ADVERTISEMENT

ದಿನ ಭವಿಷ್ಯ: ಲೇವಾದೇವಿ ವ್ಯವಹಾರ ಲಾಭ ತರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಮೇ 2025, 18:30 IST
Last Updated 14 ಮೇ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನೆರೆಹೊರೆಯವರ ಕಷ್ಟಗಳಿಗೆ ಸ್ಪಂದನೆ ಮಾಡುವುದು ಒಳ್ಳೆಯದು. ಈ ದಿನವು ಸಾಂಸಾರಿಕವಾಗಿ ತುಸು ನೆಮ್ಮದಿ, ಚೇತರಿಕೆಯ ದಿನವಾಗಲಿದೆ. ಅಧೀನ ಸಿಬ್ಬಂದಿಯೊಂದಿಗೆ ಸಂಯಮದಿಂದ ನಡೆದುಕೊಳ್ಳುವುದು ಉತ್ತಮ.
  • ವೃಷಭ
  • ಸಂಪರ್ಕ ಮಾಧ್ಯಮದಲ್ಲಿ ಸುದ್ದಿಗಾರರಾಗಿ ಉದ್ಯೋಗ ನಿರ್ವಹಿಸುವವರಿಗೆ ಬದಲಾವಣೆ ಸಂಭವವಿರಲಿದೆ. ಕೆಲಸದಲ್ಲಿ ತೋರಿದ ಶ್ರದ್ಧೆಗೆ ಹೆಚ್ಚಿನ ಸ್ಥಾನಮಾನ ಅಲಂಕರಿಸುವಿರಿ. ಸಗಟು ವ್ಯಾಪಾರದಲ್ಲಿ ಲಾಭ ಪಡೆಯಬಹುದು.
  • ಮಿಥುನ
  • ವೃತ್ತಿ ಹಾಗೂ ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ. ಕೈಗೊಳ್ಳುವ ನಿರ್ಧಾರಗಳು ಫಲಪ್ರದವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ತರಲಿದೆ. ಧಾನ್ಯಗಳ ಸಂಗ್ರಹದಿಂದ ಮುಂದಿನ ದಿನಗಳಲ್ಲಿ ಲಾಭ ಪಡೆಯಬಹುದು.
  • ಕರ್ಕಾಟಕ
  • ಮಿತ್ರವರ್ಗದವರ ಸಹಾಯದಿಂದ ಗುತ್ತಿಗೆ ಆಧಾರಿತ ಉತ್ತಮ ಉದ್ಯೋಗ ಸಿಗಲಿದೆ. ಪ್ರಾಮಾಣಿಕತೆಯನ್ನು ಇಟ್ಟುಕೊಳ್ಳುವುದು ಕಷ್ಟ ಎನಿಸಿದರೂ, ಬಿಡುವುದು ಬೇಡ. ಲೇವಾದೇವಿ ವ್ಯವಹಾರ ಲಾಭ ತರಲಿದೆ.
  • ಸಿಂಹ
  • ಕೆಲಸವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಹೆಸರು ಹಾಳು ಮಾಡಿಕೊಳ್ಳುವ ಸಂಭವವಿದೆ, ಜಾಗ್ರತೆ ವಹಿಸಿ. ವಿಶ್ರಾಂತಿಯಿಲ್ಲದ ಕಾರ್ಯಗಳಿಂದ ರಕ್ತದೊತ್ತಡದಂಥ ಅನಾರೋಗ್ಯ ಉಂಟಾಗಬಹುದು.
  • ಕನ್ಯಾ
  • ನವ ಉಲ್ಲಾಸದಿಂದ ಈ ದಿನ ಆರಂಭವಾಗಲಿದೆ.ಅಕ್ಕಪಕ್ಕದಲ್ಲಿ ಹಲವಾರು ಸಂಗತಿಗಳು ತಿಳಿಯುವುದು. ಆದಾಯ ತೆರಿಗೆ ಇಲಾಖೆಯವರಿಗೆ ನಿಮ್ಮ ಲೆಕ್ಕಪತ್ರಗಳು ಸಮರ್ಪಕವಾಗಿರುವ ರೀತಿಯಲ್ಲಿ ವ್ಯವಹಾರವಿರಲಿ.
  • ತುಲಾ
  • ಏಕಕಾಲದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುವ ಪ್ರಯತ್ನದಿಂದ ಎಲ್ಲದರಲ್ಲೂ ಅಪಕೀರ್ತಿ ಉಂಟಾಗಬಹುದು. ಒಂದು ಕೆಲಸವನ್ನು ಮುಗಿಸಿ ನಂತರ ಮತ್ತೊಂದರ ಬಗ್ಗೆ ಯೋಚಿಸಿ. ಮಾರಾಟಗಾರರಿಗೆ ವಿಶೇಷ ದಿನ.
  • ವೃಶ್ಚಿಕ
  • ಯೋಜನೆಗಳನ್ನು ಇತರರು ಒಮ್ಮನಸ್ಸಿನಿಂದ ಸ್ವೀಕರಿಸುವಂತೆ ಮಾಡುವ ಸಾಮರ್ಥ್ಯ ಅದ್ಭುತವಾದದ್ದು. ಪೋಸ್ಟಲ್, ಕೊರಿಯರ್ ಮತ್ತು ಮನೆಬಾಗಿಲ ಸೇವೆಯ ಕ್ಷೇತ್ರದವರಿಗೆ ಕೆಲಸದ ಭಾರ ಹೆಚ್ಚಾಗುತ್ತದೆ.
  • ಧನು
  • ಕೌಟುಂಬಿಕವಾಗಿ ಯಾವುದೇ ತೊಂದರೆ ಎದುರಾದರೂ ಎದುರಿಸುವ ಸಾಮರ್ಥ್ಯ ಇರುತ್ತದೆ, ಧೈರ್ಯಗೆಡುವ ಅವಶ್ಯಕತೆ ಇಲ್ಲ. ಲೆಕ್ಕಪತ್ರ ಪರಿಶೋಧಕರಿಗೆ ಕೆಲಸದಲ್ಲಿ ಸಂತೃಪ್ತಿ ಉಂಟಾಗುವುದು.
  • ಮಕರ
  • ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳ ಜತೆ ಜಾಣ್ಮೆಯಿಂದ ವ್ಯವಹರಿಸಿ. ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅವರಿಂದ ನಡೆಯಬಹುದು. ಈಶ್ವರ ಆರಾಧನೆಯಿಂದ ಶತ್ರು ನಿವಾರಣೆ‌.
  • ಕುಂಭ
  • ಹಲವು ದಿನಗಳ ಪರಿಶ್ರಮದ ಜತೆ ವರಿಷ್ಠರ ಸಹಾಯ ಸೇರಿಕೊಂಡು ರಾಜಕೀಯ ಪಕ್ಷದಲ್ಲಿ ಉನ್ನತ ಹುದ್ದೆ ಪ್ರಾಪ್ತಿ . ಮನೆಯಲ್ಲಿ ಅತಿಥಿ ಸತ್ಕಾರ ನಡೆಯಲಿದೆ. ದೇವರ ಕೃಪೆಯಿಂದ ನಿರೀಕ್ಷೇಗೂ ಮೀರಿದ ಜಯ ಸಿಗುವುದು.
  • ಮೀನ
  • ಎಲೆಕ್ಟ್ರಾನಿಕ್‌ ವಸ್ತುಗಳಿಂದ ಆದಾಯ ಹೆಚ್ಚುವುದು. ಹಣಕಾಸಿನಲ್ಲಿ ವ್ಯತ್ಯಾಸಗಳಾಗಿ ಉದ್ಯೋಗದಲ್ಲಿ ಛೀಮಾರಿ ಕೇಳಬೇಕಾದ ಪ್ರಸಂಗ ಬರಬಹುದು. ದೂರ ಸಂಚಾರ ಮಾಡಬೇಕಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.