ADVERTISEMENT

ದಿನ ಭವಿಷ್ಯ: ಶ್ರೇಯಸ್ಸು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಡಿಸೆಂಬರ್ 2025, 18:30 IST
Last Updated 15 ಡಿಸೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೆಲಸಗಳೆಲ್ಲ ಇಂದಿನಿಂದ ವೇಗಗತಿಯನ್ನು ಪಡೆದುಕೊಳ್ಳುತ್ತವೆ. ಮದುವೆಯ ವಿಚಾರದಲ್ಲಿ ಆತುರದ ನಿರ್ಧಾರ ತಪ್ಪಿಸಿ. ಅದರ ಬಗ್ಗೆ ಕುಟುಂಬದವರೊಂದಿಗೆ ಮಾತುಕತೆ ನಡೆಸಿ.
  • ವೃಷಭ
  • ವ್ಯವಹಾರದಲ್ಲಿ ಜಾಗರೂಕತೆ ಮುಖ್ಯ.ಕೆಲಸದಲ್ಲಿ ಗಡಿಬಿಡಿ ಮಾಡದೆ ಶಾಂತವಾಗಿ ವರ್ತಿಸಿ. ಸಾಯಂಕಾಲದ ವೇಳೆಯಲ್ಲಿ ವಾಯುವಿಹಾರದಿಂದ ಮನಸ್ಸು ಪ್ರಫುಲ್ಲವಾಗುವುದು.
  • ಮಿಥುನ
  • ಹೊಸ ಜನರೊಂದಿಗೆ ಮಾತುಕತೆ ನಡೆಸುವುದು ಇದ್ದಲ್ಲಿ ಅದರಿಂದ ಲಾಭ ಹೊಂದುವಿರಿ. ಮಕ್ಕಳ ವಿಚಾರದಲ್ಲಾಗಲಿ ಅಥವಾ ಭವಿಷ್ಯದ ವಿಚಾರದಲ್ಲಾಗಲಿ ಯೋಚನೆಗಳನ್ನು ತೆಗೆದುಹಾಕಿ.
  • ಕರ್ಕಾಟಕ
  • ಜೊತೆಗಾರರಲ್ಲಿ ಭಾವನಾತ್ಮಕ ಸಂಬಂಧಗಳು ಉಂಟಾಗಲಿವೆ. ಬಿಡುವಿಲ್ಲದ ಕೆಲಸದ ಮಧ್ಯ ದಲ್ಲೂ ದೇಹಕ್ಕೆ ಬೇಕಾದಷ್ಟು ವಿಶ್ರಾಂತಿ ಕೊಡುವ ಬಗ್ಗೆ ಯೋಚಿಸಿ. ಜಾಗ ಖರೀದಿ ಮಾಡಬಹುದು.
  • ಸಿಂಹ
  • ಗೃಹ ಸಾಮಗ್ರಿ ವಸ್ತುಗಳ ಖರೀದಿಯಿಂದ ಖರ್ಚು ಬರುವುದು. ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಬೇಕಾಗಬಹುದು. ನೀರಿನಿಂದ ಸೋಂಕು ಉಂಟಾಗಬಹುದು.
  • ಕನ್ಯಾ
  • ಜಮೀನು ಖರೀದಿಸುವ ಬಗ್ಗೆ ಯೋಚನೆಗಳು ಬರಲಿವೆ. ಅವು ಯೋಚನೆಯಾಗಿಯೇ ಉಳಿಯಲಿದೆ. ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ.
  • ತುಲಾ
  • ಕಾರ್ಯರಂಗದಲ್ಲಿ ಮುನ್ನಡೆಗೆ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಇರುತ್ತದೆ. ಯೋಚಿಸಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಸಮಸ್ಯೆಗಳ ಸರಮಾಲೆಗಳು ನಿವಾರಣೆಯಾಗಲಿವೆ.
  • ವೃಶ್ಚಿಕ
  • ಧಾರ್ಮಿಕವಾಗಿ ಏಕಾಗ್ರತೆ ಹಾಗೂ ಉತ್ತಮ ರೀತಿಯಲ್ಲಿನ ಧ್ಯಾನಗಳಿಂದ ಮಾನಸಿಕವಾಗಿ ಸದೃಢರಾಗುವಿರಿ. ಮಗನೊಡನೆ ಗಹನ ಮಾತುಕತೆ ನಡೆಯುವ ಸಂಭವವಿದೆ.
  • ಧನು
  • ಪ್ರಾರಂಭಿಸಿದ ಕೆಲಸಗಳಲ್ಲಿಯೂ ಯಶಸ್ಸು, ಲಾಭ, ಅಭಿವೃದ್ಧಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಕಹಿಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಪ್ರತಿಸ್ಪರ್ಧಿಗಳು ದೂರಾಗುವರು.
  • ಮಕರ
  • ಭೂಮಿಯ ಖರೀದಿಯ ವಿಚಾರದಲ್ಲಿ ಮೋಸವಾಗುವ ಸಾಧ್ಯತೆಗಳಿವೆ. ಸಿವಿಲ್ ಎಂಜಿನಿಯರ್‌ಗಳಿಗೆ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವುದು. ಅಧಿಕಾರವನ್ನು ಚಲಾಯಿಸಬೇಡಿ.
  • ಕುಂಭ
  • ಶ್ರೇಯಸ್ಸು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗುವುದು. ಮೃಗದ ಚರ್ಮದಿಂದ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಬರಲಿದೆ. ಷೇರು ಬಂಡವಾಳದಲ್ಲಿ ಲಾಭದ ಸೂಚನೆ ಇದೆ.
  • ಮೀನ
  • ಹಣಕಾಸಿನ ವ್ಯವಹಾರ ನಡೆಸುವವರು ನೂತನ ಯೋಜನೆಗಳನ್ನು ಕೆಲವು ಕಡೆಯಲ್ಲಿ ವಿಸ್ತರಿಸಬಹುದು. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.