ADVERTISEMENT

ದಿನ ಭವಿಷ್ಯ: ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಜುಲೈ 2024, 23:47 IST
Last Updated 21 ಜುಲೈ 2024, 23:47 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅವಶ್ಯಕತೆ ಇರುವ ಜಾಗದಲ್ಲಿ ಜಿಪುಣತನವನ್ನು ತೋರಿಸಿ ಸಮಾಜದಲ್ಲಿ ಗೌರವ ಕಳೆದುಕೊಳ್ಳುವಂತಾಗಬಹುದು ಎಚ್ಚರಿಕೆ. ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು. ‌
  • ವೃಷಭ
  • ವಂಶಪಾರಂಪರಿಕವಾಗಿ ಬಂದ ವ್ಯವಹಾರ ಅಥವಾ ವೃತ್ತಿಯಲ್ಲಿ ಮತ್ತಷ್ಟು ಏಳಿಗೆ ಕಾಣಲಿದೆ. ಕಾರ್ಮಿಕರ ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡಿ ಅವರ ಮನಸ್ಸಿನಲ್ಲಿ ಉತ್ತಮ ಸ್ಥಾನ ಸಂಪಾದಿಸಿಕೊಳ್ಳುವಿರಿ.
  • ಮಿಥುನ
  • ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗ ಆಗುವುದು. ರಾಜಕಾರಣಿಗಳೊಂದಿಗೆ ಬೆಳೆಸಿಕೊಂಡ ಒಡನಾಟ ಕಾರಾಗೃಹ ವಾಸದಂಥ ಅಪಾಯದ ಪರಿಸ್ಥಿತಿ ತಂದೊಡ್ಡಲಿದೆ. ಸಮ್ಮಿಶ್ರ ಫಲ ಕಾಣುವಿರಿ.
  • ಕರ್ಕಾಟಕ
  • ಗೃಹ ನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ಆರ್ಥಿಕತೆ ಸ್ವಲ್ಪ ಮಟ್ಟಿನ ತೊಂದರೆಯನ್ನು ಸೃಷ್ಟಿ ಮಾಡುವುದು. ವ್ಯಾಪಾರ-ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾದರೂ ಮೂಲಧನಕ್ಕೆ ಮೋಸವಾಗುವುದಿಲ್ಲ.
  • ಸಿಂಹ
  • ಸರಿಯಾದ ಪರಿಶೀಲನೆ ಇಲ್ಲದೆ ಯಾವ ಕೆಲಸಗಳಲ್ಲೂ ಹೂಡಿಕೆ ಮಾಡುವುದು ಸಮಂಜಸವಲ್ಲ.ಹಾಸ್ಯ ಪ್ರಜ್ಞೆ ಹೆಚ್ಚಾಗುವುದು. ಆದರೆ, ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ.
  • ಕನ್ಯಾ
  • ಅನಿರೀಕ್ಷಿತ ಅವಕಾಶಗಳನ್ನು ಯಾವುದೇ ಮುಜುಗರವಿಲ್ಲದೆ ಬಳಸಿಕೊಳ್ಳದ್ದಿದ್ದರೆ ದಡ್ಡತನ ಪ್ರದರ್ಶಿಸಿದಂತಾಗುವುದು. ವಿಮಾ ಕ್ಷೇತ್ರದಿಂದ ಆಗಬೇಕಾದ ಸಹಕಾರದಲ್ಲಿ ಗೊಂದಲಗಳು ಉದ್ಭವಿಸಬಹುದು.
  • ತುಲಾ
  • ಮನೆಯಲ್ಲಿ ಶಾಂತ ವಾತಾವರಣವಿದ್ದು ನಿಧಾನಗತಿಯ ಕೆಲಸ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಅವಿವಾಹಿತ ಹೆಣ್ಣು ಮಕ್ಕಳಿಗೆ ಅನಿರೀಕ್ಷಿತ ಕಂಕಣಬಲ ಕೂಡಿಬರುವುದು.
  • ವೃಶ್ಚಿಕ
  • ಕುಟುಂಬ ವರ್ಗದಲ್ಲಿ ಸಲಹೆಗಳಿಗೆ ಆದ್ಯತೆ ದೊರೆಯಲಿದೆ. ಹೊಂದಾಣಿಕೆಯು ಜಗದ ನಿಯಮ. ಆಸ್ತಿ ಕೊಳ್ಳುವ ನಿರ್ಧಾರದಲ್ಲಿ ಮನೋಭಾವವನ್ನು ಬದಲಿಸಿಕೊಳ್ಳಬೇಕಾಗುತ್ತದೆ.
  • ಧನು
  • ದವಸ ಧಾನ್ಯ ಹಾಗೂ ಮಸಾಲಾ ಸಾಮಗ್ರಿಗಳ ಸಗಟು ಹಾಗೂ ರಫ್ತು ವ್ಯಾಪಾರಿಗಳಿಗೆ ಈ ದಿನ ವ್ಯವಹಾರದಲ್ಲಿ ಅನುಕೂಲವಾಗುವುದು. ವೃತ್ತಿರಂಗದ ಕೆಲವು ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಳ್ಳಿ.
  • ಮಕರ
  • ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿದ್ದರೆ ಎಲ್ಲವನ್ನೂ ಸುಲಭವಾಗಿ ನಿಭಾಯಿಸಬಹುದು. ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಪಟ್ಟಂಥ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಆಪ್ತರೊಬ್ಬರ ಸಲಹೆ ಕೇಳುವಿರಿ.
  • ಕುಂಭ
  • ರಿಯಲ್ ಎಸ್ಟೇಟುದಾರರಿಗೆ ಉತ್ತಮ ಧನಲಾಭವಿರುವ ಅವಕಾಶಗಳಿಂದ ವ್ಯವಹಾರಗಳು ವೃದ್ಧಿಗೊಳ್ಳಲಿದೆ. ಗುಮಾಸ್ತ ಕೆಲಸದಲ್ಲಿದ್ದವರಿಗೆ ಪೂರ್ಣ ವಿರಾಮ ಸಿಗುವಂತೆ ಆಗುವ ಸಾಧ್ಯತೆ ಇದೆ.
  • ಮೀನ
  • ಭವಿಷ್ಯದ ದೃಷ್ಟಿಯಿಂದ ಯಾವುದೇ ವಿಷಯವನ್ನು ದೊಡ್ಡದು ಸಣ್ಣದು ಎಂಬ ಭೇದ ಮಾಡದೇ ತಕ್ಷಣ ಕಾರ್ಯೋನ್ಮುಖರಾಗುವುದು ಉತ್ತಮ. ಪೊಲೀಸ್ ವೃತ್ತಿಯಲ್ಲಿರುವವರಿಗೆ ಸಂಚಾರ ಕಂಡುಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.