ADVERTISEMENT

ದಿನ ಭವಿಷ್ಯ: ಈ ರಾಶಿಯ ಸರ್ಕಾರಿ ನೌಕರರಿಗೆ ಇಂದು ಶುಭ ದಿನ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಜುಲೈ 2025, 22:30 IST
Last Updated 20 ಜುಲೈ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದೈನಂದಿನ ಬದುಕಿನಲ್ಲಿ  ಇರುವ ವ್ಯಕ್ತಿಗಳ ಸಹವಾಸದಿಂದ ಅಪವಾದಗಳಿಗೆ ತುತ್ತಾಗುವಿರಿ. ಹಿಂದಿನ ಕಹಿ ಘಟನೆ ಮರೆಯಲು ಒಳ್ಳೆಯ ಸಮಯ ಸಿಗುವುದು. ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಜಯವಾಗುವುದು.
  • ವೃಷಭ
  • ಜ್ಞಾನಿಗಳು ಪರಂಪರೆಯನ್ನು ಉಳಿಸಲು ಯೋಗ್ಯ ಶಿಷ್ಯನನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ಸರ್ಕಾರಿ ಹುದ್ದೆಯಲ್ಲಿದ್ದು, ಉನ್ನತ ಮಟ್ಟದ ಪದವಿಗೆ ಪ್ರಯತ್ನ ಪಡುತ್ತಿರುವವರಿಗೆ ಶುಭವಾಗುವುದು.
  • ಮಿಥುನ
  • ನೂತನ ವಾಹನ ಕೊಳ್ಳುವುದನ್ನು ಸ್ವಲ್ಪ ದಿನಗಳ ಕಾಲ ಮುಂದೂಡುವುದು ಉತ್ತಮ. ವೈದ್ಯಕೀಯ ಹಾಗೂ ಎಂಜಿನಿಯರ್ ಕ್ಷೇತ್ರಗಳಿಗೆ ಹೋಗಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು ಸಿಗಲಿದ್ದಾರೆ.
  • ಕರ್ಕಾಟಕ
  • ಪರಿಣತರಿಗೆ ಶಿಕ್ಷಣ ವೃತ್ತಿ ದೊರೆಯುವ ಸಂಭವವಿದೆ. ಯೋಚನೆಯಂತೆ ಕೆಲಸ ಸಾಗದಿರುವ ಕಾರಣ ಪರ್ಯಾಯ ವ್ಯವಸ್ಥೆ ಬಗ್ಗೆ ಯೋಚಿಸುವುದು ಉತ್ತಮ.
  • ಸಿಂಹ
  • ಕುಟುಂಬದವರಿಗೆ ಹೆಚ್ಚಿನ ಸಮಯವನ್ನು ನೀಡುವ ಬಗ್ಗೆ ಯೋಚನೆ ನಡೆಸಿ, ಸಮಯ ಎಂದಾಗ ಅವರ ಸಹಾಯವೇ ಮುಖ್ಯ. ಮಂದಗತಿಯಲ್ಲಿ ಕೆಲಸ ಕಾರ್ಯಗಳು ನಡೆದು ಸಮಯದ ಕೊರತೆ ಎದುರಾಗಲಿದೆ.
  • ಕನ್ಯಾ
  • ಕಾರ್ಯನಿರ್ವಹಿಸಲು ಪರಿಣತರಿಂದ ಸುಲಭ  ಉಪಾಯವನ್ನು ಪಡೆದು ಸಂತೋಷವಾಗಲಿದೆ. ಬೇರೆಯವರ ಮನಸ್ಸಿಗೆ ನೋವಾಗುವಂಥ ಮಾತುಗಳು ಬಳಸದೇ ಇರುವುದು ಉತ್ತಮ.
  • ತುಲಾ
  • ಮನೆಯ ಆರ್ಥಿಕ ಸ್ಥಿತಿಯಲ್ಲಿ ಹಂತ ಹಂತವಾಗಿ ಸುಧಾರಣೆಯನ್ನು ಕಂಡು ಮನಸ್ಸಿಗೆ ನೆಮ್ಮದಿ ಇರುವುದು. ಮನೆಯಲ್ಲಿ ಮಕ್ಕಳಿಂದ ಸಂಭ್ರಮದ ವಾತಾವರಣ ಮೂಡುವುದು. ಗಂಟಲು ಬೇನೆ ನಿರ್ಲಕ್ಷಿಸುವುದು ಸರಿಯಲ್ಲ.
  • ವೃಶ್ಚಿಕ
  • ಹಿಂದೆ ಮಗನ ಒಳಿತಿಗಾಗಿ, ಅಭ್ಯುದಯಕ್ಕಾಗಿ ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದಾಗಿ ಇಂದು ಉತ್ತಮ ಫಲ ನಿರೀಕ್ಷಿಸಬಹುದಾಗಿದೆ. ವೃತ್ತಿಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿ.
  • ಧನು
  • ಕಾರ್ಯದಲ್ಲಿ ಅವಸರ ಮಾಡದೆ ನಿಧಾನವಾಗಿ ಮುಂದುವರಿದರೆ ಸರಾಗವಾಗಿ ನಡೆಯುವುದು. ಆಲಂಕಾರಿಕ ವಸ್ತುಗಳಿಗಾಗಿ ಧನವ್ಯಯ ಆಗಲಿದೆ. ಹತ್ತಿ ವಸ್ತ್ರಗಳ ಬೇಡಿಕೆಯಿಂದಾಗಿ ವರಮಾನ ಹೆಚ್ಚಲಿದೆ.
  • ಮಕರ
  • ರಾಜಕಾರಣಿಗಳು ಎಲ್ಲರೊಂದಿಗೆ ಸಹಕಾರ ಮನೋಭಾವನೆಯಿಂದ ಮತ್ತು ಸರಳತೆಯಿಂದ ಮುಂದುವರಿದಲ್ಲಿ ಯಶಸ್ಸು  ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತದೆ. ಸಂತಾನದ ಶುಭ ಸುದ್ದಿ  ಕೇಳುವಿರಿ.
  • ಕುಂಭ
  • ಚಂಚಲ ಸ್ವಭಾವದ ನೀವು ಅಚಲವಾದ ನಿರ್ಧಾರಗಳನ್ನು ಮಾಡುವುದು ಉಳಿತು. ಧಾರ್ಮಿಕ ಕೆಲಸದಲ್ಲಿ ಶ್ರದ್ಧೆ ತೋರಿದಷ್ಟೂ, ದಾರಿ ಕಾಣಬಹುದು. ಗಣಪತಿಯ ಆರಾಧನೆ ವಿಘ್ನಗಳನ್ನು ನಿವಾರಣೆ ಮಾಡುತ್ತದೆ.
  • ಮೀನ
  • ಸಹಾಯ ಅಪೇಕ್ಷಿಸಿ ಬಂದವರನ್ನು ತಿರಸ್ಕರಿಸಬೇಡಿ. ವರ್ಚಸ್ಸನ್ನು ವೃದ್ಧಿಸಿಕೊಳ್ಳಲು  ಇತರರ ಜೊತೆ ಸಂವಾದದಲ್ಲಿ ಉತ್ತಮ ಭಾಷೆ ಬಳಸಿ. ಕಬ್ಬಿಣ ಮತ್ತು ಸ್ಟೀಲ್ ವ್ಯಾಪಾರಿಗಳಿಗೆ ಲಾಭವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.