ದಿನ ಭವಿಷ್ಯ: ಪ್ರೇಮಿಗಳ ಪಾಲಿಗೆ ಈ ದಿನ ಅತ್ಯುತ್ತಮವಾಗಿರುವುದು..
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಆಗಸ್ಟ್ 2025, 23:30 IST
Last Updated 16 ಆಗಸ್ಟ್ 2025, 23:30 IST
ದಿನ ಭವಿಷ್ಯ
ಮೇಷ
ನಿಮ್ಮ ನಿರ್ಧಾರಗಳು ನಿಮ್ಮ ಏಕಾಂಗಿತನಕ್ಕೆ ಕಾರಣವಾಗುವುದು. ವಾಯು ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು. ತಾಯಿಯ ಆರೋಗ್ಯ ಸುಧಾರಿಸಲು ಧಾರ್ಮಿಕ ಕಾರ್ಯವನ್ನು ಮಾಡಿ
ವೃಷಭ
ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಬರುವ ಸನ್ನಿವೇಶಗಳನ್ನು ನಿಮ್ಮ ನಿಜ ಜೀವನದಲ್ಲಿ ಕಲ್ಪಿಸಿಕೊಳ್ಳಬೇಡಿ. ಪ್ರೇಮಿಗಳ ಪಾಲಿಗೆ ಈ ದಿನ ಅತ್ಯುತ್ತಮವಾಗಿರುವುದು. ನಿಮ್ಮ ಸಾಧನೆಗಳ ಬಗ್ಗೆ ನಿಮಗೆ ಹೆಮ್ಮೆ ಎನಿಸುವುದು.
ಮಿಥುನ
ಸಂಧಾನ ಅಥವಾ ಕರಾರು ಒಪ್ಪಂದಗಳು ನಿಮಗೆ ಅನುಕೂಲಕರವೆನಿಸಲಿದೆ. ಬಯಕೆಗಳು ಈಡೇರುವುದು. ಶನೈಶ್ಚರನ ಆರಾಧನೆಯಿಂದ ಜಟಿಲ ಸಮಸ್ಯೆಯು ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
ಕರ್ಕಾಟಕ
ಸಾರಿಗೆ ಉದ್ಯೋಗ, ಸಂಪಾದನೆಗೆ ನೂತನವಾಗಿ ತೊಡಗುವವರಿಗೆ ಈ ಸಮಯ ಅಭಿವೃದ್ಧಿದಾಯಕ. ತಂದೆಯ ಕಣ್ಣಿನ ಚಿಕಿತ್ಸೆ ಫಲಕಾರಿಯಾಗಲಿದೆ. ಧಾನ್ಯ ಬೆಳೆಗಳ ಮಾರಾಟದಿಂದ ಲಾಭವಿರುವುದು.
ಸಿಂಹ
ದಾಂಪತ್ಯ ಜೀವನದಲ್ಲಿ ಬಂದಿರುವ ಬಿರುಕನ್ನು ಸರಿಮಾಡಿಕೊಳ್ಳಲು ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಗುರು ಅನುಗ್ರಹ ಉತ್ತಮವಿರುವುದರಿಂದ ಕೆಲಸಕಾರ್ಯಗಳು ಸರಾಗವಾಗಿ ನಡೆಯಲಿದೆ.
ಕನ್ಯಾ
ನಿಮ್ಮ ಮನೆಯ ಕೆಲಸಗಾರರು ನಿಮಗಾಗಿ ಶ್ರಮಿಸುವುದರಿಂದ ಅವರನ್ನು ಗೌರವದಿಂದ ಕಾಣುವುದು ಸೂಕ್ತ. ಇಂದು ನೀವಾಡುವ ಮಾತು ಬಹಳ ಮುಖ್ಯವಾಗಿರುವುದರಿಂದ ಕಡಿಮೆ ಹಾಗೂ ತೂಕದ ಮಾತನಾಡಿ.
ತುಲಾ
ಎಲ್ಲರೊಂದಿಗೆ ಬೆರೆಯುವ ಭಾವ ಹೆಚ್ಚುವುದು. ವ್ಯವಹಾರಗಳನ್ನು ವ್ಯವಸ್ಥಿತಗೊಳಿಸಲು ಸರಿಯಾದ ಸಮಯ. ಜೀವನದಲ್ಲಿ ಭದ್ರತೆ ಒದಗಿ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ. ಜಗನ್ಮಾತೆಯನ್ನು ಆರಾಧಿಸಿ ಶುಭವಾಗುವುದು.
ವೃಶ್ಚಿಕ
ಎಲ್ಲ ದಾರಿಗಳೂ ಸುಗಮ ಎನಿಸಿ, ಕಷ್ಟಗಳೂ ನಿವಾರಣೆಯಾಗಲಿವೆ. ಕೆಲಸಗಳನ್ನು ಮುಂದುಹಾಕದೆ ಪೂರ್ಣಗೊಳಿಸಲು ಪ್ರಯತ್ನಿಸಿ. ಮಿತ್ರರ ಸಹಕಾರದಿಂದ ಮತ್ತು ಅವರ ಚಾಣಾಕ್ಷ ವರ್ತನೆಯಿಂದ ವ್ಯಾಪಾರದಲ್ಲಿ ಪ್ರಗತಿ.
ಧನು
ರಾತ್ರಿ ಅನಿವಾರ್ಯ ಕಾರಣಗಳಿಂದ ಆದ ನಿದ್ರಾಹೀನತೆಯು ಕೆಲಸದ ಸಮಯದಲ್ಲಿ ಬಹಳ ಕಾಡುವ ಸಂಭವವಿದೆ. ಯಾವ ಪರಿಸ್ಥಿತಿಯಲ್ಲಿಯೂ ಧೈರ್ಯಗೆಡುವುದು ಸರಿಯಲ್ಲ. ಸ್ವಂತ ವಿಚಾರಕ್ಕೆ ಜಿಪುಣರ ರೀತಿ ವರ್ತಿಸಬೇಡಿ.
ಮಕರ
ದಿನಗೂಲಿ ಲೆಕ್ಕದಲ್ಲಿ ದುಡಿಮೆ ಮಾಡುತ್ತಿರುವವರಿಗೆ ಜೀವನದಲ್ಲಿ ಅಸ್ಥಿರತೆ ಕಾಡಲು ಶುರುವಾಗುತ್ತದೆ. ನೀವು ತೆಗೆದುಕೊಳ್ಳುವ ಆಹಾರದ ವಿಚಾರವಾಗಿ ನಿರ್ಲಕ್ಷ್ಯವು ಆರೋಗ್ಯಕ್ಕೆ ಒಳ್ಳೆಯದಲ್ಲ.
ಕುಂಭ
ಚರ್ಮ ಸಂಬಂಧಿ ಕಾಯಿಲೆಗಳಿದ್ದಲ್ಲಿ ಆಯುರ್ವೇದ , ನಾಟಿ ಚಿಕಿತ್ಸೆ ಪರಿಣಾಮಕಾರಿಯಾಗಿ ಕಾಣುತ್ತದೆ. ಮಗಳ ಶಿಫಾರಸ್ಸಿನ ಮೇಲೆ ಖರೀದಿಸಿದ ಆಸ್ತಿಯು ಲಾಭದಾಯಕವಾದದ್ದು ಎಂದು ಮನವರಿಕೆಯಾಗುತ್ತದೆ.
ಮೀನ
ಬರಹಗಾರರಿಗೆ ಉತ್ತೇಜನ, ಪ್ರಕಾಶಕರಿಂದ ಪ್ರಶಂಸೆ ಜೊತೆಗೆ ಹೊಸ ಪ್ರಕಟನೆಗಾಗಿ ಸಮಾಲೋಚನೆ ನಡೆಸುವರು. ಆಮದು ಹಾಗೂ ರಫ್ತು ವ್ಯಾಪಾರಸ್ಥರಿಗೆ ಕೆಲವೊಂದು ನಿಯಮಗಳ ಸಡಿಲಿಕೆಯಿಂದ ಹೆಚ್ಚಿನ ವಹಿವಾಟು ಸಾಧ್ಯ.