ADVERTISEMENT

ದಿನ ಭವಿಷ್ಯ: ಈ ರಾಶಿಯವರು ಪಾಪಗಳೆಲ್ಲವೂ ನಾಶವಾದ ದಿವ್ಯ ಅನುಭವವನ್ನು ಹೊಂದುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಜೂನ್ 2024, 23:43 IST
Last Updated 10 ಜೂನ್ 2024, 23:43 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಇಂದು ಮಿತ್ರರ ಹಾಗೂ ಸಹೋದ್ಯೋಗಿಗಳ ಮೇಲಿಟ್ಟ ಪ್ರೀತಿ ವಿಶ್ವಾಸವು ಅನುಭವಕ್ಕೆ ಬರಲಿದೆ.  ಶಿಶುವಿನ ಜನನ ಕುಟುಂಬದ ಸಂತೋಷಕ್ಕೆ ಕಾರಣವಾಗುತ್ತದೆ. ವಾಣಿಜ್ಯ ವ್ಯವಹಾರಗಳು ಲಾಭ ತರಲಿವೆ.
  • ವೃಷಭ
  • ಕುಲದೇವರ ಅಥವಾ ಕಾರಣೀಕ ಸ್ಥಳದ ಭೇಟಿಯಿಂದಾಗಿ ಪಾಪಗಳೆಲ್ಲವೂ ನಾಶವಾದ ದಿವ್ಯ ಅನುಭವವನ್ನು ಹೊಂದುವಿರಿ. ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ, ಮನೆಯಲ್ಲಿಯೂ ನೆಮ್ಮದಿಯ ವಾತಾವರಣ ಇರಲಿದೆ.
  • ಮಿಥುನ
  • ಸ್ವಂತ ಉದ್ಯಮದಲ್ಲಿರುವವರು ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಬಹಳ ಉತ್ಸಾಹ ತೋರಿ, ಯಶಸ್ವಿಯಾಗುವರು. ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಗೊಳ್ಳುವ ಹಂತಕ್ಕೆ ಬರಲಿವೆ.
  • ಕರ್ಕಾಟಕ
  • ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ. ಹಿಡಿದ ಕೆಲಸಗಳು ಹಂತ ಹಂತವಾಗಿ ಅಥವಾ ಒಂದೊಂದಾಗಿ ಮುಗಿಸುವ ಪ್ರಯತ್ನವಿರಲಿ. ವಿಶ್ವಾಸವಿರಲಿ.
  • ಸಿಂಹ
  • ಸ್ವಾಧ್ಯಯನ ನಡೆಸದೆ ವಿದ್ಯಾರ್ಥಿಗಳ ಮುಂದೆ ಪಾಠ ಮಾಡಲು ತೆರಳಿ ವಿಷಯಗಳು ಅದಲು ಬದಲು ಮಾಡಿಕೊಳ್ಳುವ ಸಾಧ್ಯತೆ ಇದೆ. ಗೌರವಾನ್ವಿತ ವ್ಯಕ್ತಿಯೆಂದು ಅನಿಸಿಕೊಂಡ ನಿಮಗೆ ಸಮಾಜದಲ್ಲಿ ಅಪಮಾನವಾಗಬಹುದು.
  • ಕನ್ಯಾ
  • ಸಲಹೆ ಸೂಚನೆಗಳನ್ನು ಹೆಚ್ಚಿನ ಯೋಚನೆ ಇಲ್ಲದೆ ಮೇಲಧಿಕಾರಿಗಳು ಒಪ್ಪುವಂತೆ ಆಗುತ್ತದೆ. ಈ ದಿನ ದೈಹಿಕ  ಶ್ರಮ ಕಡಿಮೆ ಇದ್ದರೂ ಹೆಚ್ಚಿನ ಆದಾಯವಿರುವುದರಿಂದ ಮನಸ್ಸಿಗೆ ಸ್ವಲ ನೆಮ್ಮದಿ ತೋರುವುದು.
  • ತುಲಾ
  • ಕೆಲವು ವಸ್ತುಗಳ ದರ್ಶನದಿಂದ ಪೂರ್ವಾಶ್ರಮದ ಘಟನೆಗಳು ನೆನಪಾಗಿ ಜೊತೆಗಾರರೊಂದಿಗೆ ಹಂಚಿಕೊಳ್ಳುವಿರಿ. ಬದಲಾದ ಕೆಲವು ಗೃಹೋಪಯೋಗಿ ವಸ್ತುಗಳು ಅಡ್ಡಪರಿಣಾಮ ಉಂಟುಮಾಡುವುದು
  • ವೃಶ್ಚಿಕ
  • ಉತ್ತಮ ಗುಣಮಟ್ಟದ್ದೆಂದು ತಿಳಿದು ತಂದಂಥ ವಸ್ತುಗಳು ಕಳಪೆ ಪ್ರದರ್ಶನ ನೀಡುತ್ತವೆ. ಕುಟುಂಬದ ಅಭಿವೃದ್ಧಿಗಾಗಿ ಉತ್ತಮ ಯೋಚನೆಗಳು ಬರಲಿವೆ. ಅದನ್ನು ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ.
  • ಧನು
  • ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿ ಸಂಘಟಿಸಲು ಸುದಿನ. ಪಿತೃ ಸಮಾನರಿಂದ ಮನೆಯಲ್ಲಿ ನಡೆಯುವ ಶುಭ ಸಮಾರಂಭಕ್ಕೆ ಆಶೀರ್ವಾದ  ಪಡೆಯಲು ಮರೆಯದಿರಿ.
  • ಮಕರ
  • ಬಾಣಸಿಗರಿಗೆ ಕಾರ್ಯದ ಶುಚಿತ್ವವು ರುಚಿತ್ವದಷ್ಟೇ ಪ್ರಾಮುಖ್ಯ  ಪಡೆದುಕೊಳ್ಳುತ್ತದೆ. ಉದ್ಯಮಿ ಹಾಗೂ ಅಧಿಕಾರಿಗಳು ನಿಯಂತ್ರಣದಲ್ಲಿ ಇರುವರು. ಸೌಂದರ್ಯವರ್ಧಕಗಳ ಮಾರಾಟಗಾರರಿಗೆ ಲಾಭದ ದಿನ.
  • ಕುಂಭ
  • ನಿಮ್ಮ ಪ್ರಭಾವದಿಂದ ಬೇರೆಯವರು ಲಾಭ ಪಡೆಯುವಷ್ಟು ಯೋಗ್ಯತೆ ನಿಮ್ಮದಾಗುತ್ತದೆ. ಲಾಭದಾಯಕ ನಡೆಯುವ ವ್ಯವಹಾರದ ಮೇಲೆ ನಿಗಾ ಇರಲಿ. ಮುಖ್ಯ ವಿಚಾರ ಮರೆಯದಿರಿ
  • ಮೀನ
  • ಮಕ್ಕಳ ಸರ್ವತೋಮುಖ ಚಟುವಟಿಕೆ ಮತ್ತು ವಿದ್ಯಾಭ್ಯಾಸ ಉತ್ತಮವಾಗಿದ್ದು , ಶಾಂತಿ ತುಂಬಿರುತ್ತವೆ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನಾಗಲಿದೆ. ಪ್ರಯಾಣದಿಂದ ಆಯಾಸವಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.