ದಿನ ಭವಿಷ್ಯ: ಬದುಕನ್ನು ಅರ್ಥಪೂರ್ಣವಾಗಿ ನಡೆಸುವ ಯೋಚನೆಗಳಿರಲಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ಜುಲೈ 2024, 18:30 IST
Last Updated 30 ಜುಲೈ 2024, 18:30 IST
ದಿನ ಭವಿಷ್ಯ
ಮೇಷ
ಕೋರ್ಟು ಕಚೇರಿ ಕಾರ್ಯಗಳು ಯಾವುದೇ ರೀತಿಯ ಪರದಾಟವಿಲ್ಲದೆ ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ. ಸೇವಿಸುವಂಥ ಆಹಾರದಿಂದ ಆರೋಗ್ಯ ಹದಗೆಡುವಂತಾಗಬಹುದು.
ವೃಷಭ
ತಂದೆ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಕಡೆ ಗಮನವನ್ನು ನೀಡಬೇಕಾಗಬಹುದು. ಹಠ ಸ್ವಭಾವ ಕಡಿಮೆ ಮಾಡುವುದರಿಂದ ಏಳಿಗೆ ಇರುವುದು. ವೃತ್ತಿಯಲ್ಲಿ ಅಭಿವೃದ್ಧಿಯು ಸಮಾಧಾನವನ್ನು ನೀಡಲಿದೆ.
ಮಿಥುನ
ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ದೊರೆಯಲಿದೆ. ಕಂಪನಿಯ ವಿದೇಶದಲ್ಲಿನ ಹುದ್ದೆಗಾಗಿ ಅರ್ಜಿ ಸಲ್ಲಿಸಬಹುದು. ಉದ್ಯೋಗದಲ್ಲಿ ಬದಲಾವಣೆಗೆ ಪೂರಕ ಸನ್ನಿವೇಶ ಕಂಡುಬರುತ್ತದೆ.
ಕರ್ಕಾಟಕ
ವೃತ್ತಿ ಕ್ಷೇತ್ರದಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಅತಿಯಾದ ಗೌರವ ಆದರಗಳು ಸಿಗುವುದು. ರಾಜಕೀಯ ವಿಭಾಗದಲ್ಲಿ ಶ್ರಮಸಹಿತ ಜಯಸಾಧನೆ ಮನಸ್ಸಿಗೆ ತೃಪ್ತಿತರುವುದು. ನ್ಯಾಯಾಂಗ ಇಲಾಖೆಯವರಿಗೆ ಸೌಲಭ್ಯ ಸಿಗುತ್ತದೆ.
ಸಿಂಹ
ಉದ್ಯೋಗರಂಗದಲ್ಲಿ ಮೇಲಧಿಕಾರಿ ವರ್ಗದವರ ಕಿರಿಕಿರಿ ಇದ್ದರೂ ಪ್ರಯತ್ನಬಲಕ್ಕೆ ಯಶಸ್ಸು ಖಚಿತವಾಗಿ ದೊರಕಲಿದೆ. ಸಹೋದರನ ಬಹಳ ದಿನದ ನಂತರದ ಆಗಮನ ಸಂತೋಷಕ್ಕೆ ಕಾರಣವಾಗುತ್ತದೆ.
ಕನ್ಯಾ
ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಹಾಗು ಅನುಭವಸ್ಥರ ಸಲಹೆ ಲಭ್ಯ. ಸುಗಂಧ ದ್ರವ್ಯದ ಬಗ್ಗೆ ಕೆಲಸ ಮಾಡುತ್ತಿರುವವರಿಗೆ ನೀವು ಬಯಸಿದ ಫಲಿತಾಂಶ ದೊರೆಯಲಿದೆ. ಸಾಲದ ಬಾಕಿ ಬಾಬ್ತು ಹಿಂದಿರುಗಿಸುವರು.
ತುಲಾ
ಪಾಲುದಾರರೊಂದಿಗೆ ಮಾತುಕತೆ ನಡೆಸುವ ಅನಿವಾರ್ಯ ಎದುರಾಗಲಿದೆ. ಹಿಂದಿನಿಂದ ಬಂದಂಥ ಆಸ್ತಿಯ ಸಮಸ್ಯೆಗಳು ಮಾತುಕತೆಯ ಮೂಲಕ ಇತ್ಯರ್ಥವಾಗುವುದು. ಮನಸ್ಸಿಗೆ ಹಿತವಾದ ಅನುಭವ ಸಿಗಲಿದೆ.
ವೃಶ್ಚಿಕ
ಸರ್ಕಾರಿ ಉದ್ಯೋಗಸ್ಥರು ಮುಂಬಡ್ತಿ ಹೊಂದಲು ಬೇಕಾದ ತಯಾರಿಯನ್ನು ಮಾಡಿ. ಸಂಘ ಸಂಸ್ಥೆಗಳ ಹಣಕಾಸಿನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಸರ್ಕಾರದಿಂದ ಅನುಕೂಲ.
ಧನು
ಮದುವೆಯ ವಿಚಾರದ ತೀರ್ಮಾನದ ನಂತರ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡಬೇಡಿ. ರಾಜಕೀಯ ವ್ಯಕ್ತಿಗಳಿಗೆ ಗೊಂದಲದ ವಾತಾವರಣ ಇರುವುದು. ಶತ್ರುಗಳ ವಿರುದ್ಧ ಜಯ ಸಾಧಿಸ ಬಹುದು.
ಮಕರ
ಶಿಕ್ಷಣ ವೃತ್ತಿಯಲ್ಲಿರುವವರಿಗೆ ಒತ್ತಡ ವೃದ್ಧಿಯಾಗುತ್ತದೆ ಹಾಗೂ ಶೈಕ್ಷಣಿಕ ರಂಗದಲ್ಲಿನ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಸಂಪಾದಿಸುವಿರಿ. ಬದುಕನ್ನು ಅರ್ಥಪೂರ್ಣವಾಗಿ ನಡೆಸುವ ಯೋಚನೆಗಳಿರಲಿ.
ಕುಂಭ
ಶೀಘ್ರವಾಗಿ ನಿರ್ದಿಷ್ಟವಾದ ಕಾರ್ಯವೊಂದನ್ನು ಪೂರೈಸಲೇಬೇಕೆಂಬ ಯೋಚನೆಯು ಕನಸಾಗಿಯೇ ಉಳಿಯುವುದು. ಮನೆ ಕಟ್ಟುವ ಆಸೆಗೆ ಸಹೋದರರಿಂದ ಹೆಚ್ಚಿನ ಪ್ರೋತ್ಸಾಹ ಸಿಗುವುದು.
ಮೀನ
ಸಿವಿಲ್ ಎಂಜಿನಿಯರ್‌ಗಳಿಗೆ ಅವಕಾಶಗಳು ಸಿಗುವುದು. ಬಿಡುವಿನೊಂದಿಗೆ ಮಡದಿ, ಮಕ್ಕಳೊಂದಿಗಿನ ಸಂತಸದ ದಿನ ನಿಮ್ಮದಾಗಲಿದೆ. ಮನೆಯವರೊಂದಿಗೆ ತೀರ್ಥಯಾತ್ರೆಗೆ ತೆರಳುವ ಬಗ್ಗೆ ಚರ್ಚೆ ನಡೆಸುವಿರಿ.