ADVERTISEMENT

ದಿನ ಭವಿಷ್ಯ: ಆಧ್ಯಾತ್ಮ ಚಿಂತಕರಿಗೆ ವಿಶೇಷವಾದ ದಿನ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಆಗಸ್ಟ್ 2024, 0:05 IST
Last Updated 6 ಆಗಸ್ಟ್ 2024, 0:05 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ದೂರದ ಸಂಚಾರ ತೋರಿಬಂದರೂ ಅದನ್ನು ಮುಂದೂಡುವುದು ಅನಿವಾರ್ಯ. ಗಂಡನ ಹಣಕಾಸಿನ ಪರಿಸ್ಥಿತಿಗೆ  ಶ್ರಮಿಸಿ ಸಹಕರಿಸಬೇಕಾದಂತೆ ಆಗುವುದು. ವಾಣಿಜ್ಯ ಅಥವಾ ಆರ್ಥಿಕ ಒಪ್ಪಂದಗಳು ಏರ್ಪಡುವುದು.
  • ವೃಷಭ
  • ಗೃಹ ನಿರ್ಮಾಣ ಕಾರ್ಯವು ಆಮೆಯ ವೇಗದಲ್ಲಿ ಸಾಗುವುದರಿಂದ ಮನಸ್ಸಿಗೆ ತುಸು ತಳಮಳ, ಹೆದರಿಕೆ, ಆತಂಕ ಮೂಡಲಿದೆ. ಕುಟುಂಬದ ಆಂತರಿಕ ಸಮಸ್ಯೆ ಸಾಮರಸ್ಯದಿಂದ ಬಗೆಹರಿಯಲಿದೆ.
  • ಮಿಥುನ
  • ಮನೆಯವರಿಗೆ ನಿರ್ಧಾರವನ್ನು ಸ್ಪಷ್ಟ ಹಾಗೂ ಮೃದುವಾದ ಮಾತುಗಳಲ್ಲಿ ತಿಳಿಸಿ.ಹಲವು ದಿನಗಳಿಂದ ಇದ್ದಂತಹ ಹಂಬಲವು ಮಿತ್ರರ ಸಹಾಯದಿಂದ ನೆರವೇರುವುದು. ಹಲ್ಲಿನ ಆರೋಗ್ಯ ಗಮನಿಸಿ.
  • ಕರ್ಕಾಟಕ
  • ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಹೆಂಡತಿಯ ಬಳಗದಲ್ಲಿ ಆದಷ್ಟು ಮೌನವಾಗಿರಲು ನಿಶ್ಚಯಿಸಿ. ಧಾನ್ಯಗಳ ರಫ್ತು ಮಾರಾಟಗಾರರು  ಅನುಕೂಲವನ್ನು ಪಡೆಯುವಿರಿ. ಕಪ್ಪು ಬಣ್ಣವು ಅದೃಷ್ಟ ಬದಲಾಯಿಸಲಿದೆ.
  • ಸಿಂಹ
  • ಮಗನ ಮುಂದಿನ ಓದಿನ ವಿಷಯ  ಚರ್ಚೆಗೆ ಬರುವುದು. ಅಸಹಾಯಕ ಪರಿಸ್ಥಿತಿಯಲ್ಲಿರುವ ನೀವು ಪರಿಣತರ ಸಲಹೆಗಳೊಂದಿಗೆ ಗಣಪತಿಯ ಆರಾಧನೆಯಿಂದ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ.
  • ಕನ್ಯಾ
  • ಕಲಾಕಾರರಿಗೆ ಕಲೆಯ ಪ್ರದರ್ಶನದಿಂದ ಪ್ರಶಂಸೆ ಮತ್ತು ಗೌರವಾದರಗಳಿಂದ ಮನೋಲ್ಲಾಸ ಉಂಟಾಗುವುದು. ಈ ದಿನದ  ಘಟನೆ ಭಾವುಕರನ್ನಾಗಿ ಮಾಡಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
  • ತುಲಾ
  • ರಸಗೊಬ್ಬರ ಮತ್ತು ಕೀಟನಾಶಕಗಳನ್ನು ವ್ಯಾಪಾರ ಮಾಡುವವರಿಗೆ ಲಾಭದ ಜತೆ ಆಯಾಸವೂ ಕಾಡಲಿದೆ. ಸಿನಿಮಾ ರಂಗಕ್ಕೆ ಸೇರಿಕೊಳ್ಳುವ ಬಗ್ಗೆ ಯೋಚಿಸುವವರಿಗೆ ಈ ದಿನ ಸುದಿನ. ಹೋರಾಟದಿಂದ ಯಶಸ್ಸು ಲಭಿಸಲಿದೆ.
  • ವೃಶ್ಚಿಕ
  • ಮಾತಿನ ಚತುರತೆಯಿಂದ ಕೆಲಸಗಳು ಸರಾಗವಾಗಿ ನೆರವೇರುವುದು.  ಉತ್ತಮ ಕಾರ್ಯದಿಂದ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗುವಿರಿ. ಸ್ವತ್ತಿನ ವಿಚಾರದಲ್ಲಿ ಬಂಧುಗಳು ನೆರವಿಗೆ ಬರುವರು.
  • ಧನು
  • ಅಸಾಧ್ಯ ಕಾರ್ಯ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ.  ಶತ್ರುಗಳ ಬಣ್ಣ ಬಯಲಾಗುವುದುಸಂತೋಷಕ್ಕೆ ಕಾರಣವಾಗುತ್ತದೆ. ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರ ನಡೆಯುವುದು.
  • ಮಕರ
  • ಉದ್ಯೋಗದಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ಮಾಡುವವರು  ಜಾಗ್ರತರಾಗಿರಿ. ಕೋರ್ಟು ವ್ಯವಹಾರಗಳನ್ನು ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳುವಿರಿ. ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು ಕಂಡುಬರುವುದು.
  • ಕುಂಭ
  • ಅಣ್ಣ ತಮ್ಮಂದಿರ ನಡುವಿನ ವಿಚಾರದಲ್ಲಿ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಅನ್ನದಾನ ಮಾಡುವ ಯೋಚನೆಗಳು  ಬರಲಿವೆ.
  • ಮೀನ
  • ಸಂಕೋಚವಿಲ್ಲದೆ ನೂತನ ಕಾರ್ಯಭಾರವನ್ನು ಹೆಗಲಿಗೇರಿಸಿಕೊಳ್ಳಿ. ಗಣಿತತಜ್ಞರಿಗೆ, ಆಧ್ಯಾತ್ಮ ಚಿಂತಕರಿಗೆ ವಿಶೇಷವಾದ ದಿನವೆನಿಸಲಿದೆ. ಭೂ ವ್ಯವಹಾರ ಪೂರ್ಣಗೊಂಡು ಹಣ ಕೈ ಸೇರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.