ADVERTISEMENT

ದಿನ ಭವಿಷ್ಯ: ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಫೆಬ್ರುವರಿ 2024, 18:30 IST
Last Updated 17 ಫೆಬ್ರುವರಿ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಾಹನಗಳ ಬಿಡಿ ಭಾಗ ಮಾರಾಟಗಾರರು ಮತ್ತು ರಿಪೇರಿ ಮಾಡುವವರಿಗೆ ಬಿಡುವಿಲ್ಲದ ದಿನ. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆ ಆಗಲಿದೆ. ದೈವಾನುಗ್ರಹದಿಂದಾಗಿ ಹಿಡಿದ ಕೆಲಸಗಳು ದಡ ಸೇರುವುದು.
  • ವೃಷಭ
  • ವಾಣಿಜ್ಯೋದ್ಯಮ ಮಂದಿಗೆ ಇಂದು ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಲು ಉತ್ತಮ ದಿನವಾಗಿದೆ. ವ್ಯಾಪಾರ ಕ್ಷೇತ್ರದಲ್ಲಿನ ನಿಮ್ಮ ಪೈಪೋಟಿಗಾರರಿಗೆ ಬಹಳ ಹಿಂದುಳಿಕೆಯ ದಿನವಾಗಲಿದೆ.
  • ಮಿಥುನ
  • ಗಂಭೀರ ಹಂತದಲ್ಲಿರುವ ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಈ ದಿನ ಯಶಸ್ವಿಯಾಗುವಿರಿ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.
  • ಕರ್ಕಾಟಕ
  • ಈ ದಿನದ ಪರಿಸ್ಥಿತಿಗಳನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಸರಳ ಸ್ವಭಾವದಿಂದ ಹೆಚ್ಚಿನ ಮೆಚ್ಚುಗೆ ಪಡೆಯಬಹುದು. ಪಾಲುದಾರಿಕೆ ಒಪ್ಪಂದ ಏರ್ಪಡಲಿದೆ.
  • ಸಿಂಹ
  • ನಿಮ್ಮ ವಿಶಾಲ ಮನೋಭಾವದ ಗುಣದಿಂದಾಗಿ ನಿಮಗೆ ದೇವರ ರಕ್ಷಣೆ ಪ್ರಾಪ್ತಿಯಾಗಲಿದೆ. ನಿಮ್ಮ ಆಹಾರ ಶೈಲಿಯಿಂದ ಆರೋಗ್ಯ ಹದಗೆಡುವ ಸಂಭವವಿದೆ. ಕೆಲಸದ ನಿಮಿತ್ತ ಮಗಳನ್ನು ವಿದೇಶಕ್ಕೆ ಕಳುಹಿಸುವಿರಿ.
  • ಕನ್ಯಾ
  • ಗೃಹ ನಿರ್ಮಾಣ ಮತ್ತು ಸ್ವತ್ತು ಸಂಪಾದನೆಯಂತಹ ಕಾರ್ಯಗಳ ಸಂಭವವಿದೆ. ಈ ತರಹದ ವಿಷಯದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಕಾಲ ಕೂಡಿಬಂದಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.
  • ತುಲಾ
  • ಸಹೋದ್ಯೋಗಿಗಳಲ್ಲಿ ಪ್ರೀತಿಯಿಂದ ವರ್ತಿಸುವುದರಿಂದ ನಿಮ್ಮ ಕೆಲಸ ಸರಾಗವಾಗಿ ಸಾಗಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಎಲ್ಲರೂ ಮೆಚ್ಚುವಂತೆ ಪರಿಹರಿಸಿಕೊಳ್ಳುವ ಸಾಮರ್ಥ್ಯ ವೃದ್ಧಿಯಾಗಲಿದೆ.
  • ವೃಶ್ಚಿಕ
  • ಸ್ನೇಹಿತನ ಹಣವನ್ನು ದಿನದಾಂತ್ಯಕ್ಕೆ ಹಿಂದಿರುಗಿಸುವಿರಿ. ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು, ನವ ಉಲ್ಲಾಸ ಕಾಣಲಿದ್ದೀರಿ. ಕಟ್ಟಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ನಷ್ಟ ಮತ್ತು ಕಾರ್ಮಿಕರ ಕೊರತೆಯು ಉಂಟಾಗಲಿದೆ.
  • ಧನು
  • ಮನೆಯ ಜವಾಬ್ದಾರಿಯನ್ನು ಮಗನಿಗೆ ವಹಿಸುವ ಆಲೋಚನೆ ಬರಲಿದೆ. ಆದರೆ ಯಾವುದೇ ತರಹದ ತೀರ್ಮಾನ ತೆಗೆದುಕೊಳ್ಳಬೇಡಿ. ಹಲವು ದಿನಗಳ ಬಳಿಕ ಹಣಕಾಸು ಪರಿಸ್ಥಿತಿ ಸುಧಾರಣೆಗೊಳ್ಳುವುದು.
  • ಮಕರ
  • ಬಂದ ಅವಕಾಶವನ್ನು ವಿವೇಚನೆಯಿಂದ ಸದುಪಯೋಗಪಡಿಸಿಕೊಳ್ಳಿ. ನಿಮ್ಮಲ್ಲಿರುವ ಸಹಾಯ ಮನೋಭಾವ ನಿಮ್ಮನ್ನು ಮಿಕ್ಕವರೆಲ್ಲರಿಗಿಂತ ವಿಭಿನ್ನವಾದ ಸ್ಥಾನದಲ್ಲಿ ನಿಲ್ಲಿಸಲಿದೆ. ಸಂಬಂಧಿಕರೆಲ್ಲ ಹತ್ತಿರವಾಗುತ್ತಾರೆ.
  • ಕುಂಭ
  • ಕಾರ್ಯಕ್ಷೇತ್ರದಲ್ಲಿ ಆಗಾಗ ಪ್ರಯತ್ನ ಬಲಕ್ಕೆ ಅಡ್ಡಿ ಆತಂಕಗಳಿದ್ದರೂ ಈ ದಿನ ನಿಮ್ಮ ಕಾರ್ಯ ಸಾಧನೆಯಲ್ಲಿ ಜಯ ಕಾಣುವುದರ ಬಗ್ಗೆ ಸಂದೇಹವಿಲ್ಲ. ಪೊಲೀಸರಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ.
  • ಮೀನ
  • ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಲಿದೆ. ಗುತ್ತಿಗೆ ಕೆಲಸಗಾರರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಾಲ ಮಾಡುವ ಯೋಚನೆ ಕೈ ಬಿಡುವುದು ಉತ್ತಮ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.