ADVERTISEMENT

ದಿನ ಭವಿಷ್ಯ: ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳು ಕಾಣಿಸಲಿವೆ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಡಿಸೆಂಬರ್ 2025, 23:30 IST
Last Updated 4 ಡಿಸೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸ್ನೇಹಿತನಿಂದಾಗಿ ನಡೆದ ಘಟನೆಯು ಮನಸ್ಸಿನಲ್ಲಿ ಮಹತ್ತರ ಬದಲಾವಣೆ ಉಂಟುಮಾಡುತ್ತದೆ. ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ.
  • ವೃಷಭ
  • ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ದೀರ್ಘಾಲೋಚನೆ ಮಾಡುವುದು ಉತ್ತಮ. ಉದ್ಯೋಗದಲ್ಲಿ ಬದಲಾವಣೆ ಬಯಸಿದರೆ ಸ್ವಲ್ಪ ದಿನಗಳ ಕಾಲ ಕಾಯುವುದು ಅವಶ್ಯ.
  • ಮಿಥುನ
  • ದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಭಾಯಿಸಿದ ಪಾತ್ರ ಸಂತೃಪ್ತರನ್ನಾಗಿಸುತ್ತದೆ. ಮಗಳ ಮದುವೆಯ ಮಾತುಕತೆಯಲ್ಲಿ ಮಾತನಾಡುವಾಗ ಬುದ್ಧಿವಂತಿಕೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ.
  • ಕರ್ಕಾಟಕ
  • ಸಹೋದರನ ವ್ಯಾಪಾರ ವಹಿವಾಟುಗಳ ವಿಚಾರಗಳಿಗೆ ಸಹಕಾರವಾಗುವ ಸಲಹೆಗಳನ್ನು ತಿಳಿಹೇಳಬಹುದು. ತೊಂದರೆಗಳೇ ಬರುವ ಕಾರಣ ಕಚೇರಿಯಲ್ಲಿ ಆಯಾಸಗೊಳ್ಳುವಿರಿ.
  • ಸಿಂಹ
  • ತಾರುಣ್ಯದಲ್ಲಿದ್ದಾಗ ಮಾಡಿದ ಬುದ್ಧಿವಂತಿಕೆ ಕೆಲಸವು ವೃದ್ಧಾಪ್ಯದಲ್ಲಿ ಅನುಕೂಲವಾಗಲಿದೆ. ಬಟ್ಟೆಯ ವ್ಯಾಪಾರ ನಡೆಸುವವರು ಉದ್ಯೋಗದಲ್ಲಿ ಬಂಡವಾಳ ಹೂಡುವಂತಹ ಕೆಲಸವನ್ನು ಮಾಡುವುದು ಸಮಂಜಸವಲ್ಲ.
  • ಕನ್ಯಾ
  • ಅಧಿಕ ತಿರುಗಾಟಗಳಿಂದ ದೇಹಾಯಾಸ ಇದ್ದರೂ ಆದಾಯಕ್ಕೆ ಕೊರತೆ ಇರುವುದಿಲ್ಲ. ವ್ಯವಹಾರಿಕವಾಗಿ ಇರುವ ಹಳೆಯ ಬಾಕಿ ಮೊತ್ತ ಕೈ ಸೇರಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳು ಕಾಣಿಸಲಿವೆ.
  • ತುಲಾ
  • ವ್ಯವಹಾರದಲ್ಲಿ ಹೊರರಾಜ್ಯದ ಮುಖ್ಯ ವ್ಯಕ್ತಿಯೊಬ್ಬರ ಪರಿಚಯ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು. ರಾಜಕೀಯ ರಂಗದವರಿಗೆ ವರಿಷ್ಠರೊಂದಿಗಿನ ಮಾತುಕತೆ ಅನುಕೂಲ ಉಂಟುಮಾಡಲಿದೆ.
  • ವೃಶ್ಚಿಕ
  • ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ತೋರಿಬಂದರೂ ಬುದ್ಧಿಬಲದಿಂದ ಮತ್ತು ಶ್ರದ್ಧೆಯಿಂದ ಆಲಿಸುವುದರಿಂದ ಫಲಿತಾಂಶಕ್ಕೆ ಚ್ಯುತಿ ಬರುವುದಿಲ್ಲ. ಕೌಟುಂಬಿಕ ವೈಮನಸ್ಸನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ.
  • ಧನು
  • ಮೇಲಿರುವ ಜವಾಬ್ದಾರಿಗಳನ್ನು ಇತರರ ಮೇಲೆ ದಾಟಿಸುವಂಥ ಪ್ರಯತ್ನಗಳನ್ನು ಮಾಡಲು ಹೋಗದಿರಿ. ಸಿಹಿ ಖಾದ್ಯಗಳನ್ನು ಸೇವಿಸುವ ಯೋಗ ಇದೆ. ದಾಂಪತ್ಯ ಜೀವನ ಸುಖಮಯವಾಗಿರುವುದು.
  • ಮಕರ
  • ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಬಂಡವಾಳ ತೊಡಗಿಸುವುದು ಸರಿಯಲ್ಲ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಪದವೀಧರರಿಗೆ ಸನ್ಮಾನದಂತಹ ಗೌರವ ದೊರಕಲಿದೆ.
  • ಕುಂಭ
  • ಹಿಂದೊದು ದಿನ ಬದುಕಿನಲ್ಲಿ ನಡೆದ ಅತ್ಯಂತ ಮುಖ್ಯಘಟ್ಟವನ್ನು ಕಾರಣಾಂತರದಿಂದ ಸ್ಮರಣೆ ಮಾಡುವಿರಿ. ಮಾನಸಿಕ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಮಾತನಾಡಿ. ವ್ಯವಹಾರವು ಲಾಭದ ಪಥದಲ್ಲಿರುವುದು.
  • ಮೀನ
  • ಆರೋಪದ ಮಾತುಗಳು ಒಬ್ಬರ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂಬುದಕ್ಕೆ ಸಂಬಂಧಿಗಳ ಜೀವನ ಸಾಕ್ಷಿಯಾಗಲಿದೆ. ಕಷ್ಟವಾದ ಕೆಲಸಗಳನ್ನು ಸರಳೀಕರಿಸಿಕೊಳ್ಳುವ ಸರ್ವಪ್ರಯತ್ನ ನಡೆಸುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.