ADVERTISEMENT

ದಿನ ಭವಿಷ್ಯ: ಶತ್ರುಗಳ ಬಾಧೆ ದೂರವಾಗಿ ಯೋಜನೆಗಳು ಈಡೇರಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಡಿಸೆಂಬರ್ 2025, 18:30 IST
Last Updated 18 ಡಿಸೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅವಕಾಶಗಳ ಬಗ್ಗೆ ಯೋಚಿಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಏಜೆನ್ಸಿಯಂತಹ ಉದ್ಯೋಗ ತೆರೆಯಲು ಸೂಕ್ತ ಸ್ಥಳಾವಕಾಶ ಹುಡುಕಾಟದ ಕೆಲಸ ಆರಂಭಿಸುವಿರಿ.
  • ವೃಷಭ
  • ದೇಹದಲ್ಲಿ ಉತ್ಸಾಹವಿರುವುದರಿಂದ ಯಶಸ್ಸು ದೊರೆಯುವುದು. ಇನ್ನೊಬ್ಬರಿಗೆ ಬೆಲೆ ಕೊಟ್ಟು ನೀವು ಬೆಲೆ ಸಂಪಾದಿಸಿಕೊಳ್ಳುವುದನ್ನು ಅಭ್ಯಾಸಿಸಿ. ಶತ್ರುಗಳ ಬಾಧೆ ದೂರಾಗಿ ಯೋಜನೆಗಳು ಈಡೇರಲಿವೆ.
  • ಮಿಥುನ
  • ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯವನ್ನು ಸೂಕ್ತ ರೀತಿಯಲ್ಲಿ ಮಾಡಿಕೊಳ್ಳಿ. ಸಂಘ ಸಂಸ್ಥೆಗಳಲ್ಲಿ ಅಧಿಕಾರ ಹೊರುವ ಸಂದರ್ಭವು ಬಂದಲ್ಲಿ, ಹಿಂದೆ ಸರಿಯುವುದು ಉತ್ತಮ. ರಕ್ತದೊತ್ತಡವು ನಿಯಂತ್ರಣಕ್ಕೆ ಬರುವುದು.
  • ಕರ್ಕಾಟಕ
  • ದವಸ ಧಾನ್ಯ ಹಾಗೂ ಮಸಾಲಾ ಸಾಮಗ್ರಿಗಳ ಸಗಟು ಹಾಗೂ ರಫ್ತು ವ್ಯಾಪಾರಿಗಳಿಗೆ ಅನುಕೂಲವಾಗುವುದು. ಮನೆಯಲ್ಲಿ ದುರ್ಗಾ ಸ್ತೋತ್ರ ಪಠಿಸಿದರೆ ಯಶಸ್ಸು ದೊರೆಯುವುದು.
  • ಸಿಂಹ
  • ಹೆಚ್ಚಿನ ಆತ್ಮಸ್ಥೈರ್ಯದಿಂದ ಕೆಲಸವನ್ನು ಪ್ರಾರಂಭಿಸಿದರೂ ಜಯ ಕಾಣುವಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರಿದಷ್ಟೂ ಸುಖ-ಶಾಂತಿ ಹೆಚ್ಚುವುದು. ಸ್ಪರ್ಧಾ ಮನೋಭಾವ ತೀವ್ರಗೊಳ್ಳುವುದು.
  • ಕನ್ಯಾ
  • ವೈಯಕ್ತಿಕ ಕೆಲಸಗಳಿಗೆ ಮೇಲಧಿಕಾರಿಗಳಿಂದ ಅಡಚಣೆ ಇರುವುದಿಲ್ಲ. ಹಿರಿಯರ ಆಶೀರ್ವಾದದಿಂದ ಕಾರ್ಯಗಳಲ್ಲಿ ಜಯ ಹೊಂದುವಿರಿ. ಗೆಳೆಯರೊಂದಿಗೆ ಪ್ರವಾಸ ಹೋಗಲು ದಿನ ನಿಶ್ಚಿತವಾಗುವುದು.
  • ತುಲಾ
  • ಕೀಳರಿಮೆ, ಹಿಂಜರಿಕೆಯ ಸ್ವಭಾವ ಅಥವಾ ಅಹಂಕಾರದ ನಡವಳಿಕೆ ಯನ್ನು ಬಿಟ್ಟು ಕಾರ್ಯ ಕೈಗೊಳ್ಳಲು ಮುಂದಾಗಿ, ಗೆಲುವು ನಿಮ್ಮದಾಗುತ್ತದೆ. ವಿದೇಶಿ ವಸ್ತುಗಳ ಖರೀದಿಗಾಗಿ ಅಧಿಕ ಮಟ್ಟದಲ್ಲಿ ಧನವ್ಯಯ ಮಾಡುವಿರಿ.
  • ವೃಶ್ಚಿಕ
  • ಮನೆಯ ದಾಖಲೆ ಪತ್ರಗಳನ್ನು, ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಕಾರ್ಯದ ಬಗ್ಗೆ ಯೋಚನೆ ಮಾಡಿ. ಪೊಲೀಸ್‌ ವೃತ್ತಿಯಲ್ಲಿರುವವರಿಗೆ ಸಂಚಾರ ಕಂಡುಬರಲಿದೆ.
  • ಧನು
  • ಮಾನಸಿಕ ನೆಮ್ಮದಿಗಾಗಿ ಧಾರ್ಮಿಕ ಕಾರ್ಯಗಳನ್ನು ಅಥವಾ ಪುಣ್ಯಕ್ಷೇತ್ರಗಳ ದರ್ಶನ ಮಾಡಲಿರುವಿರಿ. ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅವಕಾಶಗಳು ಸಿಗಲಿವೆ.
  • ಮಕರ
  • ಅತಿಯಾದ ಔದಾರ್ಯತನ ತೋರಬೇಕೆನಿಸಿದಲ್ಲಿ ಹಣಕಾಸಿನ ಸ್ಥಿತಿಯನ್ನು ಗಮನಿಸಿಕೊಳ್ಳಿರಿ. ಸಂಗೀತದಲ್ಲಿ ಪರಿಣತಿ ಹೊಂದಿರುವವರಿಗೆ ಅವಕಾಶಗಳು ಅರಸಿ ಬರಲಿವೆ.
  • ಕುಂಭ
  • ಕಲೆ, ಆಲಂಕಾರಿಕ ಹಾಗೂ ವೈಭೋಗ ವಸ್ತುಗಳಿಂದ ಲಾಭಾಂಶವನ್ನು ನಿರೀಕ್ಷಿಸಬಹುದು. ಪರಿಸ್ಥಿತಿಯನ್ನು ಬುದ್ಧಿವಂತಿಕೆ ಮತ್ತು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು.
  • ಮೀನ
  • ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾದರೂ ಮೂಲಧನಕ್ಕೆ ಮೋಸವಾಗುವುದಿಲ್ಲ. ರಾಜಕೀಯ ವಿದ್ಯಮಾನಗಳಿಂದಾಗಿ ಓಡಾಟ ಆಧಿಕಗೊಳ್ಳುವುದು. ಶ್ರಮದ ಬದುಕಿನಿಂದ ಹೊಸ ಘಟ್ಟವನ್ನು ತಲುಪುವಂತಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.