ADVERTISEMENT

ದಿನ ಭವಿಷ್ಯ: ಈ ರಾಶಿಯವರ ಕರ್ತವ್ಯನಿಷ್ಠೆ ಬಗ್ಗೆ ಅಧಿಕಾರಿಗಳು ಗಮನಿಸುತ್ತಾರೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಮಾರ್ಚ್ 2024, 23:59 IST
Last Updated 25 ಮಾರ್ಚ್ 2024, 23:59 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಫ ಪ್ರಕೃತಿಯ ದೇಹ ಹೊಂದಿರುವ ನಿಮಗೆ ಈ ದಿನ ಉಸಿರಾಟಕ್ಕೆ ಸಂಬಂಧಿಸಿದಂತೆ ಆರೋಗ್ಯದಲ್ಲಿ ಏರು-ಪೇರು ಅನುಭವಕ್ಕೆ ಬರಲಿದೆ. ಕ್ರೀಡಾಪಟುಗಳಿಗೆ ಇಂದಿನ ಪಂದ್ಯದಲ್ಲಿ ಹೆಚ್ಚಿನ ಜಯ ಪ್ರಾಪ್ತಿಯಾಗುವುದು.
  • ವೃಷಭ
  • ಇಂದು ಹಣ ಮತ್ತು ಗೌರವದಲ್ಲಿ ಒಂದನ್ನು ಸಂಪಾದಿಸಬಹುದು, ತೀರ್ಮಾನ ನಿಮ್ಮದ್ದಾಗಿರುತ್ತದೆ. ಆರ್ಥಿಕ ಸಂಪತ್ತಿಗಿಂತ ಜನಸಂಪತ್ತುಂ ಮುಖ್ಯವೆಂಬುದನ್ನು ಮರೆಯದಿರಿ. ಹೊಸ ಬಂಡವಾಳ ಹೂಡಿಕೆಗೆ ಉತ್ತಮ ಸಮಯ.
  • ಮಿಥುನ
  • ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡುವುದರಿಂದ ಮನಃಶಾಂತಿ ಸಿಗುತ್ತದೆ. ನಿಮ್ಮ ಪ್ರಾಮಾಣಿಕತೆಗೆ ಸರಿಯಾದಂತಹ ಫಲಗಳು ಈ ದಿನ ದೊರೆಯುವುದು. ಅನ್ನದಾನ ಮಾಡುವುದರಿಂದ ಶುಭವಾಗುತ್ತದೆ.
  • ಕರ್ಕಾಟಕ
  • ಸಮಾಜದಲ್ಲಿ ಗೌರವ ಹೆಚ್ಚಿಸಿಕೊಳ್ಳುವ ಘಟನೆ ನಿಮ್ಮಿಂದ ನೆಡೆಯಲಿದೆ. ಪರರಿಗೆ ವಂಚಿಸುವ ಯಾವುದೇ ನಿಮ್ಮ ಅಭಿವೃದ್ಧಿಗೆ ಅಡ್ಡಿಮಾಡುತ್ತದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಿಂದ ಧನ ಲಾಭ ತರಲಿದೆ.
  • ಸಿಂಹ
  • ರಚನಾತ್ಮಕ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ÷್ಯ ಕೊಡುವುದರಿಂದ ಸಂತಸ ಪ್ರಾಪ್ತಿಯಾಗಲಿದೆ. ಕೌಟುಂಬಿಕವಾಗಿ ಈಗಿರುವ ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಯಾವ ನಿರ್ಧಾರದಲ್ಲಿಯೂ ಆತುರ ಬೇಡ.
  • ಕನ್ಯಾ
  • ನಿಮ್ಮಿಂದ ಪ್ರಯೋಜನ ಪಡೆದ, ಜೀವನಾನುಭವ ಪಡೆದ ವ್ಯಕ್ತಿಗಳು ನಿಮ್ಮನ್ನು ದೂಷಿಸುವರು. ಹಣಕಾಸಿನ ವ್ಯಾಮೋಹ ಹೆಚ್ಚಾಗಿ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಆದಾಯ ಇರಲಿದೆ.
  • ತುಲಾ
  • ನಿಮ್ಮ ಅಧಿಕಾರಿಗಳು ನೀವಿಟ್ಟಿರುವ ಕರ್ತವ್ಯನಿಷ್ಠೆಯ ಬಗ್ಗೆ ಈ ದಿನ ಗಮನಿಸಲ್ಲಿದ್ದಾರೆ. ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡುವುದು.
  • ವೃಶ್ಚಿಕ
  • ಈ ದಿನವನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ದರ್ಶನದಿಂದ ಪ್ರಾರಂಭಿಸಿ. ಅದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುವಿರಿ. ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಮುಂಜಾಗ್ರತೆಯನ್ನು ತೆಗೆದುಕೊಳ್ಳಿರಿ.
  • ಧನು
  • ನಿಮ್ಮ ಹೃದಯದ ಭಾವನೆಯು ಒಳ್ಳೆಯ ಧ್ಯೇಯವನ್ನೇ ಹೊಂದಿದ್ದರೂ ಸಹಚರರಲ್ಲಿ ನೀವಾಡುವ ಮಾತುಗಳು ಭಿನ್ನಾಭಿಪ್ರಾಯ ಮೂಡಲು ಕಾರಣವಾಗುತ್ತದೆ. ಸಾಮಾಜಿಕ ಕೆಲಸಗಳಲ್ಲಿ ನಿಮ್ಮ ಪರಿಶ್ರಮ ಸಾರ್ಥಕವಾಗಲಿದೆ.
  • ಮಕರ
  • ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು. ಪ್ರವಾಸೋದ್ಯಮ ಮತ್ತು ಸಾರಿಗೆ ಸಂಸ್ಥೆಯವರಿಗೆ ಉತ್ತಮವಾದ ವ್ಯವಹಾರಗಳು ಪ್ರಾಪ್ತಿಯಾಗುವುದು. ಕುಟುಂಬದ ಸಮಸ್ಯೆಗಳಿಂದ ಮುಕ್ತಿ ಕಾಣಲಿದ್ದೀರಿ.
  • ಕುಂಭ
  • ಶೀಘ್ರಕೋಪಿಗಳಾಗುವ ನಿಮ್ಮ ವ್ಯಕ್ತಿತ್ವಕ್ಕೆ ಸ್ವಲ್ಪ ಮಟ್ಟಿನ ಬದಲಾವಣೆಯ ಗಾಳಿ ಬೀಸಲಿದೆ. ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಜಾಗರೂಕತೆ ಬಹಳ ಮುಖ್ಯವಾಗುವುದು. ನಿಮ್ಮ ವ್ಯಾಪಾರದ ಚತುರತೆಯಿಂದ ಧನಲಾಭ ಆಗುತ್ತದೆ.
  • ಮೀನ
  • ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೆÊಸದೇ ನಿಮ್ಮ ಮನದ ಭಾವನೆಯನ್ನು ಸ್ಪಷ್ಟವಾಗಿ ತೆರೆದಿಡಿ. ಪುಸ್ತಕ ಓದುವ ಹವ್ಯಾಸ ಹೊಂದಿದವರಿಗೆ ಉತ್ತಮವಾದ ನಿಮ್ಮ ಅಭಿರುಚಿಗೆ ತಕ್ಕಂತಹ ಪುಸ್ತಕವು ದೊರಕುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.