ADVERTISEMENT

ದಿನ ಭವಿಷ್ಯ | ಖರ್ಚು ವೆಚ್ಚಗಳ ಮೇಲೆ ಗಮನವಿದ್ದರೆ ಒಳ್ಳೆಯದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಜುಲೈ 2025, 18:30 IST
Last Updated 13 ಜುಲೈ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಾನೂನಾತ್ಮಕ ಹೋರಾಟ ಅಥವಾ ಕೋರ್ಟು ವ್ಯವಹಾರಗಳ ಓಡಾಟಕ್ಕೆ ಮುಕ್ತಾಯ ಸಿಗಲಿದೆ. ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವ ಬಗ್ಗೆ ಚರ್ಚಿಸುವಿರಿ. ವೃತ್ತಿರಂಗದಲ್ಲಿ ಅದೃಷ್ಟ ಪಾಲಿಗಿರುವುದು.
  • ವೃಷಭ
  • ರಾಜಕೀಯವಾಗಿ ಪ್ರಬಲಗೊಳ್ಳುವ ಅವಕಾಶಗಳು ಹೆಚ್ಚಲಿವೆ. ಸಾಮಾಜಿಕ ವಲಯದಲ್ಲಿ ವರ್ಚಸ್ಸು ಬೆಳೆಯಲಿದೆ. ಧಾರ್ಮಿಕ ಕೆಲಸಗಳನ್ನು ಮಾಡಿಸುವಿರಿ. ಆಫೀಸಿನ ಆಗು ಹೋಗುಗಳ ಬಗ್ಗೆ ಗಮನವಿಟ್ಟುಕೊಳ್ಳಿ.
  • ಮಿಥುನ
  • ಬಟ್ಟೆಯ ವ್ಯಾಪಾರ ನಡೆಸುವವರು ಉದ್ಯೋಗದಲ್ಲಿ ಬಂಡವಾಳ ಹೂಡುವಂಥ ಕೆಲಸವನ್ನು ಮಾಡುವುದು ಸಮಂಜಸವಲ್ಲ. ಮುಖ್ಯ ಕೆಲಸವೊಂದು ದಿನದ ಅಂತ್ಯದ ವೇಳೆಗೆ ನೆರವೇರುವುದು.
  • ಕರ್ಕಾಟಕ
  • ಹೊಸ ವಾಹನ ಕೊಳ್ಳುವ ಸಂಭವವಿದೆ. ಜನರ ಭಾವನೆಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬುದು ಚೆನ್ನಾಗಿ ತಿಳಿದಿದೆ. ಸುಖ ಶಾಂತಿ ಹಾಗೂ ನೆಮ್ಮದಿಗಾಗಿ ಮನೆಯಲ್ಲಿ ಚಂಡಿಕಾ ಪಾರಾಯಣ ಮಾಡಿಸಿ.
  • ಸಿಂಹ
  • ಬಹುದಿನದ ನಂತರದಲ್ಲಿ ಷೇರುಪೇಟೆಯಿಂದ ಲಾಭ ಗಳಿಸುವಿರಿ. ಮಕ್ಕಳಿಂದ ಅಹಿತ ಕಾರ್ಯಗಳು ಸಂಭವಿಸಬಹುದು. ಅಕ್ಕಪಕ್ಕದವರ ಎದುರು ಗೌರವಕ್ಕೆ ಚ್ಯುತಿ ಬಂದಂತೆ ಆಗಲಿದೆ.
  • ಕನ್ಯಾ
  • ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲಗಳನ್ನು ಹೊರ ತೆಗೆಯಲು ಹೊಸದನ್ನು ಕಲಿಯಲು ಮುಂದಾಗುವಂತಾಗಲಿದೆ. ನೂತನವಾಗಿ ಆರಂಭಿಸಿದ ವ್ಯವಹಾರದಲ್ಲಿನ ನಷ್ಟ ಸುಧಾರಿಸಿಕೊಂಡು ಹೋಗುವ ಧೈರ್ಯ ಬೆಳೆಸಿಕೊಳ್ಳಿ.
  • ತುಲಾ
  • ವಾಗ್ದಾನಗಳನ್ನು ಮಾಡುವಾಗ ಯೋಚಿಸಿ, ಉಳಿಸಿಕೊಳ್ಳಲು ಕಷ್ಟವಾಗುವಂಥ ಮಾತುಗಳನ್ನು ಕೊಡದಿರಿ. ಕುಟುಂಬದಲ್ಲಿ ಸೌಖ್ಯವಿದ್ದು ಮನರಂಜನೆ ಪಡೆಯುವಿರಿ.
  • ವೃಶ್ಚಿಕ
  • ಕಾನೂನು ಸಮಸ್ಯೆಗಳೆಲ್ಲಾ ಸುಸೂತ್ರವಾಗಿ ಬಗೆಹರಿಯಲಿವೆ. ಪರಿಚಯವಾದರೂ ಪರೀಕ್ಷಿಸದೇ ನಂಬಬೇಡಿ. ಲೋಹವಸ್ತುಗಳ ವ್ಯಾಪಾರಿಗಳಿಗೆ ಸಂಪಾದನೆ ಹೆಚ್ಚಳವಾಗಲಿದೆ.
  • ಧನು
  • ಮಕ್ಕಳ ಆಟೋಪಚಾರಗಳನ್ನು ನೋಡಿದ ನಿಮಗೆ ಬಾಲ್ಯವು ಅತಿಯಾಗಿ ಕಾಡಲಿದೆ. ಬಹಳ ದಿನಗಳ ನಂತರ ಕ್ರೀಡೆಗಳಲ್ಲಿ ಸಮಯ ಕಳೆಯುವಿರಿ. ನಾಗ ದೇವರ ಆರಾಧನೆ ಶುಭವನ್ನು ಉಂಟುಮಾಡುತ್ತದೆ.
  • ಮಕರ
  • ಆಕ್ರೋಶಗಳನ್ನು ವ್ಯಕ್ತಪಡಿಸಲು ಅದಕ್ಕೆ ಕಾರಣರಲ್ಲದ ವ್ಯಕ್ತಿಗಳನ್ನು ಆರಿಸಿಕೊಳ್ಳಬೇಡಿ. ಶಿಕ್ಷಣವನ್ನು ಮುಗಿಸಿರುವ ಉದ್ಯೋಗಾಭಿಲಾಷಿಗಳು ಉತ್ತಮ ವಿಚಾರ ಕೇಳುವಿರಿ. ಮುಖ್ಯ ವ್ಯಕ್ತಿಗಳ ಭೇಟಿಯ ಸಾಧ್ಯತೆ ಇದೆ.
  • ಕುಂಭ
  • ಉತ್ತಮ ವ್ಯವಹಾರಗಳ ಫಲದಿಂದ ಕೈಬಿಟ್ಟ ಹಳೆಯ ಆಸ್ತಿಯು ನಿಮ್ಮ ಕೈಸೇರುವ ಯೋಗವಿದೆ. ಖರ್ಚು ವೆಚ್ಚಗಳ ಮೇಲೆ ಗಮನವಿದ್ದರೆ ಒಳ್ಳೆಯದು. ಸರಕು ಸಾಗಾಟದಿಂದ ಉತ್ತಮ ಲಾಭ ಪಡೆಯುವಿರಿ.
  • ಮೀನ
  • ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನೀವು ಮತ್ತೊಮ್ಮೆ ಮರುಪರಿಶೀಲಿಸಲು ಹೋಗಿ ದಾರಿ ತಪ್ಪಬೇಡಿ. ಖರ್ಚು ಕಡಿಮೆ ಗಳಿಕೆ ಹೆಚ್ಚಿರುವುದರಿಂದ ಸಂಪಾದನೆಯ ಹೆಚ್ಚಿನದ್ದನ್ನು ಉಳಿಸಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.