ADVERTISEMENT

ದಿನ ಭವಿಷ್ಯ: ವ್ಯವಹಾರಿಕ ತಯಾರಿ ಸದಾಕಾಲ ಸಿದ್ಧವಿರಲಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಫೆಬ್ರುವರಿ 2024, 18:30 IST
Last Updated 16 ಫೆಬ್ರುವರಿ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಬದುಕಿನ ಸಾರ ತಿಳಿಯುವುದು ಕಷ್ಟಕರ ವಿಷಯವಾದರೂ ಅದರ ಬಗ್ಗೆ ಹೆಚ್ಚಿನ ಆಲೋಚನೆಯಲ್ಲಿ ತೊಡಗುವಿರಿ. ಸಂಜೆಯ ತಿಳಿ ವಾತಾವರಣ ಮನಸ್ಸಿನ ಹಾಗೂ ದೇಹದ ಆಯಾಸವನ್ನು ಇಂಗಿಸಲಿದೆ.
  • ವೃಷಭ
  • ಮಿತ್ರರಿಂದ ಉತ್ತಮ ಸಹಾಯ ದೊರೆಯುವ ಶುಭ ಸೂಚನೆಯೊಂದಿಗೆ ಪ್ರಾರಂಭವಾಗುವ ಈ ದಿನವು ನಿಮ್ಮ ಜೀವನದಲ್ಲಿ ಮಹತ್ವಪೂರ್ಣ ದಿನವಾಗಿ ಪರಿಣಮಿಸಲಿದೆ. ವ್ಯವಹಾರಿಕ ತಯಾರಿ ಸದಾಕಾಲ ಸಿದ್ಧವಿರಲಿ.
  • ಮಿಥುನ
  • ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹೆಚ್ಚಿನ ತಯಾರಿ ನಡೆಸುವುದರಿಂದ ಮನೋಲ್ಲಾಸ ಪ್ರತಿಫಲ ಸಿಗುತ್ತದೆ. ವಿವಾಹಕ್ಕೆ ಸೋದರಿಕೆಯಲ್ಲಿ ಸಂಬಂಧ ಪ್ರಸ್ತಾಪ ನಡೆಸಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.
  • ಕರ್ಕಾಟಕ
  • ಸೃಜನಶೀಲ ಯೋಜನೆಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಎಲ್ಲವೂ ನಿಮ್ಮ ನಿರೀಕ್ಷೆಯಂತೆ ನಡೆಯಲಿದೆ. ಸ್ತ್ರೀಯರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ನಿರುತ್ಸಾಹಿಯಾಗಿರುತ್ತೀರಿ.
  • ಸಿಂಹ
  • ಅನಿವಾರ್ಯತೆಗೆ ಬಂಧು ಮಿತ್ರರಿಂದ ಸಹಕಾರ ಲಭ್ಯವಾಗುವುದು. ಕುಟುಂಬದ ಶುಭ ಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗುವುದು. ಮಗನ ಜವಾಬ್ದಾರಿಯುತ ನಡವಳಿಕೆ ಹೆಮ್ಮೆ ಎನಿಸುವುದು.
  • ಕನ್ಯಾ
  • ಇತ್ತೀಚಿನ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸಲು ಸ್ವಲ್ಪ ಸಮಯ ಮೀಸಲಿಡಿ. ಸಾಧ್ಯವಾದಷ್ಷು ಸಮಾಧಾನ ತಾಳ್ಮೆಯಿಂದ ಮುಂದುವರಿದಲ್ಲಿ ಮಾನಸಿಕ ನೆಮ್ಮದಿ ಕಾಣುವಿರಿ. ಅನಿವಾರ್ಯಕ್ಕಾಗಿ ವಾಹನ ಕೊಳ್ಳುವಿರಿ.
  • ತುಲಾ
  • ಪ್ರಯತ್ನಗಳು ವ್ಯರ್ಥವಾಗದೆ ಸರಿಯಾಗಿ ಫಲಿತಾಂಶವನ್ನು ಪಡೆಯಲು ಮನೆ ದೇವರ ಹಾಗೂ ಗುರುಹಿರಿಯರ ಆರ್ಶೀವಾದ ಪಡೆಯಿರಿ. ಮಧ್ಯವರ್ತಿಗಳ ಸಹಾಯದಿಂದಾಗಿ ವ್ಯಾಪಾರದ ವಿಷಯದಲ್ಲಿ ಅನುಕೂಲವಾಗಲಿದೆ.
  • ವೃಶ್ಚಿಕ
  • ಎದುರಾಗುವ ಅವಕಾಶಗಳಿಂದ ನಿಮ್ಮ ಜೀವನದ ಉತ್ಸಾಹದ ಚಿಲುಮೆ ಇಮ್ಮಡಿಗೊಳ್ಳಲಿದೆ. ಮೊದಲು ಪ್ರಯತ್ನ ಸಫಲವಾಗಿದ್ದರಿಂದ ಉತ್ಸಾಹ ಗರಿಗೆದರಿದೆ. ಸಗಟು ವ್ಯಾಪಾರಿಗಳಿಗೆ ಹೇರಳ ಲಾಭ ದೊರಕಲಿದೆ.
  • ಧನು
  • ವಿಶೇಷ ವ್ಯಕ್ತಿಗಳ ಭೇಟಿ ಈ ದಿನ ನಿಮಗೆ ಸಂತೋಷ ತರುವುದಲ್ಲದೆ, ನಿಮ್ಮ ಹೊಸ ಯೋಜನೆಗಳಿಗೆ ಚೈತನ್ಯ ತುಂಬುವುದು. ಮಾತು ಮಿತವಾಗಿ ಮತ್ತು ಸತ್ಯವಾಗಿರಲಿ. ಹೊಗಳಿಕೆಯ ಮಾತುಗಳಿಗೆ ಮರಳಾಗಬೇಡಿ.
  • ಮಕರ
  • ಜೀವನದಲ್ಲಿ ಬಯಸಿದ ನೆಲೆಯನ್ನು ಗಟ್ಟಿಗೊಳಿಸಿಕೊಂಡ ಸಂತೃಪ್ತಿ ತುಂಬಿರುತ್ತದೆ. ರೈತರಿಗೆ ಕಾಡು ಪ್ರಾಣಿಗಳ ಕಾಟದಿಂದಾಗಿ ನಷ್ಟ ಸಂಭವಿ ಸಬಹುದು. ಮನೆಯವರ ಸಲಹೆಯಂತೆ ಪ್ರಯಾಣ ಕೈಗೊಳ್ಳಬೇಕಾಗುವುದು.
  • ಕುಂಭ
  • ಕೆಲಸ ಕಾರ್ಯಗಳು ಈಡೇರಿದರೂ ಅದಕ್ಕಾಗಿ ಬಹಳ ಹಣ ವ್ಯಯಿಸಬೇಕಾಗಬಹುದು. ಪ್ರಯತ್ನ ಬಲಕ್ಕೆ ಉತ್ತಮ ಫಲ ದೊರೆಯುವುದು. ಇಂದು ಶರೀರದಲ್ಲಿ ಉಲ್ಲಾಸ ಹಾಗೂ ಕಾರ್ಯಪ್ರವೃತ್ತಿಯನ್ನು ಹೊಂದುತ್ತೀರಿ.
  • ಮೀನ
  • ರಫ್ತು ಮಾರಾಟದಲ್ಲಿ ಹಿನ್ನಡೆ ಎದುರಾದರೂ, ಆದಾಯಕ್ಕೇನೂ ತೊಂದರೆಯಿಲ್ಲ. ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಬಹಳವಾದುದು ಎಂದು ತಿಳಿದುಕೊಳ್ಳುವಿರಿ. ಅನಾರೋಗ್ಯ ಭೀತಿ ಉಂಟಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.