ADVERTISEMENT

ದಿನ ಭವಿಷ್ಯ: ವ್ಯವಹಾರದಲ್ಲಿ ಸ್ವಲ್ಪ ಜಾಣತನವನ್ನು ಪ್ರದರ್ಶಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ನವೆಂಬರ್ 2023, 18:30 IST
Last Updated 23 ನವೆಂಬರ್ 2023, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನಿಮ್ಮ ಕಾರ್ಯಗಳಿಗೆ ಅಡ್ಡಿ ಉಂಟಾದಲ್ಲಿ ವಿಮರ್ಶಿಸಿ ಮುಂದುವರೆಯುವುದು ಉತ್ತಮ. ಮಕ್ಕಳ ಸರ್ವತೋಮುಖ ಪ್ರಗತಿಯಿಂದಾಗಿ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುವುದು. ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
  • ವೃಷಭ
  • ಹಿರಿಯರ ಅನುಗ್ರಹದಿಂದ ಇಷ್ಟಸಿದ್ಧಿಯಾಗಿ ಕೃಷಿ ಉತ್ಪನ್ನಗಳ ಅಥವಾ ಪದಾರ್ಥಗಳ ಕ್ರಯ-ವಿಕ್ರಯದಲ್ಲಿ ಲಾಭ ತರಲಿದೆ. ಸ್ವತ್ತಿನ ವಿಷಯವಾಗಿ ಕಾನೂನು ಸಲಹೆ ಪಡೆದುಕೊಳ್ಳುವ ಬಗ್ಗೆ ಗಮನಹರಿಸಿ.
  • ಮಿಥುನ
  • ನಿಮ್ಮಿಂದ ಸಲಹೆ ಸಹಕಾರವನ್ನು ಪಡೆದು ನಿಮ್ಮನ್ನೇ ಮೂರ್ಖರನ್ನಾಗಿ ಮಾಡುವವರು ಎದುರಾಗುವರು. ಕಚೇರಿಯಲ್ಲಿ ಸಹದ್ಯೋಗಿಗಳ ಸಹಕಾರ ಪಡೆಯಬೇಕಾಗುವುದು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವುದು.
  • ಕರ್ಕಾಟಕ
  • ಗುರುಗಳ ಉಪದೇಶ ನಿಮ್ಮ ಬದುಕಿಗೆ ದಾರಿದೀಪವಾಗುವ ಲಕ್ಷಣಗಳಿರುವುದು. ವೃತ್ತಿಯಲ್ಲಿ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸುವಿರಿ. ವ್ಯಾಪಾರಿಗಳಿಗೆ ಆರ್ಥಿಕ ಬೆಳವಣಿಗೆ ಅಧಿಕವಾಗುವುದು.
  • ಸಿಂಹ
  • ಮನೆಯ ನಿರ್ಮಾಣ ಕೆಲಸಗಳು ಪೂರ್ಣಗೊಂಡು ನೆಮ್ಮದಿ ಪ್ರಾಪ್ತಿಯಾಗುವುದು. ಶ್ರೀ ದಕ್ಷಿಣಾಮೂರ್ತಿಯನ್ನು ಪೂಜಿಸುವುದರಿಂದ ನಿಮ್ಮ ಯೋಜನೆಗಳು ನಿರಾತಂಕವಾಗಿ ಮುಂದುವರೆಯಲಿದೆ.
  • ಕನ್ಯಾ
  • ವ್ಯಾಪಾರ, ವ್ಯವಹಾರಗಳಲ್ಲಿ ತೀವ್ರವಾದ ಪೈಪೋಟಿ ಎದುರಾಗಿ ಆತಂಕಕ್ಕೆ ಕಾರಣವಾಗಲಿದೆ ಹಾಗೂ ನಷ್ಟ ಸಂಭವಿಸುವುದು. ಸಣ್ಣ ಪುಟ್ಟ ತೊಡಕುಗಳು ಕಾಣಿಸಿಕೊಂಡರೂ ಕೆಲಸಗಳು ಅಬಾಧಿತವಾಗಿ ಸಾಗುವುದು.
  • ತುಲಾ
  • ಮನೆಯ ಸದಸ್ಯರಲ್ಲಿದ್ದ ಭಿನ್ನಾಭಿಪ್ರಾಯ, ವೈಮನಸ್ಸಿಗೆ ಕಾರಣ ಮತ್ತು ಪರಿಹಾರವನ್ನು ಕಂಡುಕೊಳ್ಳುವಿರಿ. ನಿಮ್ಮ ವೃತ್ತಿಯಲ್ಲಿ ಸಾಕಷ್ಟು ಪೈಪೋಟಿಗಳನ್ನು ಸಹೋದ್ಯೋಗಿಗಳಿಂದ ನೀವು ಎದುರಿಸಬೇಕಾಗಬಹುದು.
  • ವೃಶ್ಚಿಕ
  • ಸಜ್ಜನರ ಸಹವಾಸ ಮಾಡುವ ನಿಮ್ಮ ಹಂಬಲಕ್ಕೆ ಪೂರಕವಾದ ವಾತಾವರಣ ಸಿಗಲಿದೆ. ಇತರರಿಗೆ ಸಹಾಯ ಮಾಡುವಲ್ಲಿ ಒಂದು ಬಗೆಯ ಆನಂದವನ್ನು ಅನುಭವಿಸುವಿರಿ. ಹಳದಿ ಬಣ್ಣ ಅದೃಷ್ಟ ತರುವುದು.
  • ಧನು
  • ಶುಭ ಕಾರ್ಯಗಳಿಗೆ ಉತ್ತಮ ಕಾಲವಾದರೂ ಬರುವ ಅವಕಾಶಗಳಿಂದ ವಂಚಿತರಾಗದಿರಿ. ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ. ಹಿಡಿದ ಕೆಲಸ ಪೂರ್ಣಗೊಳಿಸುವ ಬಗ್ಗೆ ಹೆಚ್ಚಿನ ಪ್ರಯತ್ನವಿರಲಿ.
  • ಮಕರ
  • ಆಡುವ ಮಾತಿನ ಬಗ್ಗೆ ನಿಗವಿರಲಿ, ನಿಮ್ಮ ಮಾತನ್ನು ನೀವೇ ಸಾಧಿಸಿ ತೋರಿಸಬೇಕಾಗುತ್ತದೆ. ಇಂದಿನ ನಿಮ್ಮ ನಿರ್ಧಾರದಲ್ಲಿ ತೊಡಕುಗಳೇ ಉಂಟಾ ಗುವುದು. ನಿಮ್ಮ ಬಗೆಗಿನ ವದಂತಿಗಳು ತಾನಾಗಿಯೇ ಮುಚ್ಚಿ ಹೋಗುವುದು.
  • ಕುಂಭ
  • ಯಂತ್ರೋಪಕರಣ ಅಥವಾ ಕಾರ್ಖಾನೆ ಕೆಲಸಗಳಲ್ಲಿರುವವರಿಗೆ ಹೆಚ್ಚಿನ ಧನ ಲಾಭವಿರುವುದು. ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಬೇಕಾಗಬಹುದು. ವ್ಯವಹಾರದಲ್ಲಿ ಸ್ವಲ್ಪ ಜಾಣತನವನ್ನು ಪ್ರದರ್ಶಿಸಿ.
  • ಮೀನ
  • ನಿಮ್ಮ ಹೆಚ್ಚಿನ ಪರಿಶ್ರಮವಿದ್ದರೂ ಅಲ್ಪ ಕಾರ್ಯಸಿದ್ಧಿಯಾಗುವುದು ದುಃಖಕ್ಕೆ ಮೂಲ ಕಾರಣ. ಇನ್ನೊಬ್ಬರಿಗೆ ತಿಳಿವಳಿಕೆ ಹೇಳುವ ಸಮಯದಲ್ಲಿ ಜಾಗೃತರಾಗಿರಿ. ಒಪ್ಪಂದ ವ್ಯವಹಾರಗಳಿಂದ ವರಮಾನ ಹೆಚ್ಚಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.