ADVERTISEMENT

ದಿನ ಭವಿಷ್ಯ: ಡಿ.9 – ಈ ರಾಶಿಗೆ ರಹಸ್ಯವಾಗಿ ಸಿಗುವ ಬೆಂಬಲದಿಂದ ಕನಸುಗಳು ಈಡೇರಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಡಿಸೆಂಬರ್ 2023, 23:05 IST
Last Updated 8 ಡಿಸೆಂಬರ್ 2023, 23:05 IST
   
ಮೇಷ
  • ಶಸ್ತ್ರವೈದ್ಯ ವೃತ್ತಿಯವರು ಸವಾಲು ಎನಿಸುವ ಪರಿಸ್ಥಿತಿ ಎದುರಿಸಬೇಕಾಗುವುದು. ಬಹುಜನರ ಒಡನಾಟದಿಂದ ಬಲ, ವಿಶ್ವಾಸ, ಪ್ರೀತಿಯನ್ನು ಪಡೆಯುವಂತಾಗಲಿದೆ. ಹಗಲು ರಾತ್ರಿಯ ವ್ಯತ್ಯಾಸವಿಲ್ಲದೇ ಶ್ರಮ ಪಡಬೇಕಾಗಲಿದೆ.
  • ವೃಷಭ
  • ಸಹೋದ್ಯೋಗಿಗಳೊಂದಿಗೆ ಸಂಯಮದಿಂದ ವರ್ತಿಸಿ, ಅದರ ಫಲವಾಗಿ ಕೆಲಸ ಸಾಧಿಸಿಕೊಳ್ಳುವಿರಿ. ನಿಮ್ಮ ಹೊಸ ಹೊಸ ಆಸೆಗಳನ್ನು ಈಡೇರಿಸಿಕೊಳ್ಳುವಂತಹ ಉತ್ತಮ ಅವಕಾಶಗಳು ಈ ದಿನ ಎದುರಾಗುವುವು.
  • ಮಿಥುನ
  • ನೀವು ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲ ಉತ್ತಮವಾಗಿ ನಡೆಯುವವು. ಸೃಜನಶೀಲ ಯೋಜನೆಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಷೇರು ಮಾರಾಟದಿಂದ ಅಧಿಕ ಲಾಭವಿದೆ.
  • ಕರ್ಕಾಟಕ
  • ಆರ್ಥಿಕ ಬಲ ಮತ್ತು ನೆಮ್ಮದಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಹೊಂದಿರುವ ನಿಮಗೆ ಮಹಾಗಣಪತಿಯ ಆರಾಧನೆ ಶುಭವನ್ನುಂಟುಮಾಡುವುದು. ನಾಯಕತ್ವದ ಹೊಣೆ ನಿಭಾಯಿಸುವುದು ಅನಿವಾರ್ಯವಾಗುವುದು.
  • ಸಿಂಹ
  • ಸಮರ್ಥವಾಗಿ ಯೋಜನೆಗಳನ್ನು ಪೂರ್ಣಗೊಳಿಸುವಿರಿ, ಆದರೆ ಹಣಕಾಸಿನ ವಿಚಾರದಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವುದು ಉತ್ತಮ. ಗೆಳೆಯರ ಜೊತೆಗೂಡಿ ದೂರದ ಊರಿಗೆ ಪ್ರವಾಸಕ್ಕೆ ತೆರಳುವ ಮನಸ್ಸಾಗಲಿದೆ.
  • ಕನ್ಯಾ
  • ನಿಮ್ಮ ಭಾವನೆಗಳಿಗೆ ನಿಮ್ಮ ಮಕ್ಕಳು ಅಥವಾ ಸಹಚರರು ಸ್ಪಂದಿಸದೇ ಇರುವುದು ಬೇಸರಕ್ಕೆ ಮುಖ್ಯ ಕಾರಣವಾಗುತ್ತದೆ. ಸಂಯಮದಿಂದ ನಡೆದುಕೊಳ್ಳುವುದು ವ್ಯಾವಹಾರಿಕವಾಗಿ ಲಾಭವನ್ನು ತಂದುಕೊಡುವುದು.
  • ತುಲಾ
  • ದೈನಂದಿನ ಯಾಂತ್ರಿಕ ಬದುಕಿನಿಂದ ಸ್ವಲ್ಪ ವಿರಾಮ ಪಡೆದು ಕುಟುಂಬ ದೊಂದಿಗೆ ಕಾಲ ಕಳೆಯುವ ಆಲೋಚನೆ ಕೈಗೂಡಲಿದೆ. ಫೋಟೋ ಸ್ಟುಡಿಯೋದವರಿಗೆ ಹೆಚ್ಚಿನ ಅವಕಾಶಗಳೊಂದಿಗೆ ಜನಪ್ರಿಯತೆಯೂ ಹೆಚ್ಚುವುದು.
  • ವೃಶ್ಚಿಕ
  • ತೊಂದರೆಗಳೆಲ್ಲಾ ಒಂದೊಂದಾಗಿ ಉಪಶಮನಗೊಳ್ಳುತ್ತಾ ಹಂತ ಹಂತವಾಗಿ ಅಭಿವೃದ್ಧಿ ಕಾಣುವಿರಿ. ನಿಮ್ಮ ಅಗಾಧ ಅನುಭವ, ಪ್ರಯತ್ನ ಬಲ ಹಾಗೂ ಆತ್ಮವಿಶ್ವಾಸದಿಂದ ರಂಗಕಲೆಯಲ್ಲಿ ಹೆಸರು ಮಾಡುವಂತಾಗಲಿದೆ.
  • ಧನು
  • ಸರಿ ತಪ್ಪುಗಳ ವಿಚಾರದಲ್ಲಿ ಈ ದಿನ ನೀವು ಯಾರಲ್ಲಿಯೂ ವಾದ ಮಾಡುವುದು ಸರಿಯಲ್ಲ. ವಿಶ್ವಾಸದಲ್ಲಿ ಯಾರಿಗೂ ಹಣ ನೀಡಬೇಡಿ. ದಿನಸಿ ವ್ಯವಹಾರಗಳಲ್ಲಿ ಹೆಚ್ಚಿನ ಹೂಡಿಕೆಯಿಂದ ಲಾಭವಾಗುವುದು.
  • ಮಕರ
  • ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ. ಆಂಜನೇಯ ಸಹಿತ ಶ್ರೀರಾಮಚಂದ್ರನನ್ನು ಮನಃಪೂರ್ವಕವಾಗಿ ಪೂಜಿಸಿಕೊಂಡು ಕೆಲಸ ಮುಂದುವರಿಸಿ, ಫಲಕಾರಿಯಾಗುವುದು.
  • ಕುಂಭ
  • ಉದ್ಯೋಗದಲ್ಲಿ ಅಧಿಕ ಲಾಭ ಮಾಡುವ ಉದ್ದೇಶದಿಂದ ಕೈ ಸುಡುವ ಕೆಲಸ ಮಾಡದಿರಿ. ನೀವು ಅನಾವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅನುಮಾನವನ್ನು, ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ.
  • ಮೀನ
  • ರಹಸ್ಯವಾಗಿ ಸಿಗುವ ಬೆಂಬಲದಿಂದ ನಿಮ್ಮ ಕನಸುಗಳು ನನಸಾಗಲಿದೆ. ಯಾವುದೇ ಗೊಂದಲಗಳಿಗೆ ಒಳಗಾಗದೆ ನಿಮ್ಮ ನಿಲುವು ಸ್ಪಷ್ಟಪಡಿಸಿಕೊಂಡಲ್ಲಿ ಗೆಲುವು ನಿಮ್ಮದಾಗಲಿದೆ. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.