ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಇಂದಿನ ಸಮಯವು ಅವಿಸ್ಮರಣೀಯವಾಗುವುದು..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಅಕ್ಟೋಬರ್ 2025, 23:30 IST
Last Updated 19 ಅಕ್ಟೋಬರ್ 2025, 23:30 IST
   
ಮೇಷ
  • ಶಿಕ್ಷಕರಾಗಿದ್ದರೆ ಗಿಳಿ ಪಾಠದಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಹಬ್ಬದ ಕೆಲಸಗಳು ಮಕ್ಕಳ ಸಹಾಯದಿಂದ ಸುಗಮವಾಗಿ ನಡೆಯಲಿವೆ.
  • ವೃಷಭ
  • ವ್ಯವಹಾರ ವಿಶ್ಲೇಷಣೆಗೂ ಹಾಗೂ ವಾಸ್ತವ ಪರಿಸ್ಥಿತಿಗೂ ಹಲವು ವ್ಯತ್ಯಾಸಗಳು ಉಂಟಾಗಬಹುದು. ಚಿನ್ನ, ಬೆಳ್ಳಿ ವ್ಯಾಪಾರಿಗಳು  ಅಭಿವೃದ್ಧಿ ಹೊಂದುವರು. ಊಟ ಉಪಹಾರಗಳನ್ನು ಸ್ವಗೃಹದಲ್ಲಿ ಮಾಡಿ.
  • ಮಿಥುನ
  • ಎಂಜಿನಿಯರ್‌ಗಳಿಗೆ ಹಿರಿಯ ಅನುಭವಿ ವ್ಯಕ್ತಿಗಳಿಂದ ಮಾರ್ಗದರ್ಶನ ದೊರೆಯುತ್ತದೆ. ಬರವಣಿಗೆಯ ಹವ್ಯಾಸಗಳಿಂದ ವರಮಾನ ಹೆಚ್ಚಲಿದೆ. ಇಂದಿನ ಸಮಯವು ಅವಿಸ್ಮರಣೀಯವಾಗುವುದು.
  • ಕರ್ಕಾಟಕ
  • ಇಷ್ಟದ ವಸ್ತು ಉಡುಗೊರೆಯ ರೂಪದಲ್ಲಿ ಕೈಸೇರುತ್ತದೆ. ನಿವೇಶನ ಅಥವಾ ಜಮೀನು ಖರೀದಿಸುವ ಯೋಚನೆಗಳು ಬರಲಿವೆ. ಕೆಮ್ಮು, ಶೀತವನ್ನು ಕಡೆಗಣಿಸದಿರಿ.
  • ಸಿಂಹ
  • ಮನದಲ್ಲಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಲು ಬೇಕಾದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಿ. ಯಾರಾದರೂ ಜೀವನದ ಬಗ್ಗೆ ಕೆಟ್ಟದಾಗಿ ಯೋಚನೆಯನ್ನು ಮಾಡುತ್ತಿದ್ದರೆ  ತಡೆಗಟ್ಟಲು ಸಾಧ್ಯ.
  • ಕನ್ಯಾ
  • ಮಸಾಲೆ ಪದಾರ್ಥ ಅಥವಾ ಖಾದ್ಯ ವಸ್ತುಗಳ ಮಾರಾಟದ ಉದ್ಯೋಗದವರು ನೆಮ್ಮದಿ ಕಾಣಬಹುದು. ಸಂಬಂಧಿಕರ ಆಗಮನದಿಂದ ಸಡಗರ ಹೆಚ್ಚಳವಾಗುವುದು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ.
  • ತುಲಾ
  • ನವದಂಪತಿಗೆ ಉಲ್ಲಾಸಕರ ಸಮಯವನ್ನು ಅನುಭವಿಸಲು ಕಾಲಾವಕಾಶ ಸಿಗಲಿದೆ. ಮಕ್ಕಳ ಸಣ್ಣ ಪುಟ್ಟ ಜಗಳಗಳನ್ನು ಬಗೆ ಹರಿಸಲು ಭಾಗಿಯಾಗದಿರಿ. ಸ್ವಯಂ ಸಾಮರ್ಥ್ಯದಿಂದ  ಅವಕಾಶ ಸಿಗಲಿದೆ.
  • ವೃಶ್ಚಿಕ
  • ಮನಸ್ಸಿಗೆ ಒಪ್ಪಿಗೆ ಇಲ್ಲದಂಥ ಕೆಲಸಗಳನ್ನು ಮಾಡುವಂತಹ ಸಾಹಸಕ್ಕೆ ಕೈಹಾಕಲು ಹೋಗದಿರಿ. ವಾರ್ಷಿಕವಾಗಿ ಆಚರಿಸುವ ದೇವತಾ ಕಾರ್ಯಗಳತ್ತ ಗಮನವನ್ನು ನೀಡಿ. ಹೊಸ ವಸ್ತುಗಳ ಖರೀದಿ ಇಂದು ಬೇಡ.
  • ಧನು
  • ಮಗನ ಕೆಲಸಗಳಿಗಾಗಿ ಅಲೆದಾಟ ಹೆಚ್ಚಿ ದಣಿವಾದರೂ ಕೆಲಸ ಕೈಗೊಂಡಿದ್ದಕ್ಕೆ ಮನಸ್ಸಿಗೆ ಸಮಾಧಾನ ಸಿಗುವುದು.  ವ್ಯಕ್ತಿಗಳನ್ನು ಸರಿಯಾಗಿ ಮಾತನಾಡಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಉತ್ತಮ.
  • ಮಕರ
  • ಶತ್ರುಗಳ ಪ್ರಾಬಲ್ಯವನ್ನು ನಿಮ್ಮ ಬುದ್ಧಿಮಟ್ಟದಿಂದ ಮಟ್ಟ ಹಾಕುವ ಸಮಯ ಇದಾಗಲಿದೆ. ಮನೆಯ ವ್ಯಕ್ತಿಗಳ ದೂರಪ್ರಯಾಣವು ಆತಂಕಕ್ಕೆ ಎಡೆ ಮಾಡಿಕೊಡಬಹುದು.  ರಫ್ತು ವ್ಯಾಪಾರದಿಂದ ಹೇರಳ ಲಾಭ ಸಿಗುತ್ತದೆ.
  • ಕುಂಭ
  • ಅವಮಾನಿಸಿದ ವ್ಯಕ್ತಿಗಳಿಂದ ಗೌರವ ಪಡೆಯುವಂತಹ ದಿನ. ಮಗಳು ಮತ್ತು ಸೊಸೆ ಎನ್ನುವ ಭಾವನೆಯಿಲ್ಲದೆ ಸಮಾನವಾಗಿ ಕಾಣುವ ನಿಮ್ಮ ಗುಣದ ಉತ್ತಮ ಫಲಗಳು ಕಾಣಸಿಗುತ್ತವೆ.
  • ಮೀನ
  • ವಿದ್ಯಾವಂತರಾಗಿದ್ದರೂ ಪ್ರಜ್ಞಾವಂತಿಕೆ ಕಳೆದುಕೊಂಡರೆ ವಿದ್ಯೆಗೆ ಬೆಲೆ ಬರುವುದಿಲ್ಲ. ತಾಯಿ ತಂದೆ ಆರೋಗ್ಯದ ಮೇಲೆ ವಿಶೇಷ ಕಾಳಜಿ ವಹಿಸಿ. ಆಹಾರದಲ್ಲಿ ಅನಿಶ್ಚಿತ ಬದಲಾವಣೆಗಳು ಬೇಡ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.