ADVERTISEMENT

ದಿನ ಭವಿಷ್ಯ | ಡಿ.7 – ಈ ರಾಶಿಯವರ ವೃತ್ತಿಯಲ್ಲಿ ಸಂಚಾರದಿಂದ ಅಧಿಕ ಲಾಭ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಡಿಸೆಂಬರ್ 2023, 22:56 IST
Last Updated 6 ಡಿಸೆಂಬರ್ 2023, 22:56 IST
ಮೇಷ
  • ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರ ಬರಲಿದೆ. ವೃತ್ತಿ ಪ್ರಾಮಾಣಿಕತೆಗೆ ನೀರಿಕ್ಷೆ ಮೀರಿದ ಗೌರವ ಲಭ್ಯವಾಗುವುದು. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರುವುದು.
  • ವೃಷಭ
  • ಕುಟುಂಬಕ್ಕೆ ಸಂಬಂಧಿಸಿದಂತೆ ಶುಭ ವಾರ್ತಾ ಶ್ರವಣದ ಭಾಗ್ಯ ಒದಗಿಬರುವುದು. ಮನೆ ನಿರ್ಮಾಣ ಕಾರ್ಯವನ್ನು ಅಡೆತಡೆಯಿಲ್ಲದೆ ಸಂಪೂರ್ಣಗೊಳಿಸುವಿರಿ. ನಿಮ್ಮ ಗುರಿ ತಲುಪಲು ಬಹಳ ಶ್ರಮ ಪಡಬೇಕಾಗುತ್ತದೆ.
  • ಮಿಥುನ
  • ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚಿನ ಪ್ರಗತಿಯು ಹಿರಿಯರ ಅಥವಾ ಗುರುಗಳ ಸಲಹೆಗಳ ಸ್ವೀಕಾರದಿಂದ ಕಂಡುಬರಲಿದೆ. ಕ್ರೀಡಾಪಟುಗಳಿಗೆ ಸಂತಸದ ದಿನವಾಗಿದೆ. ಭೂ ವ್ಯವಹಾರಗಳು ನಿಧಾನವಾಗಿ ಕೈಗೂಡುವುದು.
  • ಕರ್ಕಾಟಕ
  • ಧವಸ ಧಾನ್ಯಗಳ ವ್ಯಾಪಾರಸ್ಥರು ಹೆಚ್ಚಿನ ಎಚ್ಚರಿಕೆಯಿಂದಿದ್ದರೆ ಬಂಡವಾಳದ ಮೂಲಧನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟವಿರುವುದು.
  • ಸಿಂಹ
  • ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ವಸ್ತ್ರ ವಿನ್ಯಾಸಗಾರರಿಗೆ ವಿಶೇಷವಾದ ಪರಿಣಿತಿಯು ಅಗತ್ಯವೆನಿಸಲಿದೆ. ಮಕ್ಕಳಿಗಾಗಿ ವಿಶೇಷ ವಸ್ತು ಕೊಳ್ಳುವಿರಿ.
  • ಕನ್ಯಾ
  • ಬಹಳ ದಿನಗಳಿಂದ ಸ್ಥಗಿತಗೊಂಡ ಕಾರ್ಯಕ್ಕೆ ಪುನಃ ಚಾಲನೆ ದೊರೆತು ಸಂತಸ ಹೊಂದುವಿರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಅದೃಷ್ಟ ಹುಡುಕಿಕೊಂಡು ಬರಲಿದೆ. ವ್ಯವಹಾರದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ.
  • ತುಲಾ
  • ವೃತ್ತಿರಂಗದಲ್ಲಿ ರಚನಾತ್ಮಕ ಕಾರ್ಯಗಳ ನಿರ್ವಹಣೆಯಿಂದ ಮುಂದಿನ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. ಉದ್ಯೋಗಕ್ಕಾಗಿ ಹೊರ ದೇಶದ ಪ್ರಯಾಣದ ಅವಕಾಶಗಳು ಸಹ ಸಿಗಬಹುದು.
  • ವೃಶ್ಚಿಕ
  • ರಾಜಕೀಯ ವಲಯದಲ್ಲಿ ನಿರೀಕ್ಷಿತ ಕಾರ್ಯಗಳು ಸರಾಗವಾಗಿ ನೆರವೇರುವುದು. ಸಾಹಿತ್ಯ ಕ್ಷೇತ್ರದಲ್ಲಿ ಭಾಗಿಯಾಗಿ ಸಂತೋಷವಾಗುವುದು. ಹೆಚ್ಚಿನ ಪರಿಶ್ರಮದಿಂದ ಎಲ್ಲಾ ಕೊರತೆಯನ್ನು ಹೋಗಲಾಡಿಸಿಕೊಳ್ಳಬಹುದು.
  • ಧನು
  • ಉದ್ಯೋಗಾಕಾಂಕ್ಷಿಗಳಿಗೆ ಪ್ರಭಾವಿ ವ್ಯಕ್ತಿಗಳ ಆಶ್ವಾಸನೆಯಿಂದ ಸಮಾಧಾನ ಸಿಗಲಿದೆ. ಮದುವೆ ಮುಂತಾದ ವಿಷಯಗಳತ್ತ ಗಮನಹರಿಸುವಂತೆ ಮನೆಯವರಿಂದ ಒತ್ತಡ. ವೃತ್ತಿಯಲ್ಲಿ ಸಂಚಾರದಿಂದ ಅಧಿಕ ಲಾಭ.
  • ಮಕರ
  • ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದ ಹೆಚ್ಚಿನ ಆದಾಯದ ಜತೆ ಸಾಗಾಣಿಕೆಯಲ್ಲಿ ಸಣ್ಣ ಸಮಸ್ಯೆಗಳೂ ಕಾಡಬಹುದು. ಉತ್ತಮ ಅವಕಾಶಗಳು ನಿಮ್ಮೆಡೆಗೆ ಬರಲಿದೆ. ಅವುಗಳನ್ನು ಉಪಯೋಗಿಸಿಕೊಳ್ಳಿ.
  • ಕುಂಭ
  • ಸಂಘ ಸಂಸ್ಥೆಗಳ ವಿಚಾರವನ್ನು ಚರ್ಚಿಸಿ ನಂತರದಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುವುದು ಉತ್ತಮ. ಸಾಲ ತೆಗೆದುಕೊಂಡ ಹಣವನ್ನು ಹಿಂದಿರುಗಿಸುವ ಬಗ್ಗೆ ಯೋಚಿಸಿ. ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಕೆಲಸ ಇರಲಿದೆ.
  • ಮೀನ
  • ಕಾಫಿ, ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಾರರು ಉತ್ತಮ ಫಸಲನ್ನು ಎದುರು ನೋಡಬಹುದು. ವೈಯಕ್ತಿಕ ವಿಚಾರಗಳಲ್ಲಿ ಸೃಷ್ಟಿಯಾದ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಿರಿ
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.