ದಿನ ಭವಿಷ್ಯ: ಈ ರಾಶಿಯವರು ವಂಶಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಏಳಿಗೆ ಕಾಣುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
ದಿನ ಭವಿಷ್ಯ
ಮೇಷ
ನಿರಂತರ ಕೆಲಸ ಕಾರ್ಯಗಳ ಮಧ್ಯೆ ಸ್ವಲ್ಪಮಟ್ಟಿನ ಬಿಡುವು ಆರಾಮವೆನಿಸುವುದು. ಕಚೇರಿಯಲ್ಲಿ ಎಲ್ಲರೊಂದಿಗೆ ಸಂತೋಷವಾಗಿರಿ. ರಚನಾತ್ಮಕ ಕೆಲಸಗಳಿಗೆ ಪ್ರಾಶಸ್ತ್ಯ ಕೊಡುವುದರಿಂದ ಸಂತಸ.
ವೃಷಭ
ಅನಿವಾರ್ಯವಾಗಿ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ ಸುಲಭವಾಗಿ ನಡೆಯುವುದಿಲ್ಲ. ಮೊದಲ ಆದ್ಯತೆ ವೃತ್ತಿಪರ ಕೆಲಸಗಳ ಬಗೆಗೆ ಮಾತ್ರ ಇರಲಿ.
ಮಿಥುನ
ಲಾಭದಾಯಕ ಎನಿಸುವ ಕೆಲಸ ಅಥವಾ ವ್ಯಕ್ತಿಗಳೊಂದಿಗೆ ಮಾತ್ರ ವ್ಯವಹರಿಸಿದ ಪರಿಣಾಮ ಪಶ್ಚಾತಾಪ ಪಡುವಂತಾಗುವುದು. ಅಸಹಕಾರ, ಏಕಾಂಗಿತನ ಕಾಡಬಹುದು. ಶ್ರೀರಾಮನ ಆರಾಧನೆ ಮಂಗಳಕರ.
ಕರ್ಕಾಟಕ
ಹಣದ ಮುಗ್ಗಟ್ಟು ತೀವ್ರವಾಗುವುದು. ಅಧಿಕಾರಸ್ಥರು ಹಿರಿಯ ನೌಕರರ ಜತೆ ಸ್ನೇಹ ಸಂಬಂಧ ಹೆಚ್ಚಾಗಿ ಬೆಳೆದು ವೃತ್ತಿಯಲ್ಲಿ ನವ ಉಲ್ಲಾಸ ಮೂಡಲಿದೆ. ಕುಲದೇವರ ಪ್ರಾರ್ಥನೆಯು ಶುಭತರುವುದು.
ಸಿಂಹ
ಮಾತಿನ ಚತುರತೆಯಿಂದ ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರಲಿವೆ. ಪದವೀಧರರಿಗೆ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಸ್ಥಳ ಲಭಿಸಲಿದೆ. ಅಧ್ಯಯನಕ್ಕೆ ಪ್ರೋತ್ಸಾಹ ದೊರೆಯಲಿದೆ. ಶ್ರೀ ದುರ್ಗಾದೇವಿಯನ್ನು ಭಜಿಸಿ.
ಕನ್ಯಾ
ವಂಶಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಏಳಿಗೆ ಕಾಣುವಿರಿ. ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಇರುವುದು. ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿಕೊಂಡ ಸಂತಸ ಇರಲಿದೆ.
ತುಲಾ
ದೈಹಿಕವಾಗಿ ಬಲಾಢ್ಯರಾಗಿರುವ ನಿಮಗೆ ಮಾನಸಿಕವಾಗಿ ಬಹಳ ದೊಡ್ಡ ಹೊಡೆತ ಬೀಳುವ ಸಂಭವವಿದೆ. ವಾಣಿಜ್ಯ ಅಥವಾ ಆರ್ಥಿಕ ಒಪ್ಪಂದಗಳು ಏರ್ಪಡಲಿವೆ. ರಾಜಕೀಯ ವ್ಯಕ್ತಿಗಳಿಂದ ಕಾರ್ಯ ಸಾಧಿಸಿಕೊಳ್ಳುವುದು ಕಷ್ಟ.
ವೃಶ್ಚಿಕ
ಜೀವನದ ಶೈಲಿಯಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸಲಿದೆ. ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿಯೇ ಇರುತ್ತದೆ. ಯಾವುದೇ ಸಂಶಯಬೇಡ. ಇಂದಿನ ಎಲ್ಲಾ ಘಟನೆಗಳು ಶುಭಕರ.
ಧನು
ಅನಾರೋಗ್ಯದಿಂದ ಬಳಲಿದ ನೀವು ಇಂದಿನಿಂದ ಚೇತರಿಕೆ ಕಾಣುವಿರಿ, ಮತ್ತೊಬ್ಬರ ಮೇಲೆ ಅವಲಂಬನೆ ಬೇಡವೆನಿಸುತ್ತದೆ. ಕೆಲಸ ಮಾಡುತ್ತಿರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ. ಕೂಡಲೇ ಬಗೆಹರಿಸಿಕೊಳ್ಳಿರಿ.
ಮಕರ
ಸಾಧ್ಯವಾದಷ್ಟು ಶಾಂತಿಯಿಂದ ಕೆಲಸವನ್ನು ಸಾಧಿಸಿ. ಕುಟುಂಬ ಸದಸ್ಯರ ಅಭಿಪ್ರಾಯಗಳ ಬಗ್ಗೆ ಚಿಂತಿಸಿ ನಂತರ ಮನ್ನಣೆ ನೀಡಿ. ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಫಲಿತಾಂಶ ದೊರೆಯಲಿದೆ.
ಕುಂಭ
ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ ಅಂಜದೆ ಮುನ್ನುಗ್ಗಿದರೆ ಮಾತ್ರ ಜಯದ ದಾರಿ ಕಾಣುವುದು. ಪ್ರಯತ್ನದಲ್ಲಿ ಕೊರತೆ ಬೇಡ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಗಮನಹರಿಸಬೇಕು.
ಮೀನ
ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಸದ್ಯದ ಪರಿಸ್ಥಿತಿಗೆ ಉತ್ತಮವಾಗಿ ಕಾಣುತ್ತದೆ. ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ. ಷೇರು ವ್ಯವಹಾರಗಳಲ್ಲಿ ಹೆಚ್ಚು ಹಣ ತೊಡಗಿಸಬಹುದು.