ಮೇಧಾವಿ ಜನರೊಂದಿಗಿನ ಸಂಪರ್ಕ ಬೆಳೆಯುವುದರಿಂದ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ಸ್ವಾಮಿ ವೆಂಕಟೇಶನ ಒಲುಮೆಯಿಂದ ಕಷ್ಟಗಳು ಪರಿಹಾರವಾಗುವುದು. ಆಹಾರದಲ್ಲಿ ಗುಣಮಟ್ಟ , ಶುಚಿತ್ವ ಕಾಪಾಡಿ.
ವೃಷಭ
ಮರಮಟ್ಟು, ಕೃಷಿ, ಹೈನುಗಾರಿಕೆ ವೃತ್ತಿಗಳಲ್ಲಿರುವವರಿಗೆ ನಿರೀಕ್ಷಿತ ವರಮಾನ ದೊರೆಯಲಿದೆ. ಕೆಲಸವನ್ನು ಸಾಧಿಸಲು ಹೊಸ ಮಾರ್ಗ ಆರಿಸಿಕೊಳ್ಳಬೇಕಾಗುವುದು. ಕನಸುಗಳು ಕೈಗೂಡುವ ದಿನ ಇದಾಗಿದೆ.
ಮಿಥುನ
ಅಸಾಧ್ಯ ಕಾರ್ಯಗಳನ್ನು ಸಾಧಿಸಿ ತೋರಿಸುವಷ್ಟು ಮನೋಬಲ, ಛಲವನ್ನು ವೃದ್ಧಿಸಿಕೊಳ್ಳಿ. ಮನೆಯಲ್ಲಿ ನವ ಶಿಶುವಿನ ಆಗಮನದಿಂದ ಸಂಭ್ರಮ ಉಂಟಾಗುವುದು. ಆಲಂಕಾರಿಕ ವಸ್ತುಗಳ ಮಾರಾಟ ಲಾಭವನ್ನು ತರುವುದು.
ಕರ್ಕಾಟಕ
ಸುತ್ತಲಿನ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ. ಮಗಳಿಗೆ ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗ ದೊರೆಯಲಿದೆ. ನ್ಯಾಯಾಂಗ ಇಲಾಖೆಯವರಿಗೆ ಬಡ್ತಿ ಅಥವಾ ವರ್ಗಾವಣೆ ಉಂಟಾಗುವುದು.
ಸಿಂಹ
ಸಂತೋಷ ಹೊಂದಿದವರಾಗಿ ಹಾಗೂ ಪ್ರೀತಿ ಪಾತ್ರರೊಂದಿಗೆ ಉತ್ತಮ ಹೊಂದಾಣಿಕೆಯಿಂದ ಇರುವಂತಾಗಲಿದೆ. ಸಹೋದ್ಯೋಗಿಗಳೊಡನೆ ಅನವಶ್ಯಕವಾದ ವಾದ-ವಿವಾದಗಳು ನಡೆಯದಂತೆ ವರ್ತಿಸಿ.
ಕನ್ಯಾ
ದಿನಸಿ ವ್ಯಾಪಾರಿಗಳು ವ್ಯಾಪಾರವನ್ನು ವಿಸ್ತರಣೆ ಮಾಡುವುದಕ್ಕಿಂತ ಗುಣಮಟ್ಟ ಕಾಪಾಡುವ ಬಗ್ಗೆ ಗಮನಹರಿಸಿ. ಜಾಹೀರಾತು ಸಂಸ್ಥೆಯ ಜನರಿಗೆ ವಿಶೇಷ ಆದಾಯ ಇರುವುದು. ಶಿಕ್ಷಕ ವರ್ಗದವರಿಗೆ ಅಧಿಕ ಕೆಲಸ .
ತುಲಾ
ಕೃತಕ ಅಂಗಾಂಗಗಳ ಕಸಿಯನ್ನು ಮಾಡಿಸಿಕೊಂಡಿರುವವರಿಗೆ ಅದರಿಂದಾಗಿ ಆರೋಗ್ಯ ತಪ್ಪುವ ಸಾಧ್ಯತೆ ಇದೆ. ಈ ದಿನ ಆಶಾದಾಯಕ. ಮನೆಯಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿದ್ದು, ಮನಸ್ಸಿಗೆ ನೆಮ್ಮದಿ .
ವೃಶ್ಚಿಕ
ಮುಂಚೆಯೇ ನಿರ್ಧರಿಸಲಾಗಿದ್ದ ಪ್ರಯಾಣವನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡುವ ಅಥವಾ ಕೈಬಿಡುವ ಯೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ದೂರಾಗುವುದು.
ಧನು
ಜೆರಾಕ್ಸ್ ಅಥವಾ ಪ್ರಿಂಟಿಂಗ್ ಪ್ರೆಸ್‌ನವರಿಗೆ ಅತ್ಯಧಿಕ ಮಟ್ಟದ ಗ್ರಾಹಕರು ಬರುತ್ತಾರೆ. ದೇಹದಲ್ಲಿ ವಾಯು ಪೀಡೆಯು ಹೆಚ್ಚಾಗುವುದರಿಂದ ಕಿರಿಕಿರಿ ಎನಿಸಲಿದೆ. ರಸಗೊಬ್ಬರದ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ.
ಮಕರ
ಕೌಟುಂಬಿಕ ಕಲಹವನ್ನು ಬುದ್ಧಿವಂತಿಕೆ ಉಪಯೋಗಿಸಿ ತಿಳಿಗೊಳಿಸಬೇಕಾಗುತ್ತದೆ. ಮನೆ ಬದಲಾಯಿಸುವ ಯೋಚನೆ ಮಾಡಬೇಕಾಗಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಲಾಭವಿರುತ್ತದೆ.
ಕುಂಭ
ಕುಟುಂಬದಲ್ಲಿ ಅಥವಾ ಮನೆಯಲ್ಲಿನ ನಿಮ್ಮ ಮೇಲಿನ ತಪ್ಪು ಕಲ್ಪನೆ ಹೋಗಲಾಡಿಸಿಕೊಳ್ಳುವಿರಿ. ಸಮಯವನ್ನು ವ್ಯರ್ಥ ಮಾಡದಿರಿ. ಮನೆಯ ಜವಾಬ್ದಾರಿಗಳನ್ನು ಮಗನಿಗೆ ಕೊಡುವ ಬಗ್ಗೆ ಯೋಚಿಸಿ.
ಮೀನ
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ, ತಂದೆ-ತಾಯಿಯ ಆರೋಗ್ಯದ ಬಗ್ಗೆ ಗಮನವಹಿಸುವುದು ಅಗತ್ಯ. ವಸ್ತ್ರ ವಿನ್ಯಾಸದಲ್ಲಿ ವಿಶೇಷ ಪರಿಣತಿಯನ್ನು ಪಡೆದುಕೊಳ್ಳಬಹುದು. ಅನಿರೀಕ್ಷಿತ ಪ್ರಯಾಣದಿಂದಾಗಿ ಖರ್ಚು-ವೆಚ್ಚಗಳು ಅಧಿಕ.