ADVERTISEMENT

ದಿನ ಭವಿಷ್ಯ: ಈ ರಾಶಿಯವರ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಆಗಸ್ಟ್ 2024, 0:30 IST
Last Updated 19 ಆಗಸ್ಟ್ 2024, 0:30 IST
   
ಮೇಷ
  • ಮೇಷ: ವೃತ್ತಿ ತರಬೇತಿ ಹೊಂದಿದ ಕುಶಲಕರ್ಮಿಗಳಿಗೆ ಆದಾಯ ಹೆಚ್ಚಳ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಫಲ ಅನುಭವಿಸುವಿರಿ. ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ.
  • ವೃಷಭ
  • ವೃಷಭ: ಕುಟುಂಬ ಸದಸ್ಯರ ಮುಂದೆ ಬಾಯಿ ತಪ್ಪಿ ಹೇಳಿದ ಸತ್ಯದಿಂದಾಗಿ ಯುದ್ಧದ ಪರಿಸ್ಥಿತಿ ಎದುರಾಗಬಹುದು. ವ್ಯವಸಾಯಕ್ಕೆ ಸಂಬಂಧಿಸಿದ ಕೆಲಸವನ್ನು ಅತ್ಯಂತ ಸಂತೋಷ ಹಾಗೂ ಶ್ರದ್ಧೆಯಿಂದ ಮಾಡುವಿರಿ.
  • ಮಿಥುನ
  • ಮಿಥುನ: ಮಕ್ಕಳು ನಿಮ್ಮನ್ನು ಕುರಿತು ಕೇಳುವಂಥ ಪ್ರಶ್ನೆಗಳಿಗೆ ನಿರುತ್ತರರಾಗುತ್ತೀರಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯವೆನಿಸಲಿದೆ. ಚರ್ಮದ ಒರಟಾಗುವಿಕೆಯು ನಿಮ್ಮನ್ನು ಬಾಧಿಸಬಹುದು.
  • ಕರ್ಕಾಟಕ
  • ಕರ್ಕಾಟಕ: ಉನ್ನತ ಶಿಕ್ಷಣದ ಮನಸ್ಸಿದ್ದರೂ ನಿಬಂಧನೆಗಳಿಗೆ ಕಟ್ಟುಬಿದ್ದು ವೃತ್ತಿಯನ್ನೇ ಆರಿಸಿಕೊಳ್ಳುವಿರಿ. ಸಹೋದರರ ಬಗ್ಗೆ ನಿಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವ ಪ್ರಯತ್ನಮಾಡಿ.
  • ಸಿಂಹ
  • ಸಿಂಹ: ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿ ಉತ್ತಮ ಚಟುವಟಿಕೆಗಳು ಇರುವುವು. ಅನಿಸಿಕೆ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಇರುವುದು. ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ.
  • ಕನ್ಯಾ
  • ಕನ್ಯಾ: ಮಹತ್ವದ್ದೆನಿಸಿದ ಕೆಲಸಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಬೇಕಾಗುವುದು. ಮನೆಯಲ್ಲಿ ಸಹೋದರರಿದ್ದರೂ ಕೆಲಸವನ್ನು ಮಾಡಬೇಕಾದ ಪರಿಸ್ಥಿತಿಯು ನಿಮ್ಮನ್ನು ಕುಪಿತರನ್ನಾಗಿಸುವುದು.
  • ತುಲಾ
  • ತುಲಾ: ಬಿಡುವು ಸಿಕ್ಕ ವೇಳೆಯಲ್ಲಿ ಮಾಡಬೇಕಾದ ಕೆಲಸವೆಂದು ಹಲವನ್ನು ಇಟ್ಟುಕೊಂಡಿದ್ದರೂ ಯಾವುದನ್ನು ಮಾಡದೆ ವ್ಯರ್ಥ ಕಾಲಹರಣ ಮಾಡುವ ಸಾಧ್ಯತೆ ಇದೆ. ದೇಹಾರೋಗ್ಯ ಸುಧಾರಣೆಯಾಗುವುದು.
  • ವೃಶ್ಚಿಕ
  • ವೃಶ್ಚಿಕ: ಸಮಯದ ಅಭಾವದಿಂದಾಗಿ ಕೆಲವು ವಿಷಯಗಳು ಮುಖ್ಯವೆಂದು ತೋರುತ್ತಿದ್ದರೂ ಇಂದಿನ ವೇಳಾಪಟ್ಟಿಯಿಂದ ತೆಗೆದು ಹಾಕುವಿರಿ. ನಿಮ್ಮ ಕಲಾ ಸೇವೆಯನ್ನು ಗುರುತಿಸಿ ಪ್ರಶಂಸೆ ಹಾಗೂ ಸನ್ಮಾನ ದೊರೆಯಲಿದೆ.
  • ಧನು
  • ಧನು: ಕೆಲಸ ಕಾರ್ಯಗಳು ಕೈಗೂಡಲೆಂದು ದೇವರಲ್ಲಿ ಹರಕೆ ಹೊತ್ತಿರುವ ವಿಚಾರವನ್ನು ತೀರಿಸುವ ಬಗ್ಗೆ ಹೆಚ್ಚಿನ ಪ್ರಯತ್ನ ಮತ್ತು ಆಸಕ್ತಿ ಇರಲಿ. ಆಜ್ಞೆಯನ್ನು ಪಾಲಿಸುವ ಜನರು ನಿಮಗೆ ಸಿಗುತ್ತಾರೆ. ದೇವತಾ ಆರಾಧನೆ ನಡೆಸಿ.
  • ಮಕರ
  • ಮಕರ: ಜೀವನದಲ್ಲಿ ಕೆಲವು ವಿಚಾರಕ್ಕೆ ಆತಂಕ ಮೂಡುತ್ತದೆ. ನಿಮ್ಮ ಗೊಂದಲಕ್ಕೆ ಕಾರಣವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಉಂಟಾಗಬಹುದು.
  • ಕುಂಭ
  • ಕುಂಭ: ದೈವಾನುಗ್ರಹದಿಂದ ಸಾಂಸಾರಿಕವಾಗಿ ಮತ್ತು ಆರ್ಥಿಕವಾಗಿಯೂ ಇಷ್ಟಾರ್ಥ ಸಿದ್ಧಿಸುವುದು. ಕೊಡು ಕೊಳ್ಳುವಿಕೆಯ ವ್ಯವಹಾರದಿಂದ ಅಧಿಕ ಲಾಭ ಬರಲಿದೆ. ಸಮಾರಂಭಗಳಲ್ಲಿ ಭಾಗವಹಿಸಬೇಕಾಗಬಹುದು.
  • ಮೀನ
  • ಮೀನ: ಕೆಲಸವನ್ನು ಸಮಯೋಚಿತ ಬುದ್ಧಿಯಿಂದ ಯೋಚಿಸಿ ಮಾಡುವುದು ಉತ್ತಮ. ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ದೇವತಾ ಕಾರ್ಯಗಳಿಗಾಗಿ ಪ್ರಯಾಣ ಮಾಡಲಿದ್ದೀರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.