ADVERTISEMENT

ದಿನ ಭವಿಷ್ಯ: ನಿಮ್ಮಲ್ಲಿ ನೈತಿಕ ಧೈರ್ಯ ಹೆಚ್ಚುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಮೇ 2024, 18:30 IST
Last Updated 10 ಮೇ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಇಷ್ಟು ದಿನ ನೀವು ಲೀಲಾಜಾಲವಾಗಿ ಮಾಡುತ್ತಿದ್ದ ಕೆಲಸಗಳು ಇವತ್ತಿನ ಕಾರ್ಯ ಒತ್ತಡದಿಂದ ಕೈಕಟ್ಟುವಂತಾಗುತ್ತದೆ. ಹೂವು ಬೆಳೆಗಾರರು ಹುಳಗಳ ಕಾಟಕ್ಕೆ ಕಷ್ಟಕ್ಕೆ ಒಳಪಡುವಂಥ ಸಾಧ್ಯತೆಗಳು ಹೆಚ್ಚಾಗಿವೆ.
  • ವೃಷಭ
  • ನಿಯಮಿತ ಯೋಗಾಸನ ಹಾಗೂ ಪ್ರಾಣಾಯಮದ ಅಭ್ಯಾಸದಿಂದಾಗಿ ದಿನವು ಲವಲವಿಕೆಯಿಂದಿರಿ. ನಿರ್ಜಲೀಕರಣದಿಂದಾಗಿ ಚರ್ಮವು ಸುಕ್ಕುಗಟ್ಟಿದಂತಾಗಬಹುದು. ಎಚ್ಚರವಹಿಸಿರಿ.
  • ಮಿಥುನ
  • ವಿದ್ಯಾರ್ಥಿಗಳು ಸೋಂಬೇರಿತನವನ್ನು ಬಿಟ್ಟು ಅಧ್ಯಯನವನ್ನು ಮಾಡುವುದು ಶ್ರೇಯಸ್ಸಿನ ಪಥದಲ್ಲಿ ಕರೆದುಕೊಂಡು ಹೋಗುತ್ತದೆ. ಅನಿರೀಕ್ಷಿತ ಉಡುಗೊರೆ ದೊರೆಯುವ ಸಂಭವವಿದೆ.
  • ಕರ್ಕಾಟಕ
  • ಜೀವನದಲ್ಲಾದ ಕಹಿ ಘಟನೆಗಳನ್ನು ಮರೆತು ನಿತ್ಯದ ಬದುಕನ್ನು ಸರಾಗವಾಗಿ ನಡೆಸುವಿರಿ. ಕಲಾವಿದರಿಗೆ ಒಳ್ಳೆಯ ಅವಕಾಶಗಳು ಕೂಡಿ ಬರುವ ಸಾಧ್ಯತೆಗಳಿವೆ. ರಾಜಕಾರಣದಿಂದ ಅನುಕೂಲವಾಗುತ್ತದೆ.
  • ಸಿಂಹ
  • ಮೊದಲು ಕೊಟ್ಟ ಮಾತಿನಂತೆ ಕಾರಣಾಂತರದಿಂದ ನಡೆದುಕೊಳ್ಳಲಾಗದೆ ಮನಸ್ಸಿಗೆ ನೋವಾಗಬಹುದು. ಸುಸ್ಥಿರವಾಗಿರುವ ಆಸ್ತಿಯ ಮೇಲೆ ಇತರರ ಕಣ್ಣು ಬೀಳದಂತೆ ಎಚ್ಚರವಹಿಸುವುದು ಮುಖ್ಯ.
  • ಕನ್ಯಾ
  • ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇತರರ ವಿಷಯಗಳಲ್ಲಿ ಮೂಗು ತೂರಿಸದೆ ಅಧ್ಯಯನದಲ್ಲಿ ಗಮನವಿಡಿ. ನಿಮ್ಮ ಸಾಲ ವಸೂಲಿ ಕಾರ್ಯಕ್ರಮಕ್ಕೆ ಆತಂಕಗಳು ಎದುರಾಗುವ ಸಂಭವವಿದೆ.
  • ತುಲಾ
  • ಆದರ್ಶಗಳನ್ನೆ ದರ್ಪಣದಂತೆ ಅನುಸರಿಸುತ್ತಿರುವ ಸಂತತಿಯನ್ನು ಕಂಡು ಹೆಮ್ಮೆ ಎಂದೆನಿಸುತ್ತದೆ. ಬಟ್ಟೆ ಅಂಗಡಿಯವರಿಗೆ ಲಾಭದಾಯಕ ದಿನವಾಗಲಿದೆ. ಪರಿಶ್ರಮಕ್ಕೆ ತಕ್ಕ ಫಲ ದೊರಕಿ ಸಂತಸ ಹೊಂದುವಿರಿ.
  • ವೃಶ್ಚಿಕ
  • ಕೆಲಸದ ಗಡಿಬಿಡಿಯಿಂದಾಗಿ ಕೈಕಾಲುಗಳನ್ನು ಪೆಟ್ಟು ಮಾಡಿಕೊಳ್ಳುತ್ತಿರುವ ಸಂಭವವಿದೆ. ನಿಮ್ಮಲ್ಲಿ ನೈತಿಕ ಧೈರ್ಯ ಹೆಚ್ಚುವುದು. ಕೆಲಸದಲ್ಲಿ ಮಕ್ಕಳ ಸಹಕಾರದಿಂದ ಕೆಲಸಗಳು ಅಚ್ಚುಕಟ್ಟಾಗಿ ಮುಗಿಯುವುದು.
  • ಧನು
  • ಧರ್ಮದ ವಿರುದ್ಧವಾಗಿ ಇರುವ ಆಚರಣೆಗಳನ್ನು ಮುಂದಿನ ಸಂತತಿಯವರೆ ವಿರೋಧಿಸುತ್ತಾರೆ. ಇಷ್ಟರ ತನಕ ಬಾರದೆ ಇದ್ದ ಸಂಬಂಧಿಕರ ಇಂದಿನ ಆಗಮನವು ಆಶ್ಚರ್ಯದ ಜೊತೆ ಸಂತಸವನ್ನು ತರುತ್ತದೆ.
  • ಮಕರ
  • ವಿದ್ಯಾವಂತರಾಗಿ ಅವಿವೇಕದ ಕೆಲಸಗಳನ್ನು ಮಾಡಿಕೊಂಡು ಕುಟುಂಬದವರೆದುರು ತಲೆ ತಗ್ಗಿಸುವಂತೆ ಮಾಡಿಕೊಳ್ಳಬೇಡಿ. ಕೆಲಸದ ಒತ್ತಡದಿಂದ ಶಿರೋವೇದನೆ ಬರಬಹುದು.
  • ಕುಂಭ
  • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಧನ್ಯತಾ ಭಾವ ಉಂಟಾಗುತ್ತದೆ. ಬಂಧು ಮಿತ್ರರ ಜೊತೆಯ ಒಡನಾಟ ಸಂತೋಷ ತರುವುದು. ಅಜೀರ್ಣ ಹಾಗೂ ಪಿತ್ತದ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ.
  • ಮೀನ
  • ಬದಲಾಗದೆ ಇರುವ ಮೊಂಡು ತೀರ್ಮಾನಗಳ ಬಗ್ಗೆ ಕುಟುಂಬದವರಿಂದ ಅಸಮಾಧಾನ ವ್ಯಕ್ತವಾಗಬಹುದು. ತಾಯಿಯ ಬುದ್ಧಿಯ ಮಾತುಗಳನ್ನು ತಪ್ಪಾಗಿ ತೆಗೆದುಕೊಳ್ಳುವುದು ಸರಿಯಲ್ಲ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.