ದಿನ ಭವಿಷ್ಯ: ಈ ರಾಶಿಯವರಿಗೆ ಕಚೇರಿಯಲ್ಲಿ ಹಿರಿಯರಿಗಿಂತ ಉನ್ನತ ಸ್ಥಾನಮಾನ ಸಿಗಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಅಕ್ಟೋಬರ್ 2025, 0:02 IST
Last Updated 10 ಅಕ್ಟೋಬರ್ 2025, 0:02 IST
ದಿನ ಭವಿಷ್ಯ
ಮೇಷ
ಕಳೆದು ಹೋಗಿದ್ದ ವಸ್ತುಗಳು ಪತ್ತೆಯಾಗಿ, ಸಂತೋಷವಾಗಲಿದೆ. ವಿಮಾ ಸಲಹೆಗಾರರು ನಿಮ್ಮ ಗುರಿ ತಲುಪುವುದರಲ್ಲಿ ಯಶಸ್ಸನ್ನು ಹೊಂದುವಿರಿ. ಆಕಸ್ಮಿಕ ರೀತಿಯಲ್ಲಿ ಮದುವೆ ನಿಶ್ಚಯ ಕಾರ್ಯ ನಡೆಯಲಿದೆ.
ವೃಷಭ
ಕೆಲವೊಂದು ಜವಬ್ದಾರಿಯುತವಾದ ಊರಿನ ಕಾರ್ಯಗಳು ನಿಮ್ಮ ಮುಂದಾಳತ್ವದಲ್ಲಿ ನೆಡೆಯಲಿದೆ. ನಿಮ್ಮಲ್ಲಿರುವ ಸೃಜನ ಶೀಲತೆಗೆ ಉತ್ತಮ ವೇದಿಕೆ ಪ್ರಾಪ್ತಿಯಾಗುವುದು. ಮಕ್ಕಳ ಭವಿಷ್ಯದ ಚಿಂತೆಯು ನಿದ್ದೆಗೆಡಿಸುತ್ತದೆ.
ಮಿಥುನ
ಮಾರ್ಗದರ್ಶಕರ ಸಲಹೆ ಸೂಚನೆ ಪಡೆದು ಆರಂಭಿಸಿದ ಯೋಜನಾ ಬದ್ಧ ಕೆಲಸಗಳಲ್ಲಿ ಹೆಚ್ಚಿನ ಅನುಕೂಲ ಉಂಟಾಗಲಿದೆ. ಪ್ರಯಾಣದಲ್ಲಿ ಅಪವಾದದ ಸನ್ನಿವೇಶಗಳು ಎದುರಾಗಬಹುದು, ಜಾಗ್ರತರಾಗಿರಿ.
ಕರ್ಕಾಟಕ
ನಿಮ್ಮ ಮಾತುಗಳು ನಿಮಗೆ ಮುಳ್ಳಾಗುವ ಸಾಧ್ಯತೆ ಇದೆ. ಜಾಗರೂಕತೆಯಿಂದ ವ್ಯವಹರಿಸಿ. ಪ್ರತಿ ವರ್ಷ ಮಾಡಿಕೊಂಡುಬಂದ ಕುಟುಂಬದ ಧಾರ್ಮಿಕ ಕೆಲಸ ಮಾಡುವ ಬಗ್ಗೆ ತೀರ್ಮಾನಿಸಿ.
ಸಿಂಹ
ತೈಲ ಉತ್ಪನ್ನ ವಸ್ತುಗಳ ಮಾರಾಟ ಮತ್ತು ಪಾಲುದಾರಿಕೆ ವ್ಯವಹಾರಗಳು ಲಾಭ ತರಲಿದೆ. ಪರಿಸ್ಥಿತಿಗೆ ಹೊಂದಿಕೊಂಡು ನಡೆಯಬೇಕಾಗುವುದು ಅನಿವಾರ್ಯ. ದಕ್ಷಿಣಾಮೂರ್ತಿಯನ್ನು ಪೂಜಿಸುವುದರಿಂದ ಶುಭವಾಗಲಿದೆ.
ಕನ್ಯಾ
ಕುಟುಂಬದ ಸದಸ್ಯರು ನಿಮ್ಮ ನಿರ್ಧಾರಗಳನ್ನು ಒಪ್ಪಿಕೊಳ್ಳುವರು. ವೈಯಕ್ತಿಕ ಕೆಲಸಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ. ದಿಟ್ಟತನದ ಜತೆ ತಂತ್ರಗಾರಿಕೆ ತೋರಿದರೆ ಅಧಿಕಾರಿಗಳ ಗಮನ ಸೆಳೆಯುವುದು ಕಷ್ಟವೇನಲ್ಲ.
ತುಲಾ
ಆಫೀಸಿನ ಕೆಲಸದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕಾಗುವುದು. ಆಭರಣಗಳಿಗಾಗಿ ಹಣ ಖರ್ಚು ಮಾಡುವಿರಿ. ಅನಿರೀಕ್ಷಿತ ಪ್ರಯಾಣ ಸಾಧ್ಯ. ಶುಭ ಕಾರ್ಯ ದಲ್ಲಿ ಪ್ರಮುಖ ಪಾತ್ರ ವಹಿಸುವಿರಿ.
ವೃಶ್ಚಿಕ
ಲೋಹ ವಸ್ತುಗಳ ಮಾರಾಟಗಾರರು ವ್ಯಾಪಾರದಲ್ಲಿ ಮಂದಗತಿ ಕಂಡರೂ ಅಭಿವೃದ್ಧಿಯಂತೂ ಖಚಿತವಾಗಿ ಸಿಗಲಿದೆ. ಚರ್ಮ ಉದ್ಯಮದವರಿಗೆ ರಫ್ತು ವ್ಯಾಪಾರಗಳಿಂದ ಲಾಭ. ಮಗಳಿಂದ ಸಂತೋಷದ ಸುದ್ದಿ ಕೇಳಿ ಬರಲಿದೆ.
ಧನು
ರಾಜಕೀಯ ವರ್ಗದವರು ರಾಜಕಾರಣದ ತಂತ್ರಗಾರಿಕೆ ನಡೆಸಿ ಎದುರಾಳಿಯ ವೈಯಕ್ತಿಕ ಜೀವನಕ್ಕೆ ತೊಂದರೆ ಮಾಡದಿರಿ. ನಿಮ್ಮ ಚಾಣಾಕ್ಷ ತನದಿಂದ ಕಿರಿಯರಾದ ನಿಮಗೆ ಆಫೀಸಿನಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ.
ಮಕರ
ಕೋರ್ಟ್ ಕೆಲಸಗಳಿಗಾಗಿ ಹಿರಿಯ ಅಧಿಕಾರಿಗಳ ಸಲಹೆ ಪಡೆಯಿರಿ. ಬಂಧುಗಳೊಂದಿಗಿದ್ದ ಭಿನ್ನಾಭಿಪ್ರಾಯ ಬಗೆಹರಿಯಲಿದೆ. ವಿವಾದಗಳಿಂದ ದೂರವಿರಿ. ಅನಿರೀಕ್ಷಿತ ಹೊಸ ಉದ್ಯೋಗ ದೊರೆತು ಸಂತೋಷ ಹೆಚ್ಚಲಿದೆ.
ಕುಂಭ
ತಾಂತ್ರಿಕ ವಿಷಯದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮದ ಅಗತ್ಯವಿದೆ. ಮನೆ ಹುಡುಕುವ ಕೆಲಸಕ್ಕೆ ಸಹೋದ್ಯೋಗಿ ನೆರವು ಸಿಗಲಿದೆ.ಹೆಂಡತಿ ಮಕ್ಕಳ ಆರೋಗ್ಯ ಉತ್ತಮವಾಗಿರುವುದು ನೆಮ್ಮದಿಗೆ ಕಾರಣ.
ಮೀನ
ಈ ದಿನವನ್ನು ಗಣಪತಿಯ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲು ಮರೆಯದಿರಿ. ವಿಚಾರ ಸಂಕಿರಣದಲ್ಲಿ ಭಾಗವಹಿಸಲುವಾಗಿ ಆಮಂತ್ರಿಸುವರು. ವೈವಾಹಿಕ ಮಾತುಕತೆಗಳಿಗೆ ಸೌಹಾರ್ದಯುತ ವಾತಾವರಣ ಒದಗಿಬರಲಿದೆ.