ADVERTISEMENT

Today's Horoscope | ದಿನ ಭವಿಷ್ಯ – 11 ಜೂನ್ 2023

ಪ್ರಜಾವಾಣಿ ವಿಶೇಷ
Published 10 ಜೂನ್ 2023, 22:41 IST
Last Updated 10 ಜೂನ್ 2023, 22:41 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು. ಗೃಹ ನಿರ್ಮಾಣ ಅಥವಾ ಕೊಳ್ಳುವ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ನಿಮ್ಮ ಶ್ರಮವಿರಲಿ.
  • ವೃಷಭ
  • ಅಧ್ಯಯನ ಸಂಶೋಧನೆಯಿಂದ ಯೋಚಿಸಿದ ಹಣ ಮತ್ತು ಖ್ಯಾತಿಯನ್ನು ನಿಮ್ಮ ಇಷ್ಟದಂತೆ ಪಡೆದುಕೊಳ್ಳಲು ಆಗದೇ ಇರುವುದರಿಂದ ನೆಮ್ಮದಿ ಕಳೆದುಕೊಳ್ಳುವಂತಾಗಲಿದೆ. ಬಂಧು ಮಿತ್ರರ ಸಹಾಯ ಸಕಾಲಕ್ಕೆ ಒದಗುವುದು.
  • ಮಿಥುನ
  • ನಿಮ್ಮ ಅಸಾಧಾರಣ ಸಾಧನೆಗಳಿಗಾಗಿ ಪ್ರಶಂಸೆಯ ನುಡಿ ಮತ್ತು ಸನ್ಮಾನಗಳನ್ನು ಪಡೆಯುವಿರಿ. ದೀನರ ಸೇವೆಯಿಂದ ನಿಮ್ಮ ಅದೃಷ್ಟ ಈ ದಿನ ಇಮ್ಮಡಿಗೊಳ್ಳಲಿದೆ. ಗುರಿಯನ್ನು ತಲುಪುವಲ್ಲಿ ನಿಮ್ಮ ಶ್ರಮವು ಸಾರ್ಥಕವೆನಿಸುವುದು.
  • ಕರ್ಕಾಟಕ
  • ಕರ್ಕಾಟಕ: ಮದುವೆ ಮುಂತಾದ ವಿಷಯಗಳತ್ತ ಗಮನಹರಿಸುವಂತೆ ಮನೆಯವರಿಂದ ಒತ್ತಡ ಬರಲಿದೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ ಗಳಿಸಬಹುದು. ವ್ಯವಸಾಯದ ಕೆಲಸಗಳಿಗಾಗಿ ಹೆಚ್ಚಿನ ಶ್ರಮ ಪಡುವಂತಾಗಲಿದೆ.
  • ಸಿಂಹ
  • ವೃತ್ತಿಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿಮ್ಮೊಳಗಿನ ನಾಯಕನನ್ನು ಜಾಗೃತಗೊಳಿಸಿ. ಕೆಲವು ಪ್ರಮುಖ ಕಾರ್ಯಗಳನ್ನು ಮಾಡುವಾಗ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು, ಅವನ್ನು ಲೆಕ್ಕಿಸದೆ ಗುರಿ ಸಾಧನೆಯ ಬಗ್ಗೆ ಯೋಚಿಸಿರಿ.
  • ಕನ್ಯಾ
  • ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ, ಏಕೆಂದರೆ ಅದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಹೊಂದುವಿರಿ. ವೃತ್ತಿಯಲ್ಲಿ ಉನ್ನತಿ ತೋರಿಬಂದರೂ ವಿಘ್ನ ಭೀತಿ ಅಥವಾ ಅಪವಾದದ ಸಮಸ್ಯೆ ಇರುತ್ತದೆ.
  • ತುಲಾ
  • ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಉತ್ತಮ. ವಾಹನ ಮಾರಾಟಗಳಿಂದ ಉತ್ತಮ ಆದಾಯವನ್ನು ಪಡೆದುಕೊಳ್ಳುವಿರಿ. ಪೆಟ್ರೋಲಿಯಂ ಉತ್ಪನ್ನಗಳಿಂದ ಹೆಚ್ಚಿನ ಆದಾಯವಿದೆ.
  • ವೃಶ್ಚಿಕ
  • ಸುದ್ದಿಗೋಷ್ಟಿಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶವನ್ನು ಸಿಗುವುದು. ಈ ದಿನದ ಪರಿಸ್ಥಿತಿಯನ್ನು ನೀವು ಬುದ್ಧಿವಂತಿಕೆ ಮತ್ತು ಬಹಳ ಎಚ್ಚರಿಕೆಯಿಂದ ನಿಭಾಯಿಸಿ. ಮನೆಯ ಹೆಚ್ಚುವರಿ ಆದಾಯದಿಂದ ಹುಮ್ಮಸ್ಸು ಹೆಚ್ಚುವುದು.
  • ಧನು
  • ಹಿಂದೆ ಕೆಲಸ ತಿರಸ್ಕರಿಸಿದವರು ಪುನಃ ಹಿಂದಿನ ಕಂಪನಿಯನ್ನೇ ಆಶ್ರಯಿಸುವ ಬಗ್ಗೆ ಯೋಚನೆ ಮಾಡಿ. ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಸಫಲತೆಯನ್ನು ಹೊಂದುವರು.
  • ಮಕರ
  • ನಿಮ್ಮೆಲ್ಲಾ ಕೆಲಸಗಳಿಗೂ ಕುಟುಂಬ ವರ್ಗದವರ ಉತ್ತಮವಾದ ಬೆಂಬಲವಿರುವುದು. ರಾಜಕೀಯ ವಿದ್ಯಮಾನಗಳನ್ನು ಎಚ್ಚರಿಕೆಯಿಂದ ಗಮನಿರಿ. ಶ್ರಮದ ಬದುಕಿನಿಂದ ಹೊಸ ಘಟ್ಟವನ್ನು ತಲುಪುವಂತಾಗಲಿದೆ.
  • ಕುಂಭ
  • ಕಲೆ, ಅಲಂಕಾರಿಕ ಹಾಗೂ ವೈಭೋಗ ವಸ್ತುಗಳಿಂದಾಗಿ ಹೆಚ್ಚಿನ ಲಾಭಾಂಶವನ್ನು ಈ ದಿನದಲ್ಲಿ ನೀವು ನಿರೀಕ್ಷಿಸಬಹುದು. ಮನೆಯಲ್ಲಿ ಮಂಗಳಕಾರ್ಯಗಳು ನೆಡೆಯುವ ಸೂಚನೆ ಕಾಣುತ್ತದೆ. . ನಿಮ್ಮ ಸ್ಪರ್ಧಾ ಮನೋಭಾವ ತೀವ್ರಗೊಳ್ಳುವುದು.
  • ಮೀನ
  • ಚರ ಅಥವಾ ಸ್ಥಿರ ಸ್ವತ್ತುಗಳು ಸಿಗುವ ಸಂಭವವಿದೆ. ಮನೆಯ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಕುಟುಂಬ ಸದಸ್ಯರ ಆರೋಗ್ಯದ ಬಗೆಗಿನ ಚಿಂತೆ ತಪ್ಪಿದ್ದಲ್ಲ. ಪೋಲೀಸ್ ಸಿಬ್ಬಂದಿಗಳಿಗೆ ಹೆಚ್ಚಿನ ಕೆಲಸವಿರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.