ADVERTISEMENT

ದಿನ ಭವಿಷ್ಯ | ಸಮಯೋಚಿತ ಕಾರ್ಯ ನಡೆಸುವಲ್ಲಿ ಆಲಸ್ಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಜುಲೈ 2025, 18:30 IST
Last Updated 16 ಜುಲೈ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ. ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ‌ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯ
  • ವೃಷಭ
  • ಯಂತ್ರೋಪಕರಣಗಳ ಮಾರಾಟ, ಪಶು ಸಂಗೋಪನೆಯಿಂದ ಹೆಚ್ಚಿನ ಲಾಭ. ಜೀವನದ ಅಭಿವೃದ್ಧಿಗೆ ಬೇಕಾದ ಕಾರ್ಯ ಮುಂದುವರಿಯಲಿದೆ. ಕೆಲಸದ ಅನ್ವೇಷಣೆಯಲ್ಲಿರುವವರಿಗೆ ಶುಭ ಫಲಗಳು ಲಭಿಸುವುದು.
  • ಮಿಥುನ
  • ಸ್ವಯಂ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲವಿರುವುದು. ರಾಜಕೀಯ ವಿಷಯಗಳಲ್ಲಿ ಮೌನ ವಹಿಸುವುದು ಅತ್ಯಂತ ಲೇಸು. ಉದ್ವೇಗಕ್ಕೆ ಒಳಗಾಗದಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವುದು.
  • ಕರ್ಕಾಟಕ
  • ಮನೆಯಲ್ಲಿ ಅಹಿತಕರ ಘಟನೆ ನಡೆಯುವ ಸೂಚನೆ ಕಾಣಿಸಬಹುದು. ತಾಳ್ಮೆಯಿಂದ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ದುರ್ಗಾಪರಮೇಶ್ವರಿಯ ಆರಾಧನೆಯು ನಿಮಗೆ ಶಾಂತಿದಾಯಕವಾಗಿರುತ್ತದೆ.
  • ಸಿಂಹ
  • ಆರ್ಥಿಕತೆ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ನೀವು ಈ ದಿನ‌ ಅಪೇಕ್ಷಿಸಬಹುದು. ಶನಿಯು ಪ್ರವಾಸದಿಂದ ಪ್ರಯಾಸ ಪಡಿಸುತ್ತಾನೆ. ಧಾರ್ಮಿಕ ಚಿಂತನೆಯನ್ನು ಮುಂದುವರಿಸಿ.
  • ಕನ್ಯಾ
  • ಗುರು-ಹಿರಿಯರ ಅನುಗ್ರಹದಿಂದ, ನಿಮ್ಮ ಶಾಂತಿಯುತ ಸ್ವಭಾವದಿಂದ ನೆಮ್ಮದಿ ಕಾಣುವಿರಿ. ನ್ಯಾಯಾಲಯದಲ್ಲಿ ಜಯ ಪ್ರಾಪ್ತಿಯಾಗುವುದು ಹಾಗೆಯೇ ಸರ್ಕಾರಿ ಕಛೇರಿಯಲ್ಲಿ ನಿಮ್ಮಿಷ್ಟದಂತೆ ಕೆಲಸ-ಕಾರ್ಯಗಳು ಆಗುತ್ತವೆ.
  • ತುಲಾ
  • ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯವಾಗುವುದು. ಹೂವು-ಹಣ್ಣು ಮಾರಾಟಗಾರರಿಗೆ ಲಾಭವು ದುಪ್ಪಟ್ಟಾಗಲಿದೆ. ಹೊಸ ಪರಿವರ್ತನೆ ನಿಮ್ಮ ಬಾಳಲ್ಲಿ ಬರಲಿದೆ. ಬಿಳಿ ಬಣ್ಣ ಶುಭವನ್ನು ಉಂಟುಮಾಡಲಿದೆ.
  • ವೃಶ್ಚಿಕ
  • ಸಮಸ್ಯೆಯ ಗೋಪುರವನ್ನು ಹೊತ್ತಿರುವ ನಿಮಗೆ ಹಂತಹ‌ಂತವಾಗಿ ಪರಿಹಾರ ದೊರಕಲಿದೆ. ನೂತನ ಮನೆ ನಿರ್ಮಾಣ ಅಥವಾ ನಿವೇಶನಗಳ ಖರೀದಿಗೆ ಪೂರಕವಾದ ವಾತಾವರಣ ಸ್ನೇಹಿತರಿಂದ ಸಿಗಲಿದೆ.
  • ಧನು
  • ಸರ್ಕಾರಿ ನೌಕರರಿಗೆ ವರ್ಗಾವಣೆಯ ಯೋಗವಿದೆ. ಲೋಹದ ಕಾರ್ಖಾನೆ ಯವರು, ಚಿನ್ನಾಭರಣ ವ್ಯಾಪಾರಿಗಳು ಅಧಿಕ ಲಾಭವನ್ನು ಹೊಂದುವಿರಿ. ಬದುಕಿನ ಬಗ್ಗೆ ಸರಿಯಾದ ಮಾರ್ಗದರ್ಶನ ದೊರೆಯಲಿದೆ.
  • ಮಕರ
  • ಗ್ರಹದ ಫಲಗಳು ಅನುಕೂಲಕರವಾಗಿ ತೋರುವುದರಿಂದ ದೈನಂದಿನ ವ್ಯಾಪಾರೋದ್ಯಮಗಳಲ್ಲಿ ನಿರೀಕ್ಷೆಗೂ ಮಿಕ್ಕಿ ಲಾಭವಾಗುವುದು. ನಿಮ್ಮನ್ನು ಕಾಡುವ ಸಮಸ್ಯೆ ಹೆಚ್ಚಿನ ಶ್ರಮವಿಲ್ಲದೆ ಪರಿಹಾರವಾಗುವುದು.
  • ಕುಂಭ
  • ಹೈನುಗಾರಿಕೆಯವರಿಗೆ ವೃತ್ತಿಯಲ್ಲಿ ಆಸಕ್ತಿ ಮೂಡಲಿದೆ. ತಾತ್ಕಾಲಿಕ ಹುದ್ದೆಯವರಿಗೆ ಕಾಯಂ ಆಗುವ ಸಾಧ್ಯತೆ ಇರುತ್ತದೆ. ಸಹೋದರರಿಂದ ಧನಾಗಮನ. ಜಗದ್ಗುರುಗಳ ಸೇವೆಯಿಂದ ಅಭೀಷ್ಟ ಸಿದ್ಧಿಯಾಗುವುದು.
  • ಮೀನ
  • ಸಮಯೋಚಿತ ಕಾರ್ಯ ನಡೆಸುವಲ್ಲಿ ಆಲಸ್ಯ, ವಾದ-ವಿವಾದಗಳಲ್ಲಿ ನಿಷ್ಕಾರಣ ವೈಷಮ್ಯ, ಪರಿವಾರದಲ್ಲಿ ಅಭಿಪ್ರಾಯ ಭೇದಗಳಿಂದ ತಾಪತ್ರಯಕ್ಕೆ ಗುರಿಯಾಗುವಿರಿ. ಪದವೀಧರರಿಗೆ ಸನ್ಮಾನದಂತಹ ಗೌರವ ದೊರಕಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.