ದಿನ ಭವಿಷ್ಯ: ಈ ರಾಶಿಯವರು ಧರ್ಮ ವಿರುದ್ಧ ಕಾರ್ಯಗಳನ್ನು ಮಾಡದಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಜುಲೈ 2024, 21:05 IST
Last Updated 15 ಜುಲೈ 2024, 21:05 IST
ದಿನ ಭವಿಷ್ಯ
ಮೇಷ
ನಿನ್ನೆಯ ಭೂರಿ ಭೋಜನದ ಸಲುವಾಗಿ ಅಜೀರ್ಣ ಮೊದಲಾದ ಸಮಸ್ಯೆಗಳನ್ನು ಎದುರಿಸುವಿರಿ. ನಿಮ್ಮ ವ್ಯವಹಾರಗಳ ಬಗ್ಗೆ ನೀವೇ ಹೆಚ್ಚಿನ ಗಮನ ಹರಿಸುವುದು ಸರಿ ಎನಿಸಲಿದೆ. ಧರ್ಮ ವಿರುದ್ಧ ಕಾರ್ಯಗಳನ್ನು ಮಾಡದಿರಿ.
ವೃಷಭ
ಆಯಾ ಋತುವಿನಲ್ಲಿ ಸಿಗುವ ಆಹಾರಗಳನ್ನು ಸಿದ್ಧ ಪಡಿಸಿ ಮಾರಾಟ ಮಾಡುವವರು ದೊಡ್ಡ ಮಟ್ಟದಲ್ಲಿ ಉದ್ಯೋಗವನ್ನು ಶುರುಮಾಡುವಿರಿ. ಹಿರಿಯರ ಮಾತಿನಂತೆ ನಡೆದುಕೊಳ್ಳುವುದರಿಂದ ಶುಭವಾಗುತ್ತದೆ.
ಮಿಥುನ
ನ್ಯಾಯವಾದಿಗಳಿಗೆ ಉತ್ತಮ ದಿನ, ಜಯ ಸಾಧಿಸುವ ಬಗ್ಗೆ ಉತ್ತಮವಾದ ಅಂಶ ಸಿಗಲಿದೆ. ಮನೆಯ ಪರಿಸ್ಥಿತಿ ಸುಧಾರಣೆ. ಹಣಕಾಸಿನ ಬಗ್ಗೆ ಚಿಂತಿಸಬೇಕಾಗಿಲ್ಲ. ವಾಸ್ತು ಶಿಲ್ಪದ ವಿದ್ಯಾರ್ಥಿಗಳಿಗೆ ಉತ್ತಮ ಬೇಡಿಕೆ ಬರಲಿದೆ.
ಕರ್ಕಾಟಕ
ಮನೆಯಲ್ಲಿ ನೆಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯೊರೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸುವಿರಿ, ವ್ಯವಸ್ಥಿತವಾಗಿ ನೆಡೆಯುವುದು. ಸರಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ.
ಸಿಂಹ
ಎಲ್ಲಾ ಕಾರ್ಯಗಳನ್ನು ಸಫಲತೆಗೆ ಮಾರ್ಪಡಿಸುವತ್ತ ಪ್ರಯತ್ನಿಸಬೇಕು, ಅದರಿಂದಾಗಿ ಒಂದು ರೀತಿಯ ಸ್ಪರ್ಧಾತ್ಮಕ ವಾತಾವರಣ ಇರಲಿದೆ. ಕೃಷಿಕರಿಗೆ ತೋಟದ, ಹೊಲದ ಕೆಲಸಗಳು ಸರಾಗವಾಗಿ ನೆಡೆಯುವಂತಾಗಲಿದೆ.
ಕನ್ಯಾ
ಊರಿನ ರಾಜಕಾರಣದ ವಿಷಯಗಳಲ್ಲಿ ಹೆಚ್ಚು ಸಮಯ ಕಳೆಯುವಂತಾ ಗುವುದು. ಮನೆ ದೇವರ ದರ್ಶನ, ಸೇವೆಗಳಿಂದ ಮಂಗಳ ಪ್ರದವಾಗಲಿದೆ. ಆರೋಗ್ಯದಲ್ಲಿ ಉತ್ತಮವಾದ ಸುಧಾರಣೆ ತೋರುವುದು.
ತುಲಾ
ಮುಂದಿನ ಗುರಿ ಸಾಧನೆಗೆ ಇಂದು ಅತಿ ಮುಖ್ಯವಾದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಖಾದ್ಯ ತೈಲಗಳ ಮಾರಾಟ ಉತ್ತಮವಾಗಿದ್ದು, ಲಾಭಾಂಶ ಹೆಚ್ಚುವುದು. ಸಣ್ಣ ಮಕ್ಕಳಿಂದಾಗಿ ಮರ್ಯಾದೆ ಹೋಗಬಹುದು.
ವೃಶ್ಚಿಕ
ಮಾಡುವ ವೃತ್ತಿಯ ಬಗ್ಗೆ ಅಧ್ಯಯನ ನಡೆಸುವ ಅಥವಾ ಹೆಚ್ಚಿನ ಮಾಹಿತಿಯನ್ನು ಕಲೆಹಾಕಬೇಕಾಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ದಾಂಪತ್ಯದಲ್ಲಿ ಬಿರುಕು ಬರದಂತೆ ನೋಡಿಕೊಳ್ಳಿ.
ಧನು
ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಸಮಾಜದಲ್ಲಿ ಬದಲಾವಣೆ ತರಲು ಕ್ರಾಂತಿಕಾರಿ ನಡೆಯೊಂದನ್ನು ಕೈಗೊಳ್ಳುವಿರಿ.
ಮಕರ
ಕೆಲ ದಿನಗಳ ಹಿಂದಿನ ತೀರ್ಮಾನ ಸರಿಯಾದುದೇ ಎಂಬುದರ ಬಗ್ಗೆ ಇಂದು ಆಲೋಚಿಸಿ ಮುಂದಿನ ಉತ್ತಮವಾದ ತೀರ್ಮಾನವನ್ನು ತೆಗೆದುಕೊ ಳ್ಳಬೇಕಾಗುವುದು. ಆಧ್ಯಾತ್ಮಿಕ ವಿಷಯಗಳತ್ತ ನಿಮ್ಮ ಮನಸ್ಸು ಹೊರಳುವುದು.
ಕುಂಭ
ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ಉಪಾಯವನ್ನು ಆಪ್ತರು ತಿಳಿಸಿಕೊಡುವರು. ವಕೀಲರು, ನ್ಯಾಯಾಂಗ ಇಲಾಖಾ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ. ಭೋಜನದ ಸಮಯವು ಹೆಚ್ಚು ಕಡಿಮೆ ಆಗುತ್ತದೆ.
ಮೀನ
ನೂತನ ಮನೆ ನಿರ್ಮಾಣದಲ್ಲಿರುವ ಸಹೋದರರಿಗೆ ಸಹಾಯ ಹಸ್ತ ನೀಡುವ ಮನಸ್ಸಾಗುವುದು. ಯೋಗ ಪಟುಗಳಿಗೆ ದೊಡ್ಡ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಮಾಡುವ ಅವಕಾಶ ದೊರೆಯುವ ಸಾಧ್ಯತೆಗಳಿದೆ.