • ಆರೋಗ್ಯದ ವಿಷಯದಲ್ಲಿ ನಿಮ್ಮ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು, ಪರಿಹರಿಸುವ ಬಗೆ ಕಂಡುಹಿಡಿದರೆ ಉತ್ತಮ. ದೂರದ ಸಂಚಾರ ತೋರಿಬಂದರೂ ಮುಂದೂಡಿಕೆ ಅನಿವಾರ್ಯವಾಗುವುದು.
  • ಕುಂಭ
  • ಒಂದು ಬಾರಿ ನಿರ್ಧರಿಸಿದ ನಿಲುವಿನಿಂದ ಹಿಂದೆ ಸರಿಯುವ ಯೋಚನೆಯನ್ನು ಮಾಡಬೇಡಿ. ಸ್ವಾಧಿಷ್ಟ ಭೋಜನ ಈ ದಿನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ತರಬಹುದು. ನಿಮ್ಮ ಕೆಲಸಗಳನ್ನು ನೀವೇ ನಿರ್ವಹಿಸುವಂತಾಗಲಿದೆ.
  • ಮೀನ
  • ಅತಿ ಉತ್ಸಾಹದಿಂದ ಜೀವನದಲ್ಲಿ ಹೊಸ ತಿರುವೊಂದನ್ನು ಪಡೆದುಕೊಳ್ಳುವಿರಿ. ವಾಹನ ಚಾಲಕರು ಅಥವಾ ಕಬ್ಬಿಣದ ಕೆಲಸ ಮಾಡುವವರು ಜಾಗ್ರತೆಯಿಂದಿರಿ. ಇಂದಿನಿಂದ ಮತ್ತೊಬ್ಬರ ಅವಲಂಬನೆ ಬೇಡವೆನಿಸುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.