ADVERTISEMENT

ದಿನ ಭವಿಷ್ಯ: ಈ ರಾಶಿಯ ರಂಗಭೂಮಿ ಕಲಾವಿದರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಆಗಸ್ಟ್ 2025, 23:30 IST
Last Updated 13 ಆಗಸ್ಟ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಧನ್ಯತಾ ಭಾವ ಉಂಟಾಗಲಿದೆ. ಬಂಧು–ಮಿತ್ರರ ಒಡನಾಟ ಸಂತೋಷ ತರುವುದು. ಅಜೀರ್ಣ ಹಾಗೂ ಪಿತ್ತದ ಸಮಸ್ಯೆಗಳು ಇಂದು ನಿಮ್ಮನ್ನು ಕಾಡುವ ಸಾಧ್ಯತೆಯಿದೆ.
  • ವೃಷಭ
  • ಆರ್ಥಿಕ ಸಂಕಷ್ಟದಲ್ಲಿರುವ ನಿಮಗೆ ಸ್ನೇಹಿತನಿಂದ ಸಹಾಯ ಸಿಗಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ನೋಡಿ ಸಹಾಯ ಮಾಡಿದ್ದಾರೆ ಎಂಬುವುದು ಮರೆಯದಿರಿ. ರಂಗಭೂಮಿ ಕಲಾವಿದರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ.
  • ಮಿಥುನ
  • ಭಾವನೆಗಳಿಗೆ ಸ್ಪಂದಿಸುವ ಬಾಳಸಂಗಾತಿ ಸಿಕ್ಕಿರುವ ಬಗ್ಗೆ ಸಂತೋಷವಾಗುವುದು. ಉನ್ನತಾಧಿಕಾರಿಗಳಿಂದ ಪ್ರಶಂಸೆ ಪಡೆಯದಿದ್ದರೂ, ಕೋಪಕ್ಕೆ ಕಾರಣವಾಗಬೇಡಿ. ಸೂರ್ಯ ನಮಸ್ಕಾರದಿಂದ ಆರೋಗ್ಯ ವೃದ್ಧಿ.
  • ಕರ್ಕಾಟಕ
  • ಕೆಲವೊಂದು ದುರಭ್ಯಾಸಗಳು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದು ಪ್ರತ್ಯಕ್ಷವಾಗಿ ಗೋಚರವಾಗುತ್ತದೆ. ಹಲವು ದಿನಗಳ ನಿರೀಕ್ಷೆಯ ವಾಹನ ಖರೀದಿ ವಿಚಾರಕ್ಕೆ ಇಂದು ಶುಭಾಂತ್ಯ ದೊರೆಯಲಿದೆ.
  • ಸಿಂಹ
  • ಆರಕ್ಷಕ ವರ್ಗದವರು ಜಾಗರೂಕತೆಯಿಂದ ವರ್ತಿಸಿ, ಸ್ವತಃ ನೀವೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದಂತಹ ಸನ್ನಿವೇಶ ಎದುರಾಗಬಹುದು. ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸುವುದು ಉತ್ತಮ.
  • ಕನ್ಯಾ
  • ಸಾಹಿತಿಗಳು ಹೊಸ ಪುಸ್ತಕ ಬಿಡುಗಡೆಯ ಬಗ್ಗೆ ಗಮನಹರಿಸಿ. ನಿಮ್ಮ ನೈಪುಣ್ಯವು ವೃದ್ಧಿಸುವ ರೀತಿಯಲ್ಲಿ ನಿಮ್ಮ ವ್ಯಕ್ತಿತ್ವವಿರಲಿ. ನೀವು ನಿರೀಕ್ಷಿಸಿದ ರೀತಿಯಲ್ಲಿ ಹೊಸ ಹೊಸ ವ್ಯಾವಹಾರಿಕ ಸಂಬಂಧಗಳು ಸಿಗಲಿವೆ.
  • ತುಲಾ
  • ನಿಮ್ಮ ಸಾಧು ಸ್ವಭಾವ ಮತ್ತು ಪರೋಪಕಾರ ಶತ್ರುಗಳು ಮಿತ್ರರಾಗಿ ಬದಲಾಗುತ್ತಾರೆ. ಮನೆಗೆ ಹೊಸ ರೂಪ ನೀಡುವ ಕುರಿತು ಆಲೋಚನೆ ಬರಲಿದೆ. ಕಷ್ಟಪಟ್ಟು ಕೆಲಸ ಮಾಡಿದರೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ.
  • ವೃಶ್ಚಿಕ
  • ಪಾಲುದಾರಿಕೆ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಸರಿ ಎನಿಸಲಿದೆ. ಮನೆಯ ವಿಷಯಗಳತ್ತ ಹೆಚ್ಚಿನ ಗಮನ ಕೊಡಿ. ಸಂದಿಗ್ಧ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸುವುದು ಒಳ್ಳೆಯದು.
  • ಧನು
  • ಕುಟುಂಬದ ಗೌರವವನ್ನು ಉಳಿಸುವುದಕ್ಕಾಗಿ ನೀವು ಮಾಡುತ್ತಿರುವ ತ್ಯಾಗವು ಪ್ರಶಂಸನೀಯ. ಗೃಹ ನಿರ್ಮಾಣ ಕಾರ್ಯದ ಆಲೋಚನೆಯು ಕಾರ್ಯರೂಪಕ್ಕೆ ಬರುವುದು. ಎಷ್ಟೇ ತಾಳ್ಮೆ ಹೊಂದಿದ್ದರೂ ಕಡಿಮೆ ಆಗಬಹುದು.
  • ಮಕರ
  • ಸಹೋದರರ ಅಥವಾ ದಾಯಾದಿಗಳ ನಡುವಿನ ಭಿನ್ನಾಭಿಪ್ರಾಯನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಲಿದೆ. ಮಗಳ ಅನಾರೋಗ್ಯವು ಹಂತ ಹಂತವಾಗಿ ಸರಿಯಾಗಿ ಸಮಾಧಾನಕರವೆನ್ನಿಸುವುದು.
  • ಕುಂಭ
  • ವೃತ್ತಿರಂಗದಲ್ಲಿ ಹಿತೈಷಿಗಳ ಅಥವಾ ಅಕ್ಕಪಕ್ಕದವರ ಮಾತುಗಳನ್ನು ಲೆಕ್ಕಿಸದೇ ಮುನ್ನುಗ್ಗುವುದು ಈ ದಿನ ಸರಿ ಎನಿಸುವುದು. ಪತ್ರಿಕೋದ್ಯಮಿಗಳು ನಿಮ್ಮ ವಿಷಯಾನ್ವೇಷಣೆಯ ಕೌಶಲವನ್ನು ಮೆಚ್ಚಿ ಗೌರವಕ್ಕೆ ಭಾಗಿಯಾಗುವಿರಿ.
  • ಮೀನ
  • ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ದಿನ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ತೊರೆದು ಬಂದ ನಿಮ್ಮ ಮೂಲಮನೆ ಯಲ್ಲಿದ್ದ ಸುವ್ಯವಸ್ಥೆಗಳನ್ನು ನೆನಪಿಸಿಕೊಂಡು ಈಗ ಮರುಗುವಂತಾಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.