ADVERTISEMENT

ದಿನ ಭವಿಷ್ಯ: ಪಾರಂಪರಿಕ ವೃತ್ತಿಯನ್ನು ಮುಂದುವರಿಸುವವರಿಗೆ ಶುಭಫಲ ಪ್ರಾಪ್ತಿ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ತೀರ್ಮಾನವೇ ಅಂತಿಮವಾಗಿರುವ ಕಾರಣ ಕೆಲವೊಂದು ವಿಷಯಗಳನ್ನು ಎರಡೆರಡು ಬಾರಿ ಪರಾಮರ್ಶಿಸಿ ನಿರ್ಧಾರಕ್ಕೆ ಬನ್ನಿ. ಪಾರಂಪರಿಕ ವೃತ್ತಿಯನ್ನು ಮುಂದುವರಿಸುವವರಿಗೆ ಶುಭಫಲ ಪ್ರಾಪ್ತಿ .
  • ವೃಷಭ
  • ಆಪ್ತರ ಮನೆಯಲ್ಲಿನ ನಡೆಯುವ ಸಮಾರಂಭಗಳಿಗೆ ಜವಾಬ್ದಾರಿ, ಓಡಾಟ ಹೆಚ್ಚಲಿದೆ. ಗಣಪತಿಯ ಪ್ರಾರ್ಥನೆ ಮಾಡದೆ ಪ್ರಾರಂಭ ಮಾಡಿದ ಕೆಲಸಗಳಿಗೆ ಹಲವು ವಿಘ್ನಗಳು ಬಂದೊದಗಬಹುದು.
  • ಮಿಥುನ
  • ಕೆಲಸಗಳನ್ನು ಒಬ್ಬರೆ ಮಾಡಬಹುದೆಂದು ಅಂದುಕೊಂಡಿರುವ ಕೆಲಸಕ್ಕೆ ಇತರರ ಸಹಾಯ ಪಡೆಯುವುದು ಅನಿವಾರ್ಯ. ಸಹೋದರರ ನಡುವಿನ ವ್ಯಾಜ್ಯಗಳು ಮನೆಯಿಂದ ಹೊರಗೆ ಹೋಗುವುದು ಸರಿಯಲ್ಲ.
  • ಕರ್ಕಾಟಕ
  • ಮಾರುಕಟ್ಟೆಯಲ್ಲಿ ವ್ಯಾಪಾರ ಅಧಿಕ  ಅವಕಾಶಗಳೊಂದಿಗೆ ಶುಭಫಲ ತರಲಿದೆ. ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ತಂಟೆ ತಕರಾರುಗಳು ನಿಧಾನವಾಗಿ ದೂರ ಸರಿಯಲಿವೆ.
  • ಸಿಂಹ
  • ಜವಾಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದು ಮನವರಿಕೆಯಾಗುವುದು. ಸಂಜೆಯ ಮುಂದೆ ತಂಗಾಳಿಯ ಜತೆ ಸ್ನೇಹಿತರೊ ಅಥವಾ ಸಂಗಾತಿಯೊಂದಿಗೆ ಕಾಲ ಕಳೆಯುವಿರಿ. ಹಳದಿ ಬಣ್ಣವು ಶುಭ ತರಲಿದೆ.
  • ಕನ್ಯಾ
  • ಮಗನ ವಿವಾಹದ ಸಿದ್ಧತೆಗಳು ಚುರುಕಾಗಿ ಮತ್ತು ಸಂಭ್ರಮದಿಂದ ಸಾಗಲಿವೆ. ಪ್ರಯಾಣದಲ್ಲಿ  ಕಾಳಜಿಯ ಅಗತ್ಯವಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಬಿಡುವಿಲ್ಲದ ದಿನ.
  • ತುಲಾ
  • ಸುಂದರ ದಿನದ ಉಪಸಂಹಾರಕ್ಕೆ ಬಂದಾಗ ಮರುಕಳಿಸುವುದಿಲ್ಲವೆಂಬ ತಿಳಿನೋವು ಉಂಟಾಗಬಹುದು. ಶುಭ್ರವರ್ಣದ ವಸ್ತ್ರಗಳನ್ನು ಧರಿಸಿ ಇಂದಿನ ಸಮಾರಂಭದಲ್ಲಿ ಭಾಗವಹಿಸಿದಲ್ಲಿ  ಘನತೆ ಹೆಚ್ಚುವುದು.
  • ವೃಶ್ಚಿಕ
  • ಕೆಲಸಗಳಿಗೆ ಸಂಗಾತಿಯ ಸಹಕಾರ ಹಿತವೆನಿಸುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡುವ  ಎದುರಾಳಿಗಳೂ  ತಲೆಬಾಗುವರು. ಮಕ್ಕಳು ಬೆಳವಣಿಗೆ ಹಾದಿಯಲ್ಲಿ ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ಗಮನಿಸಿ.
  • ಧನು
  • ವಸ್ತುಗಳಿಗಾಗಿ ಇತರರು ಆಸೆ ಪಡುತ್ತಿರುವುದು ಹಾಸ್ಯಾಸ್ಪದವಾಗಿ ಕಾಣಬಹುದು. ಮನೆಯ ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ನೆಂಟಸ್ತಿಕೆಯಲ್ಲಿ ಸಂಬಂಧ ಕೂಡಿ ಬರುವುದು. ಪ್ರೀತಿಪಾತ್ರರನ್ನು ಭೇಟಿಯಾಗುವಿರಿ.
  • ಮಕರ
  • ವ್ಯವಹರಿಸುವಾಗ ಎಲ್ಲಾ ವಿಚಾರಗಳಲ್ಲೂ ಸಾವಧಾನವಾಗಿ ಮುಂದುವರಿಯಿರಿ. ಬರವಣಿಗೆಯಿಂದಾಗಿ ಜೀವನವನ್ನು ನಡೆಸುತ್ತಿರುವವರು ವಿವಾದಾತ್ಮಕ ಹೇಳಿಕೆಯನ್ನು ನೀಡುವಂಥ ಬರಹಗಳನ್ನು ಕೈಗೆತ್ತಿಕೊಳ್ಳದಿರಿ
  • ಕುಂಭ
  • ಸದ್ಯಕ್ಕೆ ನಿಮಗೆ ಸಿಕ್ಕಿರುವ ಯಶಸ್ಸು ಅತ್ಯುನ್ನತ ಮಟ್ಟದ್ದಲ್ಲವಾದ್ದರಿಂದ ಅದನ್ನೆ ಹೆಚ್ಚು ಸಂಭ್ರಮಿಸುವ ಬದಲು ದೊಡ್ಡದ್ದಕ್ಕೆ ಪ್ರಯತ್ನ ಪಡಿ. ಕೆಲಸವನ್ನು ಕಲಿತು ಹೆಚ್ಚು ದುಡಿಮೆ ಮಾಡುತ್ತಿರುವವರನ್ನು ಕಂಡು ಅಸೂಯೆ ಪಡಿ.
  • ಮೀನ
  • ಹಲವು ದೇಹಬಾಧೆಗಳಿಂದ ಬಳಲುತ್ತಿರುವವರಿಗೆ  ಅನಾರೋಗ್ಯದ ಮೇಲೆ ಬೇಸರ ಹುಟ್ಟಬಹುದು. ಯಂತ್ರೋಪಕರಣಗಳ ಸರಿಪಡಿಸುವಿಕೆ ಅಥವಾ ಬಿಡಿ ಭಾಗಗಳ ಮಾರಾಟದಿಂದ ಲಾಭ  ಹೊಂದುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.