ದಿನ ಭವಿಷ್ಯ: ಈ ರಾಶಿಯವರಿಗೆ ಅತಿಯಾದ ಸೋಮಾರಿತನ ಆವರಿಸಿಕೊಳ್ಳಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ಡಿಸೆಂಬರ್ 2023, 23:28 IST
Last Updated 27 ಡಿಸೆಂಬರ್ 2023, 23:28 IST
ದಿನ ಭವಿಷ್ಯ
ಮೇಷ
ಮನೆಯಲ್ಲಿ ಎಲ್ಲರ ಮನಮುಟ್ಟುವಂತೆ ಸ್ಪಷ್ಟ ಮಾತುಗಳಲ್ಲಿ ನಿರ್ಧಾರವನ್ನು ತಿಳಿಯಪಡಿಸಿ. ತಂದೆ ಮಕ್ಕಳಲ್ಲಿ ಅನ್ಯೋನ್ಯತೆ ಕಡಿಮೆ ಯಾಗದಂತೆ ಜಾಗ್ರತೆವಹಿಸಿ. ಅತಿಯಾದ ಸೋಮಾರಿತನ ಆವರಿಸಿಕೊಳ್ಳಲಿದೆ.
ವೃಷಭ
ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳ ಜತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಚೈತನ್ಯ ಮೂಡಿಬರಲಿದೆ. ಸಂಗಾತಿಯೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ.
ಮಿಥುನ
ತಪ್ಪನ್ನು ಮಾಡದಿದ್ದರೂ ಅದರ ಅಪವಾದ ನಿಮ್ಮನ್ನು ಸುತ್ತುಕೊಳ್ಳುವ ಪ್ರಸಂಗ ನಡೆಯಬಹುದು. ವಸ್ತ್ರ ವ್ಯಾಪಾರಿಗಳಿಗೆ ಈ ದಿನ ಅಧಿಕ ಲಾಭ ಸಿಗಲಿದೆ. ದುಂದುವೆಚ್ಚ ಮಾಡುವುದು ಸರಿಯಲ್ಲ.
ಕರ್ಕಾಟಕ
ದೇವರ ಆಶೀರ್ವಾದದಿಂದ ಆರ್ಥಿಕ ಆದಾಯ ಉತ್ತಮವಾಗಿರುವುದು. ಆದರೆ ನಿಮ್ಮ ಸೋಮಾರಿತನವು ನಿಮಗೆ ಶತ್ರುವಾಗಿ ಪರಿಣಮಿಸಲಿದೆ. ಅಭಿವೃದ್ಧಿಗೆ ಅಡೆತಡೆಗಳು ಉಂಟಾಗಬಹುದು.
ಸಿಂಹ
ಆಫೀಸಿನಲ್ಲಿ ಸ್ವಪ್ರಯತ್ನದ ಜೊತೆಯಲ್ಲಿ ಅಧಿಕಾರಿಗಳ ಬೆಂಬಲದಿಂದ ಬಡ್ತಿ ಹೊಂದುವ ಸಂಭವಿದೆ. ಯಂತ್ರೋಪಕರಣಗಳ ಮಾರಾಟದಿಂದ ಹೆಚ್ಚಿನ ಲಾಭ. ತೈಲ ಉತ್ಪನ್ನಗಳ ಮಾರಾಟದಿಂದ ಲಾಭ ಪಡೆಯುವಿರಿ.
ಕನ್ಯಾ
ಮನೆಯಲ್ಲಿ ದೊಡ್ಡವರಾದ್ದರಿಂದ ಹೆಚ್ಚಿನ ಕಾರ್ಯಭಾರ ಮತ್ತು ಸೌಲಭ್ಯ ಪಡೆಯುವಿರಿ. ಹಣಕಾಸು ಪರಿಸ್ಥಿತಿ ಉತ್ತಮವಿರುವುದರಿಂದ ಆಸ್ತಿ ಕೊಳ್ಳುವ ಬಗ್ಗೆ ಹಿರಿಯರೊಂದಿಗೆ ಸಮಾಲೋಚನೆ ನಡೆಸುವಿರಿ.
ತುಲಾ
ವ್ಯಾಪಾರದಲ್ಲಿ ಲಾಭಾಂಶ ಇಳಿಕೆಯಾಗದಂತೆ ಎಚ್ಚರಿಕೆ ವಹಿಸುವಿರಿ. ಧಾರ್ಮಿಕ ವೃತ್ತಿ ನಡೆಸುವ ವ್ಯಕ್ತಿಗಳಿಗೆ ಸಾಧಿಸಿದ ಖುಷಿ ಸಿಗಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವಿರಿ.
ವೃಶ್ಚಿಕ
ರಾಜಕೀಯ ವ್ಯಕ್ತಿಗಳಿಗೆ ನಿಕಟವರ್ತಿಗಳ ಪ್ರೋತ್ಸಾಹದಿಂದ ಸಾಮಾಜಿಕ ಬದುಕು ಸುಗಮವಾಗಲಿದೆ. ಭೂ ಸಂಬಂಧದ ವ್ಯವಹಾರದಲ್ಲಿ ಅನಿಸಿಕೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದಲ್ಲಿ ವ್ಯವಹಾರಗಳು ಕೈಗೂಡಲಿದೆ.
ಧನು
ಪದವಿ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆತು ಹೆಚ್ಚಿನ ಆನಂದ ವಿರುವುದು. ಹೋರಾಟ ನಡೆಸಿದ ನಂತರದಲ್ಲಿ ಗೆಲುವನ್ನಾಗಲೀ ಸೋಲ ನ್ನಾಗಲಿ ಒಪ್ಪಿಕೊಳ್ಳಲು ತೀರ್ಮಾನಿಸಿ. ವಾದ ವಿವಾದ ಸ್ಪರ್ಧೆಗಳಲ್ಲಿ ಜಯ.
ಮಕರ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶುಭ ಸಮಾರಂಭಗಳು ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರುವುದು. ಸಾಲ ಮಾಡುವ ಪರಿಸ್ಥಿತಿ ತಂದುಕೊಳ್ಳಬೇಡಿ. ವಿಶ್ವಾಸದಲ್ಲಿ ಹಣ ನೀಡಬೇಡಿ.
ಕುಂಭ
ಜವಾಬ್ದಾರಿಯಿಂದ ನಡೆಯುತ್ತಿರುವ ಸಂಘ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು, ಎಚ್ಚರವಿರಲಿ. ಮೆಕ್ಯಾನಿಕಲ್ ಎಂಜಿನಿಯರ್‌ಗಳಿಗೆ ಉದ್ಯೋಗದಲ್ಲಿ ಉತ್ತಮ ಬದಲಾವಣೆ ಸಾಧ್ಯತೆ ಕಂಡುಬರಲಿದೆ.
ಮೀನ
ಮಾದರಿಯಾಗುವ ವ್ಯಕ್ತಿತ್ವವನ್ನು ಸಹಿಸಲಾರದ ಜನರು ಎದುರಾಗಬಹುದು. ತೆರೆಮರೆಯ ಸಂಧಾನದ ಮಾತುಕತೆಗಳು ಯಶಸ್ವಿಯಾಗುವುದು. ಸಗಟು ವ್ಯಾಪಾರಿಗಳಿಗೆ ಇಂದು ಶುಭ ದಿನ.