ADVERTISEMENT

Todays Horoscope | ದಿನ ಭವಿಷ್ಯ– 10 ಜೂನ್ 2023

ಪ್ರಜಾವಾಣಿ ವಿಶೇಷ
Published 9 ಜೂನ್ 2023, 22:28 IST
Last Updated 9 ಜೂನ್ 2023, 22:28 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಈ ದಿನ ಹೆಚ್ಚಿನ ಆತ್ಮಸ್ಥೈರ್ಯದಿಂದ ಕೆಲಸ ಪ್ರಾರಂಭಿಸಿದರೂ ಜಯ ಕಾಣುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನಗಳು ದೊರಕುತ್ತದೆ. ವರಮಾನ ತೆರಿಗೆ ಸಿಬ್ಬಂದಿಗೆ ಕೆಲಸದಲ್ಲಿ ಸ್ವಲ್ಪ ಬಿಡುವು ಸಿಗುವುದು.
  • ವೃಷಭ
  • ಸೃಜನಶೀಲ ಯೋಜನೆ ಮುಂದುವರಿಸಲು ಇದು ಶುಭದಿನ. ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಸೂಕ್ತ ರೀತಿಯಲ್ಲಿ ಮಾಡಿಕೊಳ್ಳುವುದು ಒಳ್ಳೆಯದು. ದಿನದ ಅಂತ್ಯದಲ್ಲಿ ಸಂತಸದ ಸುದ್ದಿ ಕೇಳಿ ಬರುವುದು.
  • ಮಿಥುನ
  • ಶೈಕ್ಷಣಿಕ ರಂಗದಲ್ಲಿನ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಗಳಿಸಿಕೊಳ್ಳಬಹುದು. ಕಾರ್ಮಿಕರ ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡಿ ಅವರ ಮನಸ್ಸಿನಲ್ಲಿ ಉತ್ತಮ ಸ್ಥಾನವನ್ನು ಸಂಪಾದಿಸಿಕೊಳ್ಳುವಂತೆ ಆಗಲಿದೆ.
  • ಕರ್ಕಾಟಕ
  • ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನ ಈ ದಿನ ಫಲ ನೀಡಲಿದೆ. ಈ ದಿನ ಸಿಗುವ ಅನಿರೀಕ್ಷಿತ ಅವಕಾಶಗಳನ್ನು ಯಾವುದೇ ಮುಜುಗರವಿಲ್ಲದೆ ಬಳಸಿಕೊಳ್ಳದ್ದಿದ್ದರೆ ದಡ್ಡತನ ಪ್ರದರ್ಶಿಸಿದಂತಾಗುವುದು.
  • ಸಿಂಹ
  • ಸಾಧನೆ ಹಾಗೂ ಅಭಿವೃದ್ಧಿ ಸಾಧಿಸುವ ದಿನ ಎನಿಸಲಿದೆ. ಆಫೀಸಿನ ಕೆಲಸಗಳಿಗಾಗಿ ದೂರದ ಪ್ರಯಾಣ ಲಾಭದಾಯಕ. ವೈಯಕ್ತಿಕ ಕೆಲಸಗಳಿಗೆ ಮೇಲಧಿಕಾರಿಗಳಿಂದ ಅಡಚಣೆ ಇರುವುದಿಲ್ಲ.
  • ಕನ್ಯಾ
  • ಪೊಲೀಸ್ ಅಧಿಕಾರಿಗಳು ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವುದು. ನಿಮ್ಮಲ್ಲಿನ ಏಕಾಗ್ರತೆಯಿಂದಾಗಿ ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಯಾವುದೇ ಕೆಲಸ ಒಪ್ಪಿಕೊಳ್ಳಬಹುದು.
  • ತುಲಾ
  • ಸರ್ಕಾರಿ ಅಧಿಕಾರಿಗಳು ಕಾನೂನು ವಿಷಯಗಳ ಬಗ್ಗೆ ಗಮನ ಹರಿಸ ಬೇಕಾಗಬಹುದು. ಅವಶ್ಯಕತೆಗಳು ಆಶ್ಚರ್ಯಕರ ರೀತಿಯಲ್ಲಿ ಲಭಿಸಲಿದೆ. ಸಹೋದ್ಯೋಗಿಗಳ ಸಂಯಮದ ವರ್ತನೆಯಿಂದ ಅನುಕೂಲ.
  • ವೃಶ್ಚಿಕ
  • ಆಫೀಸಿನ ಕೆಲಸದ ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮ ಮತ್ತು ಉತ್ಸಾಹ ಕೈಗೊಳ್ಳಬೇಕಾಗುವುದು. ಬೆಂಕಿಯಿಂದ ಅನಾಹುತಗಳು ಸಂಭವಿಸುವ ಲಕ್ಷಣಗಳಿರುವುದು. ನಿರೀಕ್ಷೆಗೂ ಮೀರಿದ ಫಲಿತಾಂಶ ಕಾಣುವಿರಿ.
  • ಧನು
  • ಎಲ್ಲಾ ಆಸೆಗಳನ್ನು ಕೈಬಿಟ್ಟು ಜೀವನ ನಡೆಸುವ ಸಮಯದಲ್ಲಿ ಪುನಃ ಅದೃಷ್ಟ ನಿಮ್ಮನ್ನು ಕೈ ಬೀಸಿ ಕರೆಯುವುದು. ಕ್ರೀಡಾಪಟುಗಳಿಗೆ ದೇಹಬಾಧೆ ಕಾಣಿಸಬಹುದು. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕಾಗುವುದು.
  • ಮಕರ
  • ವಿದ್ಯಾರ್ಥಿ ವರ್ಗಕ್ಕೆ ಬಂದಿರುವ ಜವಾಬ್ದಾರಿಯುಕ್ತ ನಡವಳಿಕೆ ಮತ್ತು ಉತ್ಸಾಹದಿಂದ ಏಳಿಗೆಯ ಸೂಚನೆ ಇರುವುದು. ದೇಹದಲ್ಲಿ ಉತ್ಸಾಹವಿರುವುದರಿಂದ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು.
  • ಕುಂಭ
  • ವಾಹನಾದಿಗಳ ಅಥವಾ ದೊಡ್ಡ ದೊಡ್ಡ ಯಂತ್ರಗಳಲ್ಲಿ ಕೆಲಸ ಮಾಡು ವವರಿಗೆ ಜಾಗ್ರತೆ ಅಗತ್ಯ. ಆಸ್ತಿ ಕೊಳ್ಳುವಾಗ ಎಲ್ಲಾ ವಿವರಗಳ ಬಗ್ಗೆ ಎರಡೆರಡು ಬಾರಿ ಮಾಹಿತಿ ಪಡೆದುಕೊಳ್ಳಿರಿ. ಕೆಲಸದ ಒತ್ತಡ ಕಡಿಮೆಯಾಗಲಿದೆ.
  • ಮೀನ
  • ನಿಯಮ, ನಿಷ್ಠೆಗಳಿಂದ ಅಧಿಕಾರದಲ್ಲಿ ಪದೋನ್ನತಿ ಪಡೆಯಬಹುದು. ವಿದೇಶ ಪ್ರಯಾಣದ ನಿಮ್ಮ ಹಲವು ವರ್ಷಗಳ ಕನಸು ನೆರೆವೇರುವ ಅವಕಾಶ ಸಿಗುವುದು. ನಾಸ್ತಿಕತೆಯನ್ನು ಬದಿಗಿಟ್ಟು ದೇವತಾರಾಧನೆಯ ಹಾದಿ ಹಿಡಿಯಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.