ADVERTISEMENT

ದಿನಭವಿಷ್ಯ: ಈ ರಾಶಿಯ ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಆಗಸ್ಟ್ 2024, 0:50 IST
Last Updated 20 ಆಗಸ್ಟ್ 2024, 0:50 IST
   
ಮೇಷ
  • ಒಡನಾಟ ಹೊಂದಿರುವ ವ್ಯಕ್ತಿಗಳೊಂದಿಗೆ ವ್ಯವಹಾರಿಕವಾಗಿ ಲಾಭತರುವ ಆಲೋಚನೆಯನ್ನು ಹಂಚಿಕೊಂಡು, ವಿವಿಧ ರೀತಿಯಲ್ಲಿ ನಷ್ಟ ಆಗುವುದು. ಮಕ್ಕಳ ಆರೋಗ್ಯದಲ್ಲಿ ಕೊರತೆ ಇರುವುದಿಲ್ಲ.
  • ವೃಷಭ
  • ಬಹುದಿನಗಳ ನಿರೀಕ್ಷೆಯ ವಿಚಾರಗಳು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಿದಲ್ಲಿ ಲಾಭ ಕಾಣುವಿರಿ. ಸಂಬಂಧಿಕರ ಅತಿ ವಿಶ್ವಾಸ, ಪ್ರೀತಿ ಕಂಡು ಮರುಳಾಗಬೇಡಿ. ಶೀತದ ಬಾಧೆ ಕಾಡಬಹುದು.
  • ಮಿಥುನ
  • ಮುಖಂಡತ್ವದ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರಿಂದ ನಿರೀಕ್ಷೆಗೂ ಮೀರಿ ಸಹಾಯ ದೊರೆಯುವುದು. ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಸರ್ಕಾರದಿಂದ ಉತ್ತಮ ಅವಕಾಶಗಳು ಸಿಗಲಿವೆ. ‌
  • ಕರ್ಕಾಟಕ
  • ಕ್ಷಣಿಕ ಸುಖಗಳಿಗೆ ಗಮನ ನೀಡದೆ, ಮುಖ್ಯ ವಿಷಯ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಅಭಿವೃದ್ಧಿಗೆ ಮೆಟ್ಟಿಲುಗಳಾಗುವುದು. ನೂತನ ತಾತ್ಕಾಲಿಕ ಉದ್ಯೋಗ ದೊರೆತು ಸಮಾಧಾನವಾಗುವುದು .
  • ಸಿಂಹ
  • ಎತ್ತರದಲ್ಲಿ ಕೆಲಸ ಮಾಡುವವರು, ಸಾಹಸಿ ಪ್ರವೃತ್ತಿಯವರು ಜಾಗ್ರತರಾಗಿರಿ. ವೃತ್ತಿ ಜೀವನದಲ್ಲಿ ಹಣಕಾಸಿನ ಸ್ಥಿತಿ ಉತ್ತಮ ಪಡಿಸಿಕೊಳ್ಳುವ ಸನ್ನಿವೇಶಗಳು ನಡೆಯುವುದು. ಕೆಲಸಗಳು ಮಂದಗತಿಯಲ್ಲಿ ಸಾಗುವುದು.
  • ಕನ್ಯಾ
  • ವೃತ್ತಿರಂಗದಲ್ಲಿ ಅನವಶ್ಯಕವಾಗಿ ಇತರರ ಕೋಪಕ್ಕೆ ಗುರಿಯಾಗುವುದನ್ನು ಸ್ನೇಹಿತರು ತಪ್ಪಿಸುವರು. ಆಡುವ ಸುಳ್ಳು ಮಾತಿನ ಫಲವನ್ನು ತಕ್ಷಣದಲ್ಲಿ ಅನುಭವಿಸುವಂತಾಗುವುದು. ಸಂಘ ಸಂಸ್ಥೆಗಳ ಪದಾಧಿಕಾರ ದೊರಕುವುದು.
  • ತುಲಾ
  • ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಯಾವುದೋ ಮೂಲದಿಂದ ಬಂದ ಹಣ ದೇವ ಕಾರ್ಯಗಳಿಗೆ ಉಪಯೋಗಿಸುವುದು ಒಳ್ಳೆ ಯದು. ಭಾಷಾ ಅಧ್ಯಾಪಕರಿಗೆ ಉದ್ಯೋಗದಲ್ಲಿ ಅಸ್ಥಿರತೆ ಉಂಟಾಗುವುದು.
  • ವೃಶ್ಚಿಕ
  • ಮೇಲಧಿಕಾರಿಗಳು ಇಟ್ಟಿದ್ದ ಭರವಸೆ ಹುಸಿಯಾಗದಂತೆ ಕಾರ್ಯ ನಿರ್ವಹಿಸಲು ಅಶಕ್ತರಾಗುವ ಸಂಭವವಿದೆ. ಕೆಲಸ ಮಾಡುತ್ತಿರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ, ಕೂಡಲೇ ಬಗೆಹರಿಸಿಕೊಳ್ಳಿರಿ.
  • ಧನು
  • ದೇವಸ್ಥಾನದಲ್ಲಿನ ವಿಶೇಷ ಕಾರ್ಯಕ್ರಮಗಳಿಗೆ ನಿಮ್ಮಿಂದ ಸಹಾಯ ಅಪೇಕ್ಷಿಸುವವರ ವಿಚಾರದಲ್ಲಿ ಮುಂಜಾಗ್ರತೆ ಇರಲಿ. ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕು ನಿವಾರಿಸಿಕೊಳ್ಳುವುದನ್ನು ಸ್ವಂತವಾಗಿ ಅಭ್ಯಸಿಸಿ.
  • ಮಕರ
  • ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಮನಸ್ಸು ಉಲ್ಲಾಸದಿಂದ ಇರುವುದು. ಗೃಹಕೃತ್ಯದ ಪೂರ್ಣ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ.
  • ಕುಂಭ
  • ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ತೋರಿಬಂದರೂ ಅಭಿವೃದ್ಧಿದಾಯಕ ಬೆಳವಣಿಗೆ ಹರ್ಷವನ್ನು ತರವುದು. ನಿರುದ್ಯೋಗಿ ಯುವಕರು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನ ಪಡಬಹುದು. ಬಿಳಿ ಬಣ್ಣ ಶುಭತರಲಿದೆ.
  • ಮೀನ
  • ಸಾಲಕ್ಕೆಂದು ಅಡವಿಟ್ಟಿದ್ದ ನಿಮ್ಮ ಆಭರಣವು ಋಣ ಪರಿಹಾರವಾಗಿ ಕೈ ಸೇರಲಿದೆ. ನಿಮ್ಮ ಆರ್ಥಿಕ ಭಾಗವು ಈ ದಿನ ತುಂಬಿಕೊಂಡಿರುತ್ತದೆ. ಪರಿವಾರದವರೊಡನೆ ಸಂಚಾರ ಮಾಡುವಂಥ ಸಾಧ್ಯತೆ ಇದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.