ದಿನ ಭವಿಷ್ಯ: ಈ ರಾಶಿಯವರಿಗೆ ಜಗನ್ಮಾತೆಯ ಆರಾಧನೆಯಿಂದ ಶುಭವಾಗಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಜುಲೈ 2024, 22:05 IST
Last Updated 19 ಜುಲೈ 2024, 22:05 IST
ಮೇಷ
ನಿಮ್ಮ ನಿಸ್ವಾರ್ಥ ಪ್ರಯತ್ನಗಳು ಯಶಸ್ಸಿನ ಹಾದಿಯಲ್ಲಿವೆ. ಶ್ರೇಯಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಹೆಚ್ಚಿನ ಸಂತಸ ಸಿಗುವುದು. ನೂತನ ವಾಹನ ಖರೀದಿಸಬಹುದು.
ವೃಷಭ
ದೂರದ ಸಂಬಂಧಿಕರೊಬ್ಬರ ಆಗಮನವು ಮನೆಯಲ್ಲಿ ಸಡಗರ ಸೃಷ್ಟಿಸಲಿದೆ. ಮೇಧಾವಿಗಳೊಂದಿಗಿನ ಸಂಪರ್ಕದಿಂದಾಗಿ ಅರಿವು ಹೆಚ್ಚಲಿದೆ. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ದೊರೆಯುತ್ತದೆ.
ಮಿಥುನ
ಒಳ್ಳೆಯ ನಿರ್ಧಾರಗಳಿಗೆ ಕೆಲವು ಪ್ರಭಾವಿಗಳ ಹಸ್ತಕ್ಷೇಪ ಇರಬಹುದು. ನಿಮ್ಮ ಬುದ್ಧಿಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳುವುದರಿಂದ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಮಾವು ವ್ಯಾಪಾರಿಗಳಿಗೆ ಲಾಭವಾಗಲಿದೆ.
ಕರ್ಕಾಟಕ
ಅನುಭವದ ಕೊರತೆ ನಿಮ್ಮ ವೈಫಲ್ಯಕ್ಕೆ ಪ್ರಧಾನ ಕಾರಣವಾಗಲಿದೆ. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಬರುವುದು. ಅನಿವಾರ್ಯವಾಗಿ ದೂರದ ಊರಿಗೆ ಪ್ರಯಾಣಿಸಬೇಕಾಗುವುದು.
ಸಿಂಹ
ಆಲಸ್ಯತನದಿಂದ ಕೆಲಸ ಕಾರ್ಯಗಳನ್ನು ಮುಂದೂಡುವ ವಿಚಾರ ಸರಿಯಲ್ಲ. ಕೊಡು– ಕೊಳ್ಳುವ ವಿಚಾರದಲ್ಲಿ ಜಾಗರೂಕರಾಗಿರುವುದು ಉತ್ತಮ. ಸಂಪಾದನೆ ಕಡಿಮೆಯಿದ್ದರೂ ಆರ್ಥಿಕ ಚಿಂತೆ ಇರದು.
ಕನ್ಯಾ
ಉದ್ಯೋಗಾವಕಾಶದ ದೃಷ್ಟಿಯಿಂದ ಈ ದಿನ ಬಹಳ ಮಹತ್ವಪೂರ್ಣವಾದುದು. ದುಃಖಗಳನ್ನೆಲ್ಲವನ್ನೂ ಮೀರಿ ಮುಖದಲ್ಲಿ ಮಂದಹಾಸ ಇಟ್ಟುಕೊಳ್ಳಿ. ಜವಬ್ದಾರಿ ಎಲ್ಲದಕ್ಕಿಂತಲೂ ಮುಖ್ಯವಾದುದು.
ತುಲಾ
ಜಮೀನು ಖರೀದಿಸುವ ಯೋಚನೆಗಳು ಬರುವವು ಹಾಗು ಅವು ಯೋಚನೆಯಾಗಿಯೇ ಉಳಿಯುವುವು. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ ಕಾಣುವಿರಿ. ನಿಮ್ಮ ಹಳೆಯ ಕಾಲೇಜಿಗೆ ಮರು ಭೇಟಿ ನೀಡುವಿರಿ.
ವೃಶ್ಚಿಕ
ಮನೆಯ ಆಸ್ತಿಯ ವಿಷಯದಲ್ಲಿ ಅನುಭವಸ್ತ ಆಪ್ತರಿಂದ ಬರುವ ಸಲಹೆ ಸೂಚನೆಗಳಿಗೆ ಗಮನ ನೀಡಿ. ಜಗನ್ಮಾತೆಯ ಆರಾಧನೆಯಿಂದ ಶುಭವಾಗಲಿದೆ. ಬಂಗಾರ ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯಲಿವೆ.
ಧನು
ಕೆಲಸಗಾರರಲ್ಲಿ ಒಮ್ಮತ ಮೂಡಿಸಲು ನೀವು ಅನುಸರಿಸಿದ ಮಾರ್ಗವನ್ನು ಮೇಲಧಿಕಾರಿಗಳು ಮೆಚ್ಚುವರು. ಸಮಾಜದಲ್ಲಿ ಅಸಭ್ಯವಾಗಿ ವರ್ತಿಸದೇ, ಗೌರವಾನ್ವಿತವಾಗಿ ಬದುಕುವುದನ್ನು ರೂಢಿಸಿಕೊಳ್ಳಿರಿ.
ಮಕರ
ಹರಿತವಾದ ವಸ್ತುಗಳ, ಯಂತ್ರಗಳ ಜೊತೆ ಕೆಲಸ ಮಾಡುವವರು ಈ ದಿನ ಜಾಗ್ರತೆಯಿಂದಿರಿ. ಸಹೋದರರ ಸ್ವತ್ತು ವಿಚಾರವಾಗಿ ಬಂಧುಗಳು ನೆರವಿಗೆ ಬರಲಿದ್ದು, ತಂದೆಯವರ ಮಾತಿನಂತೆಯೇ ನಡೆಯಲು ಒಪ್ಪುವಿರಿ.
ಕುಂಭ
ಶತ್ರುಗಳು ವಂಚನೆ ಮಾಡುವ ಸಲುವಾಗಿ ಮಿತ್ರರಾಗುವಂತೆ ನಟಸಿದರೂ, ಸ್ವಪ್ನದಲ್ಲಿ ಕೂಡಾ ಅಂತವರ ಬಗ್ಗೆ ಜಾಗ್ರತೆ ಅಗತ್ಯ. ಸಂದರ್ಶನಕ್ಕೆ ಹಾಜರಾಗುವವರು ಕಷ್ಟಪಡಬೇಕಾಗಬಹುದು.
ಮೀನ
ಪೋಷಕರ ವೈದ್ಯಕೀಯ ಖರ್ಚಿನಿಂದಾಗಿ ಆರ್ಥಿಕ ಸ್ಥಿತಿ ಏರುಪೇರಾಗಲಿದೆ. ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳುವಾಗ ಸಕಾರಾತ್ಮಕ ದೃಷ್ಟಿಕೋನವಿರಲಿ. ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಇದು ಸೂಕ್ತ ಕಾಲ.