ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಸಜ್ಜನರ ಒಡನಾಟದಿಂದ ಕೆಲಸಗಳಿಗೆ ಹೆಚ್ಚಿನ ಪುಷ್ಟಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಜನವರಿ 2024, 22:08 IST
Last Updated 20 ಜನವರಿ 2024, 22:08 IST
   
ಮೇಷ
  • ಯಂತ್ರೋಪಕರಣಗಳ ರಿಪೇರಿ ಮತ್ತು ಮಾರಾಟದಿಂದ ಮತ್ತು ಪಶುಸಂಗೋಪನೆಯಿಂದ ಲಾಭ ಇರುವುದು. ಕೌಟುಂಬಿಕವಾಗಿ ಮೂಡಿದ್ದ ಅನುಮಾನಗಳು ದೂರವಾಗಲಿದೆ. ಸತ್ಕಾರ್ಯಗಳಿಂದ ಮನೆಯಲ್ಲಿ ಸಡಗರ.
  • ವೃಷಭ
  • ಹಿತ್ತಾಳೆ, ತಾಮ್ರದಂಥ ಲೋಹದ ವಸ್ತುಗಳ ವ್ಯಾಪಾರಿಗಳಿಗೆ ಸಂಪಾದನೆ ಹೆಚ್ಚಳವಾಗಲಿದೆ. ಗಣ್ಯವ್ಯಕ್ತಿಗಳಿಗೆ ಸಮಾಜ ಮತ್ತು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹಾಗೂ ಗೌರವಗಳು ಲಭಿಸಲಿವೆ.
  • ಮಿಥುನ
  • ನೂತನ ಮನೋಭಿಲಾಷೆ, ಯೋಚನೆಗಳು ಖರ್ಚಿಗೆ ದಾರಿ ಯಾದರೂ ಮುಂದಿನ ದಿನಗಳಲ್ಲಿ ಉಪಕಾರಿಯಾಗಿರುತ್ತದೆ. ಆಕಸ್ಮಿಕ ರೀತಿಯಲ್ಲಿ ಮದುವೆ ನಿಶ್ಚಯ ಕಾರ್ಯ ನಡೆಯಲಿದೆ.
  • ಕರ್ಕಾಟಕ
  • ನಿವೇಶನಗಳ ಖರೀದಿಯ ಆಲೋಚನೆಗಳಿಗೆ ಪೂರಕವಾದ ವಾತಾವರಣ ಸ್ನೇಹಿತರಿಂದ ಸಿಗಲಿದೆ. ಹಿಂದಿನಿಂದ ಬಾಕಿ ಇರುವ ಮನೆ ದೇವರ ಕೆಲಸಗಳನ್ನು ಮಾಡಿ ಮುಗಿಸುವ ನಿರ್ಧಾರಕ್ಕೆ ಬರುವಂತಾಗುವುದು.
  • ಸಿಂಹ
  • ಖರ್ಚು-ವೆಚ್ಚದಲ್ಲಿ ಮಿತಿ ಇದ್ದರೆ ಉತ್ತಮ. ಮುಖ್ಯವಾಗಿ ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಇನ್ನೊಬ್ಬರನ್ನು ಹೀಯಾಳಿಸುವುದು ಅಥವಾ ಅಪಹಾಸ್ಯ ಮಾಡುವುದು ನಿಮ್ಮ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ‌
  • ಕನ್ಯಾ
  • ಮಗಳ ಮದುವೆಯ ಸಲುವಾಗಿ ಆಭರಣವನ್ನು ಕೊಳ್ಳುವ ಬಗ್ಗೆ ಅಥವಾ ಇನ್ನೇನಾದರೂ ತಯಾರಿ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ವಾಹನ ವಹಿವಾಟುಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭ ಪಡೆಯಬಹುದು.
  • ತುಲಾ
  • ಜಟಿಲ ಸಮಸ್ಯೆಗಳು ಬಗೆಹರಿದು ನೆಮ್ಮದಿ ಉಂಟಾಗುವುದು. ಆರ್ಥಿಕವಾಗಿ ಸಾಕಷ್ಟು ಸಂಪಾದನೆಯಾಗುವುದರಿಂದ ಅನಿವಾರ್ಯದ ಖರ್ಚಿಗೇನೂ ಯೋಚನೆ ಇರುವುದಿಲ್ಲ. ಹಿರಿಯರ ಮಾತಿನ ಬಗ್ಗೆ ಗಮನವಿರಲಿ.
  • ವೃಶ್ಚಿಕ
  • ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ ಮರಳಿ ಪ್ರಯತ್ನ ಮಾಡುವುದರಿಂದ ಜಯಶಾಲಿಯಾಗಬಹುದು. ಮಕ್ಕಳ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಆರೋಗ್ಯದ ಬಗ್ಗೆ ನಿಗಾ ವಹಿಸಿ.
  • ಧನು
  • ಎಲ್ಲರೊಂದಿಗೆ ಎಲ್ಲವಿಚಾರದಲ್ಲಿ ಹೊಂದಿಕೊಳ್ಳುವ ನಿಮ್ಮ ಗುಣ ಹಾಗೂ ಸಾಮರ್ಥ್ಯ ಈ ದಿನ ಬಹಳಷ್ಟು ಮುಖ್ಯವೆನಿಸುವುದು. ವಿದ್ಯೆ ಮತ್ತು ಬುದ್ಧಿವಂತಿಕೆಯನ್ನು ಸರಿಯಾದ ಮಾರ್ಗದಲ್ಲಿ ಬಳಸುವ ಬಗ್ಗೆ ತೀರ್ಮಾನಿಸಿ.
  • ಮಕರ
  • ಮನೆ ಬದಲಾಯಿಸುವ ಯೋಚನೆಗೆ ಇಂದು ಸರಿಯಾದ ಸಮಯ. ನಾನಾ ರೀತಿಯಲ್ಲಿ ಹಣವು ನಿಮ್ಮ ಕೈ ಸೇರಲಿದೆ. ಮುಂದಿನ ದಿನಗಳಲ್ಲಿ ಯಾವುದೇ ಅವ್ಯವಹಾರ, ತಪ್ಪುಗಳು ನಡೆಯದಂತೆ ಜಾಗ್ರತೆ ವಹಿಸಿ.
  • ಕುಂಭ
  • ವಂಶ ಪಾರಂಪರ್ಯದಿಂದ ಬಂದ ನಿಮ್ಮ ವ್ಯಾಪಾರ ವ್ಯವಹಾರಗಳು ಈ ದಿನ ಮತ್ತಷ್ಟು ಏಳಿಗೆಯನ್ನು ಕಾಣಲಿದೆ. ವ್ಯವಹಾರಿಕ ಸಲಹೆಗಳಿಗೆ ಮನ್ನಣೆ ದೊರೆಯಲಿದೆ. ಯಾವುದೇ ಕಟ್ಟುಪಾಡಿಗೆ ಸಿಕ್ಕಿಕೊಳ್ಳಬೇಡಿ.
  • ಮೀನ
  • ಸಜ್ಜನರ ಒಡನಾಟದಿಂದ ಕೆಲಸಗಳಿಗೆ ಹೆಚ್ಚಿನ ಪುಷ್ಟಿ ದೊರೆಯಲಿದೆ. ನೂತನ ವ್ಯಕ್ತಿಯ ಪರಿಚಯವು ಸರ್ಕಾರಿ ಕೆಲಸಕ್ಕೆ ಅನುಕೂಲವನ್ನು ಉಂಟು ಮಾಡಲಿದೆ. ವಿವಾಹದ ವಿಷಯಗಳು ಚರ್ಚೆಯಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.