ADVERTISEMENT

ದಿನ ಭವಿಷ್ಯ: ಡಿ.5 – ಈ ರಾಶಿಯವರ ಶತ್ರುಗಳ ಬಣ್ಣ ಬಯಲಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಡಿಸೆಂಬರ್ 2023, 22:34 IST
Last Updated 4 ಡಿಸೆಂಬರ್ 2023, 22:34 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವ್ಯವಹಾರಕ್ಕೆ ಸಂಬಂಧಿಸಿದಂತೆ ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ. ಬಂಧುಗಳೊಂದಿಗೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ನಿಮ್ಮ ಜೀವನ ಶೈಲಿಯ ವೆಚ್ಚ ಅಧಿಕವಾಗುತ್ತದೆ.
  • ವೃಷಭ
  • ವಾಣಿಜ್ಯ ಸಂಸ್ಥೆಯೊಂದರಲ್ಲಿ ಕೆಲಸ ಸಂಪಾದಿಸಿಕೊಳ್ಳುವ ಪ್ರಯತ್ನಿಸಬಹುದು. ಕೇಟರಿಂಗ್ ಮತ್ತು ಹೋಟೆಲ್ ಉದ್ಯಮದವರಿಗೆ ಶುಭ ದಿನ. ಅಮೂಲ್ಯ ವಸ್ತು, ವಿಚಾರದ ನಷ್ಟವು ಮನಸ್ಸಿಗೆ ನೋವು ಉಂಟುಮಾಡಲಿದೆ.
  • ಮಿಥುನ
  • ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಗುಣದಿಂದ ವಿವಾಹಕ್ಕೆ ಸಂಬಂಧಪಟ್ಟ ಭಿನ್ನಾಭಿಪ್ರಾಯ ದೂರ ಮಾಡಿಕೊಳ್ಳುವಿರಿ. ನವ ದಂಪತಿಗಳಿಗೆ ಹರ್ಷದ ಸಮಾಚಾರ ಕೇಳಿ ಬರುವುದರಿಂದ ಮನಸ್ಸಿಗೆ ನೆಮ್ಮದಿ.
  • ಕರ್ಕಾಟಕ
  • ತಾಯಿಯ ಆರೋಗ್ಯ ಸುಧಾರಿಸಲು ಔಷಧದ ಜತೆ ಧಾರ್ಮಿಕ ಮಾರ್ಗ ಅನುಸರಿಸುವುದು ಉತ್ತಮ. ಪದವೀಧರರಿಗೆ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಸ್ಥಳ ಲಭಿಸಲಿದೆ, ಅಧ್ಯಯನಕ್ಕೆ ಗಣ್ಯರ ಪ್ರೋತ್ಸಾಹ ಸಿಗಲಿದೆ.
  • ಸಿಂಹ
  • ನಿಮ್ಮ ಸಾಮರ್ಥ್ಯ, ಪ್ರತಿಭೆಗೆ ಅನುಗುಣವಾದ ಉದ್ಯೋಗ ಅವಕಾಶ ದೊರೆಯಲಿದೆ. ವೃತ್ತಿ ಪರವಾಗಿ ಕಚೇರಿಯಲ್ಲಿ ನಿಮಗೆ ವಿಶೇಷ ಗೌರವ ದೊರೆಯಲಿದೆ. ಕುಟುಂಬದಲ್ಲಿ ಸೌಖ್ಯವಿದ್ದು ಮನೋರಂಜನೆ ಪಡೆಯುವಿರಿ.
  • ಕನ್ಯಾ
  • ರಾಜಕೀಯದಲ್ಲಿ ಬೇರೆಯವರಿಂದ ವಂಚನೆ ನೆಡೆದರೂ, ನಿಮಗೆ ಉತ್ತಮ ಭವಿಷ್ಯವಿದೆ. ಸಂಶೋಧಕರಿಗೆ ಹೊಸ ಹೊಸ ಆವಿಷ್ಕಾರಗಳಿಂದ ಜನಪ್ರಿಯತೆ ಉಂಟಾಗುವುದು. ಗೃಹ ಸಾಮಾಗ್ರಿ ಖರೀದಿಯಿಂದ ಖರ್ಚು.
  • ತುಲಾ
  • ವಿವಿಧ ಮೂಲಗಳಿಂದ ದ್ರವ್ಯಲಾಭ ಇರುವುದು. ಹಿಂದಿನ ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ, ಹೊಸತನದಲ್ಲಿ ಜಯ ಕಾಣುವಿರಿ. ಅನಿರೀಕ್ಷಿತವಾಗಿ ಶತ್ರುಗಳ ಬಣ್ಣ ಬಯಲಾಗಿ ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ.
  • ವೃಶ್ಚಿಕ
  • ಕಾರ್ಯಕ್ಷೇತ್ರದಲ್ಲಿ ಹಿಡಿತಕ್ಕೆ ಸಿಕ್ಕದಿರುವ ಕೆಲಸಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಮತ್ತು ಅನುಭವ ಪಡೆದುಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುವಿರಿ. ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭ.
  • ಧನು
  • ಬೇಕರಿ ಮಾರಾಟಗಾರರಿಗೆ ಸಿಹಿ ಪದಾರ್ಥಗಳ ಮಾರಾಟದಿಂದ ಅಧಿಕ ಲಾಭವಿರುವುದು. ಸಾಧ್ಯವಾದರೆ ಆಪ್ತರ ಕಷ್ಟಗಳ ಕಡೆಗೆ ಗಮನಹರಿಸುವುದು ಒಳ್ಳೆಯದು. ಸಾಕು ಪ್ರಾಣಿಯ ಅಗಲಿಕೆಯಿಂದ ಸ್ವಲ್ಪ ಬೇಸರ ಕಾಡುವುದು.
  • ಮಕರ
  • ಏರುಪೇರಾಗಿದ್ದ ವ್ಯಾಪಾರ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿಕೊಳ್ಳಬಹುದು. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ. ಹೊಸದನ್ನು ಕಲಿಯುವ ಉತ್ಸಾಹ ಮೂಡಲಿದೆ.
  • ಕುಂಭ
  • ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದಿರುವ ನಿಮಗೆ ಹಲವಾರು ಕನಸುಗಳು ಈಡೇರುವ ಅವಕಾಶ ಅಪರಿಚಿತ ವ್ಯಕ್ತಿ ತೋರುವರು. ಅಧಿಕಾರಿಗಳ ಖಾಸಗಿ ಸಂಪರ್ಕದಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಪುಷ್ಟಿ ದೊರೆಯಲಿದೆ.
  • ಮೀನ
  • ರಾಜಕೀಯ ವ್ಯಕ್ತಿಗಳು ನಿಮ್ಮ ಪರವಾದ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಮನೆಯಲ್ಲಿನ ವ್ಯವಹಾರಗಳಲ್ಲಿ ಈ ದಿನ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಕಾಣುವಿರಿ. ಜಯ ನಿಮ್ಮದಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.