ದಿನ ಭವಿಷ್ಯ: ವೈಯಕ್ತಿಕ ಬದುಕಿನ ವಿಚಾರಗಳತ್ತ ಹೆಚ್ಚಿನ ಗಮನವಿರಲಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಅಕ್ಟೋಬರ್ 2024, 18:30 IST
Last Updated 25 ಅಕ್ಟೋಬರ್ 2024, 18:30 IST
ದಿನ ಭವಿಷ್ಯ
ಮೇಷ
ತಿಳಿಯಾದ ಮನಸ್ಸಿನಿಂದ ಆಲೋಚಿಸಿ ಅಥವಾ ಅನುಭವಸ್ಥರ ಅಭಿಪ್ರಾಯ ಕೇಳಿ ನಿರ್ಧಾರ ಕೈಗೊಳ್ಳಿ. ಕಾಗದ ಕಾರ್ಖಾನೆ ಮಾಲೀಕರಿಗೆ ವರಮಾನ ಹೆಚ್ಚಲಿದೆ. ಮಕ್ಕಳಿಂದ ಸುಖ ನೆಮ್ಮದಿ ದೊರೆಯಲಿದೆ.
ವೃಷಭ
ಹಳೆಯ ಕೆಲಸಕ್ಕಿಂತ ಹೊಸ ಉದ್ಯೋಗದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಕೆಲಸದ ವೇಳೆಯೂ ನಿಮಗೆ ಅನುಕೂಲವಾಗಿರುತ್ತದೆ. ಕಾರ್ಯಕ್ಷೇತ್ರದಲ್ಲಿ ನೀತಿ-ನಿಯಮಗಳಿಗೆ ಬದ್ಧರಾಗಿರುವ ತೀರ್ಮಾನ ಮಾಡುವುದು ಒಳ್ಳೆಯದು.
ಮಿಥುನ
ಕಾರ್ಖಾನೆ ವೃತ್ತಿಯವರಿಗೆ ಹೆಚ್ಚಿನ ಲಾಭ ಇಲ್ಲವಾದರೂ, ದೈನಂದಿನ ನೆಮ್ಮದಿಗಾಗಲಿ, ಸಂತೋಷಕ್ಕಾಗಲಿ ಯಾವುದೇ ತೊಂದರೆ ಇರಲಾರದು. ಮನೆಯ ಮಂಗಳ ಕಾರ್ಯಕ್ಕಾಗಿ ಶುಭದಿನದ ನಿಶ್ಚಯ ಮಾಡುವಿರಿ.
ಕರ್ಕಾಟಕ
ಖರ್ಚುಗಳಿಗೆ ತಕ್ಕಂತೆ ಆದಾಯವಿರುವುದರಿಂದ ಸಮಾದಾನ ಕರವಾದ ವಾತಾವರಣ ಇರುವುದು. ಹಾಡುಗಾರರಿಗೆ ನಿಮ್ಮ ಸಾಧನೆಯಿಂದ ಜನಪ್ರಿಯತೆ ಹೆಚ್ಚುತ್ತದೆ. ಕಾನೂನಿಗೆ ಗೌರವ ಕೊಡುವುದನ್ನು ಮರೆಯದಿರಿ.
ಸಿಂಹ
ಲೇಖನ ಮಾಲೆಯನ್ನು ಸಿದ್ಧಪಡಿಸುವ ನಿಮ್ಮ ಕನಸು ಈಡೇರಲಿದೆ. ಎಲ್ಲಾ ವಿಚಾರದಲ್ಲೂ ಅತ್ಯಂತ ಸಾವಧಾನವಾಗಿ ಮುಂದುವರಿಯುವುದು ಉತ್ತಮ. ಗುಡಿ ಕೈಗಾರಿಕೆ ವೃತ್ತಿಯವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಕನ್ಯಾ
ಚರ್ಮ ಸಂಬಂಧವಾದ ಅನಾರೋಗ್ಯವು ಕಾಣಿಸಿದಲ್ಲಿ ಆಯುರ್ವೇದದ ಮೊರೆ ಹೋಗುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಉತ್ತರ ದೊರಕಲಿದೆ. ಕೆಲಸ ಕೊಂಚ ನಿಧಾನವಾಗಿ ಸಾಗುತ್ತಿದೆ ಎನಿಸಿದರೂ ಚಿಂತೆ ಬೇಡ.
ತುಲಾ
ಕಾರ್ಖಾನೆಯ ನಿರಂತರತೆಯನ್ನು ಗಮನವಿಟ್ಟುಕೊಳ್ಳುವುದಕ್ಕಾಗಿ ಈಗಿರುವ ವ್ಯವಸ್ಥೆಗೆ ಹೊರತಾಗಿ ಪರ್ಯಾಯ ವ್ಯವಸ್ಥೆಗೆ ತಯಾರಾಗಿರಿ. ಅಡಿಕೆ ಮಾರಾಟ ಪ್ರತಿನಿಧಿಗಳಿಗೆ ಈ ದಿನ ಹೆಚ್ಚಿನ ಕಮೀಷನ್ ಸಿಗಲಿದೆ.
ವೃಶ್ಚಿಕ
ಸಂಪಾದನೆಯ ವಿಚಾರದಲ್ಲಿ ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿಯನ್ನು ಕಾಣುವಿರಿ. ಹಿರಿಯರ ಆಶೀರ್ವಾದ ನಿಮ್ಮ ಪಾಲಿಗಿದೆ.
ಧನು
ಹಾಲು, ಮೊಸರು ಮತ್ತು ಬೆಣ್ಣೆಯ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆಯಿಂದ ಲಾಭವಾಗುವುದು. ಪಾಕ ಪ್ರವೀಣರಿಗೆ ಇಂದು ಬಿಗುವಿನ ವೇಳಾಪಟ್ಟಿಯೊಂದಿಗೆ ವೃತ್ತಿಯಲ್ಲಿ ಉನ್ನತ ಸ್ಥಾನ ದೊರೆಯುವುದು.
ಮಕರ
ತಂತ್ರಜ್ಞಾನಿಗಳಿಗೆ ವೃತ್ತಿಯಲ್ಲಿ ಪ್ರಸ್ತುತವಾಗಿ ಇರುವ ಮೇಲಧಿಕಾರಿಗಳ ಒತ್ತಡಗಳು ಕಡಿಮೆಯಾಗಲಿದೆ. ವೈಯಕ್ತಿಕ ಬದುಕಿನ ವಿಚಾರಗಳತ್ತ ಹೆಚ್ಚಿನ ಗಮನವಿರಲಿ. ವೃತ್ತಿಯಲ್ಲಿ ಸಾಕಷ್ಟು ಪೈಪೋಟಿಯನ್ನು ಎದುರಿಸುವಿರಿ.
ಕುಂಭ
ಮೂರ್ನಾಲ್ಕು ಕಾರ್ಯಗಳ ಅಥವಾ ವಿಚಾರಗಳಲ್ಲಿನ ನಿಮ್ಮ ಗಮನದಿಂದ, ಕೆಲಸವನ್ನು ಪೂರ್ಣಗೊಳಿಸುವುದು ಕಷ್ಟಕರವೆನಿಸುವುದು. ಉದ್ಯೋಗಕ್ಕಾಗಿ ಪರಸ್ಥಳದಲ್ಲಿ ವಾಸ ಮಾಡುವ ಅನಿವಾರ್ಯತೆ ಬರಬಹುದು.
ಮೀನ
ಪ್ರಯಾಣಗಳಿಂದ ದೇಹಾಯಾಸ ಕಂಡು ಬಂದರೂ ಕಾರ್ಯಾನುಕೂಲವಾಗಿ ಧನ ಲಾಭ ದೊರೆಯಲಿದೆ. ಷೇರು ಮಾರಾಟದಿಂದ ಲಾಭ ಬರುವುದು. ಸಮಸ್ಯೆಯಲ್ಲಿದ್ದ ಆಸ್ತಿ ವ್ಯವಹಾರಗಳು ಇತ್ಯರ್ಥಗೊಳ್ಳಲಿವೆ.