ADVERTISEMENT

ದಿನ ಭವಿಷ್ಯ: ವ್ಯವಹಾರಗಳಲ್ಲಿ ಸಲಹೆಗಳನ್ನು ಪಡೆದುಕೊಂಡಲ್ಲಿ ಯಶಸ್ವಿಯಾಗುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಫೆಬ್ರುವರಿ 2026, 18:30 IST
Last Updated 11 ಫೆಬ್ರುವರಿ 2026, 18:30 IST
   
ಮೇಷ
  • ಕುಟುಂಬದವರೊಡನೆ ಸಂತೋಷದಲ್ಲಿ ಇರಬೇಕೆಂಬ ಆಲೋಚನೆಗೆ ಒಂದು ಅಡ್ಡಿ ಎದುರಾಗಲಿದೆ. ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯಲಿವೆ.
  • ವೃಷಭ
  • ಮಗನ ಸಹಾಯದಿಂದ ಸಂಬಂಧಿಕರೊಬ್ಬರ ಕೆಲಸ ಕೈಗೂಡುವುದರಿಂದ ಹೆಚ್ಚಿನ ಸಂತಸವಿರುವುದು. ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಸಾಲ ತೆಗೆದುಕೊಳ್ಳಬೇಡಿ.
  • ಮಿಥುನ
  • ಕೆಲವು ಸವಾಲುಗಳನ್ನು ಎದುರಿಸುವ ಸಂದರ್ಭಗಳು ನಿಮಗೆ ಎದುರಾಗಬಹುದು ಮತ್ತು ಅದರಲ್ಲಿ ಸಮ್ಮಿಶ್ರ ಫಲಿತಾಂಶವನ್ನು ಪಡೆಯುವಂತಾಗಲಿದೆ. ವ್ಯಾಪಾರಿಗಳಿಗೆ ಸಾಧಾರಣ ಲಾಭ .
  • ಕರ್ಕಾಟಕ
  • ನಿರುದ್ಯೋಗಸ್ಥರಿಗೆ ಹೊರರಾಜ್ಯವೊಂದರಲ್ಲಿ ಕೆಲಸ ನಿರ್ವಹಿಸುವ ಅವಕಾಶ ಎದುರಾದರೆ ಒಪ್ಪಿಕೊಳ್ಳಿ. ಸಹೋದರ ಸಹೋದರಿಯರ ಬಾಂಧವ್ಯ ಗಟ್ಟಿಯಾಗುವ ಘಟನೆ ನಡೆಯಲಿದೆ.
  • ಸಿಂಹ
  • ಚಿತ್ರಕಲೆಯಲ್ಲಿನ ಆಸಕ್ತಿಯಿಂದಾಗಿ ಕಲಿಕೆಗಾಗಿ ವಿಶೇಷ ತರಗತಿಗೆ ಕಳುಹಿಸಲು ತಂದೆಯವರಿಂದ ಒಪ್ಪಿಗೆ ದೊರೆಯುವುದು. ಹೋಮ-ಹವನಾದಿ ಧಾರ್ಮಿಕ ಕೆಲಸದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ.
  • ಕನ್ಯಾ
  • ಸತ್ಯನಾರಾಯಣ ಸ್ವಾಮಿಯ ಸೇವೆ ಮಾಡುವುದರಿಂದ ಜಟಿಲ ಸಮಸ್ಯೆಗಳು ಸೌಹಾರ್ದ ಯುತವಾಗಿ ಬಗೆಹರಿಯಲಿವೆ. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು ಲಾಭ ಪಡೆದುಕೊಳ್ಳುವಿರಿ.
  • ತುಲಾ
  • ವೈದ್ಯರು ಅದರಲ್ಲೂ ನರರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ಬೇಜವಬ್ದಾರಿತನ ತೋರದಿರಿ. ಬಹುದಿನಗಳಿಂದ ಕೂಡಿಟ್ಟ ಹಣದಿಂದ ಬಂಗಾರ ಖರೀದಿಸುವ ಮನಸ್ಸಾಗಲಿದೆ.
  • ವೃಶ್ಚಿಕ
  • ವ್ಯವಹಾರಗಳಲ್ಲಿ ಸಲಹೆಗಳನ್ನು ಪಡೆದುಕೊಂಡಲ್ಲಿ ಯಶಸ್ವಿಯಾಗುವಿರಿ. ಕಾರ್ಮಿಕ ಜನರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ. ಪ್ರವಾಸಿ ಯೋಜನೆಗಳಿಗೆ ಯಶಸ್ಸು.
  • ಧನು
  • ವಿದೇಶದ ಶಿಕ್ಷಣವನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಿದಲ್ಲಿ ಅವಕಾಶ ಪ್ರಾಪ್ತಿ. ಹೊಸ ಮನೆಯನ್ನು ಭೋಗ್ಯಕ್ಕೆ ಕೊಡಲು ಮಾತುಕತೆ ನಡೆಯುವುದು. ಧ್ಯಾನ ಪ್ರವಚನ ಕೇಳಿ.
  • ಮಕರ
  • ಯೋಗ್ಯವಯಸ್ಕರಿಗೆ ಆಲೋಚನೆಗೆ ಸರಿಸಮಾನ ರೀತಿಯಲ್ಲಿ ವಿವಾಹ ಭಾಗ್ಯ ಒದಗಿ ಬರಲಿದೆ. ದಂತವೈದ್ಯ ವೃತ್ತಿಯವರಿಗೆ ಹಾಗೂ ದಂತ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅನುಕೂಲವಾದ ದಿನ.
  • ಕುಂಭ
  • ಸಂಗೀತ ಕಲಿಕೆಯಲ್ಲಿ ಅತೀವ ಆಸಕ್ತಿಗೆ ತಂದೆ-ತಾಯಿಯವರಿಂದ ಪ್ರೋತ್ಸಾಹ ಸಿಗಲಿದೆ. ಕಷ್ಟದ ದಿನಗಳಲ್ಲಿ ಸಹಕರಿಸಿದವರೊಂದಿಗೆ ನಮ್ರತೆಯಿಂದ, ವಿನಯದಿಂದ ಇರುವುದನ್ನು ಮರೆಯಬೇಡಿ.
  • ಮೀನ
  • ಕೆಲವು ಕೆಲಸಗಳನ್ನು ಯಾರ ನೆರವೂ ಇಲ್ಲದೆ ಸ್ವಯಂ ನಿರ್ವಹಿಸುವುದು ಉತ್ತಮ. ಸಹೋದರನ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ನಡೆಯಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.