ದಿನ ಭವಿಷ್ಯ: ಈ ರಾಶಿಯವರು ಷೇರು ವ್ಯವಹಾರಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಮಾರ್ಚ್ 2024, 23:20 IST
Last Updated 11 ಮಾರ್ಚ್ 2024, 23:20 IST
ದಿನ ಭವಿಷ್ಯ
ಮೇಷ
ಪ್ರೀತಿ ಪಾತ್ರರೊಂದಿಗೆ ದಿನ ಕಳೆಯುವ ಸಮಯವು ಹಿಂದಿನ ಲವಲವಿಕೆಯನ್ನು ಪುನಃ ಮೂಡಿಸುತ್ತದೆ. ಷೇರು ವ್ಯವಹಾರಗಳಿಂದ ಹೆಚ್ಚಿನ ಲಾಭಾಂಶ ಪಡೆದುಕೊಳ್ಳುವಿರಿ. ಸಜ್ಜನರ ಒಡನಾಟದಿಂದ ಮನಸ್ಸಿಗೆ ನೆಮ್ಮದಿ ಇರುವುದು.
ವೃಷಭ
ಸಹೋದ್ಯೋಗಿಗಳು ಸಹಕಾರ ನೀಡಿದರೂ ಸ್ವಾರ್ಥ ಮನೋಭಾವ ವನ್ನು ಹೊಂದಿರುತ್ತಾರೆ. ಸಂತಸದ ಕ್ಷಣಗಳನ್ನು ತಂದುಕೊಳ್ಳುವ ಪ್ರಯತ್ನ ಮಾಡಿ. ಕರಕುಶಲ ವಸ್ತು ತಯಾರಕರಿಗೆ ಆದಾಯದಲ್ಲಿ ಹೆಚ್ಚಳವಾಗಲಿದೆ.
ಮಿಥುನ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೊಂದಿದ ಶಿಸ್ತುಬದ್ಧ ಅಭ್ಯಾಸವು ಉತ್ತಮ ಫಲವನ್ನು ದೊರಕಿಸಿಕೊಡಲಿದೆ. ಕಬ್ಬಿಣ ಸಿಮೆಂಟ್ ದಾಸ್ತಾನುದಾರರಿಗೆ ಉತ್ತಮ ಆದಾಯವಿರುವುದು. ವಾಸ್ತವ ಪರಿಸ್ಥಿತಿ ನಿಮ್ಮ ರಕ್ಷಾ ಕವಚದಂತಿದೆ.
ಕರ್ಕಾಟಕ
ವ್ಯಾಪಾರದಲ್ಲಿ ಅಭಿವೃದ್ಧಿ ಕಂಡು ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹಣ ತೊಡಗಿಸುವಿರಿ. ಮನೆಯಲ್ಲಿ ನಡೆಯಬೇಕಾಗಿರುವ ಮಂಗಳ ಕಾರ್ಯಕ್ಕೆ ವಿಘ್ನ ಸಂಭವಿಸದಂತೆ ವಿಘ್ನೇಶ್ವರನ ಮೊರೆ ಹೋಗಬೇಕಾಗುತ್ತದೆ.
ಸಿಂಹ
ಸರ್ಕಾರಿ ಅಧಿಕಾರಿಗಳಿಗೆ ಸಹೋದ್ಯೋಗಿಗಳಿಂದ ನಿರೀಕ್ಷೆಗೆ ಮೀರಿದ ಸಹಾಯ ದೊರೆಯುವುದು. ನಿಮ್ಮ ನಿರ್ಲಿಪ್ತತೆ, ಮೌನದ ಉತ್ತರದಿಂದ ಶತ್ರುಗಳು ದೂರಾಗುವರು. ದೇವತಾ ಉಪಾಸನೆಯಿಂದ ಉನ್ನತಿ ಆಗಲಿದೆ.
ಕನ್ಯಾ
ಜನಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಬಹಳ ಕೆಲಸದ ಒತ್ತಡ ಇರುವುದು. ಕಣ್ಣಿನ ದೃಷ್ಟಿಯಲ್ಲಿ ಏನಾದರೂ ಬದಲಾವಣೆಯು ಅನುಭವಕ್ಕೆ ಬಂದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯನ್ನು ಪಡೆಯಿರಿ.
ತುಲಾ
ನ್ಯಾಯಾಲಯದ ಮೆಟ್ಟಿಲನ್ನು ಏರುವ ವಿಚಾರಗಳು ನಡೆಯದಂತೆ ಎಚ್ಚರವಹಿಸಿ. ಮಹಿಳೆಯರಿಗೆ ತನ್ನ ತವರು ಮನೆಯಲ್ಲಿ ನಡೆದ ದುರ್ಘಟನೆಯು ಭಾವುಕರನ್ನಾಗಿ ಮಾಡಲಿದೆ. ಕೆಂಪು ಬಣ್ಣ ಶುಭವನ್ನು ಉಂಟುಮಾಡುತ್ತದೆ.
ವೃಶ್ಚಿಕ
ಆರ್ಥಿಕ ವಿಚಾರದಲ್ಲಿ ಉದಾರತೆ ತೋರಿ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಬೇಡಿ. ವೃತ್ತಿ ಜೀವನಕ್ಕೆ ಸಂಬಂಧಿಸಿದ ಗುರಿಗಳನ್ನು ಈಡೇರಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಅವಶ್ಯಕ ವಸ್ತುಗಳ ಗಳಿಕೆಯಿಂದ ಸಂತೋಷ.
ಧನು
ಮಗನ ಕೆಲಸದ ವಿಚಾರದಲ್ಲಿ ವಿದೇಶದಲ್ಲಿರುವ ಸ್ನೇಹಿತ ನೆರವಿಗೆ ಬರಲಿದ್ದಾರೆ. ರಾಜಿಯಾಗುವ ಮನೋಭಾವವನ್ನು ಬೆಳಸಿಕೊಳ್ಳಿ . ಹೊಸ ಕ್ಷೇತ್ರದಲ್ಲಿ ಏಳಿಗೆ ಪಡೆಯುವಿರಿ. ಗೋವಿನ ಸೇವೆಯಿಂದ ಶುಭ .
ಮಕರ
ಇತರರನ್ನು ಹೀಯಾಳಿಸುವ ಅಥವಾ ನಿಂದನೆ ಮಾಡುವ ಮನೋ ಭಾವವನ್ನು ಕಡಿಮೆ ಮಾಡಿಕೊಳ್ಳಿ. ವೈಯಕ್ತಿಕ ವಿಚಾರಗಳನ್ನು ಸಮಾಧಾನಕ್ಕಾಗಿ ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಎದುರಾಗುವುದು.
ಕುಂಭ
ರಸ ಪದಾರ್ಥ, ಆಲಂಕಾರಿಕ ವಸ್ತುಗಳ ಉದ್ಯೋಗದವರು ನೆಮ್ಮದಿ ಕಾಣಬಹುದು. ರಾಜಕೀಯ ವಲಯದಲ್ಲಿ ಗೌಪ್ಯತೆಯಿಂದ ಮುಖ್ಯ ಮಾತುಕತೆ ನಡೆಸಬೇಕಾಗುವುದು. ಮಿತ್ರರೊಂದಿಗೆ ಮಾತುಕತೆಗಳಲ್ಲಿ ಕಾಲ ಕಳೆಯುವಿರಿ.
ಮೀನ
ಈ ದಿನ ನೀವು ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಲೇವಾದೇವಿ ವ್ಯವಹಾರವು ಬಹಳಷ್ಟು ಲಾಭದಾಯಕವಾಗಿರುವುದು.