ADVERTISEMENT

ದಿನ ಭವಿಷ್ಯ: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆ ಇಡಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಜುಲೈ 2024, 23:54 IST
Last Updated 10 ಜುಲೈ 2024, 23:54 IST
   
ಮೇಷ
  • ನಿಮ್ಮದೆ ತಪ್ಪುಗಳಿರುವಾಗ ಅದನ್ನು ಸರಿಪಡಿಸುವವರ ಮೇಲೆ ಬೇಸರ ಮಾಡಿಕೊಳ್ಳುವುದು ಸೂಕ್ತವಲ್ಲ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭದ ದಿನ. ಆಸ್ತಿಗಾಗಿ ಆಸೆ ಪಡುವುದು ಸರಿಯಲ್ಲ.
  • ವೃಷಭ
  • ಆತ್ಮವಿಶ್ವಾಸ ಹೆಚ್ಚಲಿದೆ. ದೃಢ ನಿಶ್ಚಯ ಮತ್ತು ಸಾಧಿಸಲೇಬೇಕೆಂಬ ಛಲದ ಮನೋಭಾವ ಯಶಸ್ಸಿಗೆ ಕಾರಣವೆನಿಸಲಿದೆ. ಕೇಶವಿನ್ಯಾಸಗಾರರು ಇತರರರೊಂದಿಗೆ ಸ್ಪರ್ಧಿಸಬೇಕಾಗುತ್ತದೆ.
  • ಮಿಥುನ
  • ಸಾಂಸಾರಿಕವಾಗಿ ಅಥವಾ ವೈಯಕ್ತಿಕವಾಗಿ ಕೆಲವು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವಿರಿ. ಎಂಜಿನಿಯರ್‌ಗಳಿಗೆ ಬಿಡುವಿಲ್ಲದ ದಿನ‌. ಸಾಕುಪ್ರಾಣಿಯ ಸಂಖ್ಯೆ ಹೆಚ್ಚಾಗುವುದು.
  • ಕರ್ಕಾಟಕ
  • ಅದ್ದೂರಿಯ ಮದುವೆಯಲ್ಲಿ ಮಕ್ಕಳು ಮಾಡಿದ ಖರ್ಚು–ವೆಚ್ಚಗಳು ದುಂದುವೆಚ್ಚದಂತೆ ಕಾಣುತ್ತದೆ. ಅನಿರೀಕ್ಷಿತವಾಗಿ ಅಸಮಾಧಾನಗಳೆಲ್ಲವೂ ಮಾತಿನಲ್ಲಿ ಹೊರ ಬರುವವು.
  • ಸಿಂಹ
  • ಕಣ್ಣಿನ ಆರೋಗ್ಯದ ವಿಚಾರವಾಗಿ ಕಾಳಜಿ ವಹಿಸಿದರೂ ವೈದ್ಯರ ಭೇಟಿ ನಿಯಮಿತವಾಗಿ ಮಾಡುವುದು ತಪ್ಪದು. ಕೆಲವರು ಮಾಡುವ ಅನಾಹುತವನ್ನು ನೀವು ನಿಲ್ಲಿಸದೇ ಬೇರೆಯ ಹಾದಿ ಇಲ್ಲವಾಗಿರುತ್ತದೆ.
  • ಕನ್ಯಾ
  • ಮಧ್ಯವರ್ತಿಗಳ ಅತಿ ಆಸೆಯಿಂದ ರೈತರಿಗೆ ಲಾಭವಿರುವುದಿಲ್ಲ. ಜಾಗರೂಕತೆಯಿಂದ ಹೆಜ್ಜೆ ಇಡಿ. ಮಂಗಳ ಕಾರ್ಯಗಳು ಜರಗುವಾಗ ಅಸಾಂದರ್ಭಿಕ ಮಾತುಗಳನ್ನು ಆಡದಿರಿ.
  • ತುಲಾ
  • ಸಹೋದ್ಯೋಗಿಯ ನೆರವಿನಿಂದ ಕಾರ್ಯಗಳು ಅಚ್ಚುಕಟ್ಟಾಗಿ ಮನಸ್ಸಿಗೆ ಹಿತ ಕೊಡುವ ರೀತಿಯಲ್ಲಿ ಪೂರ್ಣಗೊಳ್ಳಲಿವೆ. ತಿಳಿಯದೇ ನಿಮ್ಮಿಂದಾದ ತಪ್ಪುಗಳಿಗಾಗಿ ಜೀವನ ಪರ್ಯಂತ ಸಮಸ್ಯೆ ಪಡುವಂತಾಗುತ್ತದೆ.
  • ವೃಶ್ಚಿಕ
  • ಕೆಲವು ಸಮಸ್ಯೆಗಳನ್ನು ಹಿರಿಯರಲ್ಲಿ ಹೇಳುವುದರಿಂದಾಗಿ ಸಮಾಧಾನವಾಗುವುದು. ಇತರರ ಮೇಲಿನ ಜವಾಬ್ದಾರಿಗಳು ಹೆಚ್ಚಾದ ಕಾರಣ ಅನಾರೋಗ್ಯವನ್ನು ನಿರ್ಲಕ್ಷಿಸಬೇಕಾಗುತ್ತದೆ.
  • ಧನು
  • ಕುಟುಂಬದಲ್ಲಿ ಹಿಂದೆ ನಡೆದ ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದು ಭಿನ್ನಾಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ. ಬರೀಯ ಮೃದು ಮಾತುಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ.
  • ಮಕರ
  • ಶಿಬಿರಗಳಲ್ಲಿ ಭಾಗವಹಿಸಿದ ಕಾರಣ ಚಟುವಟಿಕೆಯಿಂದಿರುವ ಮಕ್ಕಳು ನಿಮ್ಮ ಮನಸ್ಸಂತೋಷಕ್ಕೆ ಕಾರಣವಾಗಿರುತ್ತಾರೆ. ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಹೊಸತನವನ್ನು ಕಂಡುಕೊಳ್ಳುವಿರಿ.
  • ಕುಂಭ
  • ಚಕ್ರವ್ಯೂಹದಲ್ಲಿ ಸಿಲುಕಿದ ನಿಮಗೆ ಅದನ್ನು ಭೇದಿಸುವ ಉಪಾಯವೂ ಮಿತ್ರರಿಂದ ಸಿಗುತ್ತದೆ. ನಿರೀಕ್ಷೆಯಲ್ಲಿರುವ ಕುಟುಂಬದ ವ್ಯಕ್ತಿಗಳು ಬಿಗುವಿನ ದಿನಚರಿಯಿಂದಾಗಿ ಬೇಸರಗೊಳ್ಳುವರು.
  • ಮೀನ
  • ಮುಕ್ತ ಭಾವನೆಯಿಂದ ನೀವಾಡಿದ ಮಾತುಗಳು ಉಳಿದವರಿಗೆ ಅಧಿಕ ಪ್ರಸಂಗದಂತೆ ತೋರುವುದರಲ್ಲಿ ಸಂಶಯವಿಲ್ಲ. ತಿಳಿವಳಿಕೆಯ ಮಾತು ಒಬ್ಬರ ಜೀವನವನ್ನು ಉದ್ಧರಿಸುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.