ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಆದಾಯದಷ್ಟೇ ಖರ್ಚು ಇರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಜೂನ್ 2024, 0:15 IST
Last Updated 2 ಜೂನ್ 2024, 0:15 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮೇಷ: ಸಾಮಾಜಿಕ ಕಾರ್ಯ ಎಂಬ ನೆಪ ಮಾಡಿಕೊಂಡು ಪಾಠ ಪ್ರವಚನಗಳ ಮೇಲೆ ನಿಮ್ಮ ಗಮನ ಕಡಿಮೆ ಆದಲ್ಲಿ ಹೆಚ್ಚಿನ ಕಷ್ಟ ಅನುಭವಿಸಬೇಕಾಗುತ್ತದೆ. ಗುರುವಿನ ಆಶೀರ್ವಾದವನ್ನು ಬೇಡಿ ನಿಮ್ಮ ಕೆಲಸವನ್ನು ಶುರು ಮಾಡುವುದು ಸೂಕ್ತಕರ.
  • ವೃಷಭ
  • ವೃಷಭ: ಕೋರ್ಟು ಕಛೇರಿ ವಿವಾದಗಳಲ್ಲಿ ರಾಜಿ ಮಾಡಿಕೊಳ್ಳುವ ಮನೋಭಾವದಿಂದ ಮುಂದುವರಿದಲ್ಲಿ, ಶುಭ ಅಂತ್ಯವನ್ನು ತಲುಪಲಿದೆ. ವಸ್ತ್ರವಿನ್ಯಾಸಕರ ಹೊಸ ವಿನ್ಯಾಸಕ್ಕೆ ಬೇಡಿಕೆ ಬರುವುದು. ಅಲರ್ಜಿಯಾಗುವ ಸಾಧ್ಯತೆಗಳಿದೆ.
  • ಮಿಥುನ
  • ಮಿಥುನ: ಹಿರಿಯ ನಾಗರಿಕರನ್ನು ಮನೆಯಲ್ಲಿಯೇ ಶುಶ್ರೂಷೆ ಮಾಡುವ ಆಯಾಗಳಿಗೆ ನಿಮ್ಮ ನಿರೀಕ್ಷೆಯ ಹಣ ಸಿಗಲಾಗದು. ಅಭೀಷ್ಟಗಳನ್ನು ನೆರವೇರಿಸಿಕೊಳ್ಳಲು ದೇವರ ಪ್ರಾರ್ಥನೆಯ ಜೊತೆಗೆ ನಿಮ್ಮ ಪ್ರಯತ್ನವಿರಲಿ.
  • ಕರ್ಕಾಟಕ
  • ಕರ್ಕಾಟಕ: ಮನೆಗೆ ಹೊಂದಿಕೊಂಡೆ ಇರುವಂತಹ ದೇವಾಲಯದ ಜೀರ್ಣೊದ್ಧಾರವನ್ನು ಮಾಡುವ ಮಾತುಕತೆ ಆಗಬಹುದು. ಭೂಸಂಬಂಧಿ ವ್ಯವಹಾರದಲ್ಲಿರುವವರಿಗೆ ಧನಲಾಭವಾಗುವುದು. ಆದಾಯದಷ್ಟೇ ಖರ್ಚು ಸಹ ಇರಲಿದೆ.
  • ಸಿಂಹ
  • ಸಿಂಹ: ಸದ್ಯಕ್ಕೆ ನಿಮಗೆ ಸಿಕ್ಕಿರುವ ಯಶಸ್ಸು ಅತ್ಯುನ್ನತ ಮಟ್ಟದ್ದಲ್ಲವಾದ್ದರಿಂದ ಅದನ್ನೆ ಹೆಚ್ಚು ಸಂಭ್ರಮಿಸುವ ಬದಲು ದೊಡ್ಡದ್ದಕ್ಕೆ ಪ್ರಯತ್ನ ಪಡಿ. ಈ ದಿನ ವಿವಿಧ ರೀತಿಯಲ್ಲಿ ಆಗುವ ಧನಾಗಮನ ಉತ್ತಮವಾಗಿರಲಿದೆ.
  • ಕನ್ಯಾ
  • ಕನ್ಯಾ: ಸಾಮಾಜಿಕ ಜಾಲತಾಣಗಲ್ಲಿ ನಿಮ್ಮನ್ನು ವೀಕ್ಷಿಸಿದ ವ್ಯಕ್ತಿಯಿಂದಾಗಿ ಅನುಕೂಲಗಳಾಗುವ ಸಾಧ್ಯತೆ ಇದೆ. ಹಳೆಯ ಮಿತ್ರರ ಕೆಲವು ಮಾತುಗಳು ಸಂದರ್ಭಕ್ಕನುಸಾರವಾಗಿ ನೆನಪಾಗುತ್ತದೆ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವಿರಿ.
  • ತುಲಾ
  • ತುಲಾ: ಮನಸ್ಸನ್ನು ಮತ್ತೆ ನಿಮ್ಮ ಹಾದಿಗೆ ತಂದುಕೊಳ್ಳಲು ಕ್ರೀಡೆಯನ್ನು ಆಡುವುದು ಅಥವ ವೀಕ್ಷಿಸುವುದನ್ನು ಮಾಡಬಹುದು. ಮಕ್ಕಳ ವಿದ್ಯಾಭ್ಯಾಸವು ಅಭಿವೃದ್ಧಿದಾಯಕವಾಗಿ ಮುಂದುವರೆಯಲಿದೆ. ನಿಮಗೆ ಬರಬೇಕಾದ ಹಣವು ಪೂರ್ಣವಾಗಿ ಬರಲಿದೆ.
  • ವೃಶ್ಚಿಕ
  • ವೃಶ್ಚಿಕ: ನಿಮ್ಮ ಬಳಿ ಕೆಲಸವನ್ನು ಕಲಿತು ನಿಮಗಿಂತ ಹೆಚ್ಚು ದುಡಿಮೆ ಮಾಡುತ್ತಿರುವವರನ್ನು ಕಂಡು ಅಸೂಯೆ ಪಡುವಿರಿ. ಮಕ್ಕಳನ್ನು ಅವರ ಸಂಗಡಿಗರು ವಂಚನೆಯ ಕಡೆಗೆ ಕರೆದೊಯ್ಯದಂತೆ ಮೇಲ್ವಿಚಾರಣೆ ನಡೆಸುವುದು ಉತ್ತಮ.
  • ಧನು
  • ಧನು: ಹಲವು ದೇಹ ಬಾಧೆಗಳಿಂದ ಬಳಲುತ್ತಿರುವವರಿಗೆ ನಿಮ್ಮ ಅನಾರೋಗ್ಯದ ಮೇಲೆ ಬೇಸರ ಹುಟ್ಟಬಹುದು. ಈ ದಿನ ವ್ಯಕ್ತಿತ್ವದಲ್ಲಿ ಹಾಗೂ ಧನಲಾಭದಲ್ಲಿ ಒಂದು ರೀತಿಯ ಹೊಸ ಅನುಭವ ಹಾಗೂ ಅದೃಷ್ಟವನ್ನು ಕಾಣುವಿರಿ.
  • ಮಕರ
  • ಮಕರ: ಜನರ ನಿಂದನೆಗಳು ನಿಮ್ಮ ಕಿವಿಗೆ ಬಿದ್ದು ವಾಸ್ತವತೆಯ ಬಗ್ಗೆ ಅವರಿಗೆ ಪರಿಚಯಿಸುವ ಹಠ ನಿಮ್ಮಲ್ಲಿ ಮೂಡುತ್ತದೆ. ಯಂತ್ರೋಪಕರಣಗಳ ಸರಿಪಡಿಸುವಿಕೆ ಅಥವಾ ಬಿಡಿ ಭಾಗಗಳ ಮಾರಾಟದಿಂದ ಲಾಭವನ್ನು ಹೊಂದುವಿರಿ.
  • ಕುಂಭ
  • ಕುಂಭ: ಸ್ವಯಂ ಪ್ರೇರಿತರಾಗಿ ಸಣ್ಣ-ಪುಟ್ಟ ಅನಾರೋಗ್ಯಗಳಿಗೆ ಔಷಧಿಯನ್ನು ಸ್ವೀಕರಿಸಿ ಹೆಚ್ಚಿನ ಅನಾರೋಗ್ಯಕ್ಕೆ ಎಡೆಮಾಡಿ ಕೊಡದಿರಿ. ಮೊಬೈಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ನಿಮ್ಮ ಸ್ಥಾನದಲ್ಲಿ ಅಭದ್ರತೆ ಕಾಡಬಹುದು.
  • ಮೀನ
  • ಮೀನ: ಮನೆಯ ಜನರ ಜಗಳದಲ್ಲಿ ನಿಮ್ಮ ಮಾತಿನ ಅವಶ್ಯಕತೆ ಬಂದಾಗಲು ಸಹ ನಿಮ್ಮ ಮನಸ್ಸಿನಲ್ಲಿರುವ ಮಾತುಗಳನ್ನೆ ಹೇಳಲು ಸಾಧ್ಯವಾಗುವುದಿಲ್ಲ. ನಿರುದ್ಯೋಗಿಗಳಿಗೆ ಕೆಲವು ಸಂಘ ಸಂಸ್ಥೆಗಳ ಸಹಾಯದಿಂದ ಉದ್ಯೋಗ ಫಲವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.