ADVERTISEMENT

ದಿನ ಭವಿಷ್ಯ: 20 ಜುಲೈ 2023 – ಈ ರಾಶಿಯವರಿಗೆ ಕೃಷಿಗೆ ಕೀಟಗಳ ಬಾಧೆ ಇರಬಹುದು

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 22:40 IST
Last Updated 19 ಜುಲೈ 2023, 22:40 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಪರಿಚಯಸ್ಥರ ಮಗಳಿಗೆ ಯೋಗ್ಯ ವರನನ್ನು ಹುಡುಕಿಕೊಡುವಿರಿ. ಮನೆಯಲ್ಲಿ ನೆಮ್ಮದಿ ಕಾಪಾಡುವ ಕಾರಣಕ್ಕಾಗಿ ಹಿರಿಯರನ್ನು ಸುಮ್ಮನಿರಿಸುವಂಥ ಕೆಲಸವನ್ನು ಮಾಡುವಿರಿ. ಮಗಳ ಮಾತಿಗೆ ಬೆಲೆ ಕೊಡಿ.
  • ವೃಷಭ
  • ನವದಂಪತಿ  ದೀರ್ಘ ಪ್ರಯಾಣದ ನಂತರ ಮನೆಗೆ ವಾಪಸಾಗುವಿರಿ. ನೂತನ ಸ್ಥಳದಲ್ಲಿ ಗೆಳೆಯರನ್ನುಸಂಪಾದಿಸುವಂಥ ಕೆಲಸವನ್ನು ಮಾಡುವಿರಿ.  ಎದುರಾಳಿಗಳನ್ನು ಮಾತಿನಲ್ಲಿ ಸುಲಭವಾಗಿ ಕಟ್ಟಿಹಾಕುವಿರಿ.
  • ಮಿಥುನ
  • ಮನೆಯಲ್ಲಿ ಹಲವು ಜನಗಳ ಅಕಾಂಕ್ಷೆಗಳನ್ನು ನೀವೇ ಪೂರೈಸಬೇಕಾದರು ಸಹ ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರುವುದರಿಂದ ಚಿಂತೆ ಇರದು. ಮಾರ್ಗದರ್ಶನ ಪಡೆಯುವಿರಿ.
  • ಕರ್ಕಾಟಕ
  • ವಿದೇಶಕ್ಕೆ ಹೋಗುವ ಅವಕಾಶಗಳನ್ನು ತಂದೆ ತಾಯಿಯರ ಹಿತಕ್ಕಾಗಿ ಹೋಗುವುದನ್ನು ನಿಲ್ಲಿಸುವಂತಾಗುವುದು. ಮುಂಬರುವ ಕಾರ್ಯಕ್ರಮ  ಆರ್ಥಿಕ ನಿರ್ವಹಣೆಗಾಗಿ ಕೆಲವು ಖರ್ಚು ನಿಲ್ಲಿಸುವಿರಿ.
  • ಸಿಂಹ
  • ವೈದ್ಯ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಕಂಡು ಬರುವುದು. ಅನಗತ್ಯವಾದ ಮಾತುಗಳಿಂದ ದೂರ ವಿರಿ. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಳ್ಳುವ ದಿನವಾಗುವುದು. ಹೈನುಗಾರರಿಗೆ ಬೇಡಿಕೆ ಹೆಚ್ಚಲಿದೆ.
  • ಕನ್ಯಾ
  • ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆಯು ಇರಲಿದೆ. ಕುಟುಂಬದ ಕಿರಿಯ ಸೋದರನಿಗೆ ವಿವಾಹ ನಿಶ್ಚಯವಾಗುವುದು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ.
  • ತುಲಾ
  • ಸರ್ಕಾರಿ ಕೆಲಸಗಳು ಗುತ್ತಿಗೆಯಾಗಿ ಲಭಿಸುವುದರ ಜತೆಗೆ ಲಾಭದಾಯಕವಾಗಿಯೂ ಇರುತ್ತವೆ. ಕಲ್ಲುಹಾಗೂ ಕಬ್ಬಿಣದ ಕೆಲಸದಲ್ಲಿ ಜಾಗ್ರತರಾಗಿರಿ.  ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವಿರಿ.
  • ವೃಶ್ಚಿಕ
  • ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ.  ಭಾವನೆಗಳ ಬಗ್ಗೆಪ್ರಾಮಾಣಿಕರಾಗಿರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿದೆ. ಕೃಷಿಗೆ ಕೀಟಗಳ ಬಾಧೆ ಇರಬಹುದು.
  • ಧನು
  • ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ. ದೀರ್ಘಕಾಲಿಕ ಕೆಲಸಗಳು ನಿಧಾನವಾಗಿ ಸಾಗಲಿವೆ. ಇಂದು ಲಕ್ಷ್ಮಿ ಸಮೇತನಾದ ವೇಂಕಟರಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶುಭವಾಗುತ್ತದೆ.
  • ಮಕರ
  • ಸಂಶೋಧನೆಯ ಕೆಲಸಗಳು ಉತ್ತಮ  ಫಲಿತಾಂಶವನ್ನು ಕಾಣಲಿದೆ. ಯಾವ ಕೆಲಸದಲ್ಲೂ ಅಡೆ ತಡೆ ಗಳೇನೂ ಇರದು. ಬಾಕಿ ಇರಿಸಿದ ವ್ಯವಹಾರವು ಪೂರ್ಣಗೊಳ್ಳುವುದು. ದೂರ ಪ್ರಯಾಣ ಮಾಡಬೇಕಾಗುವುದು.
  • ಕುಂಭ
  • ರಾಜಕೀಯ ವ್ಯಕ್ತಿಗಳು ಜನರಲ್ಲಿ ತಾಳ್ಮೆಯಿಂದ ವ್ಯರ್ತಿಸಿ. ಹೊಸ ಕೆಲಸ ಪ್ರಾರಂಭ ಮಾಡಾಬೇಕಾದಾಗಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಬದಲಾವಣೆ ಕಂಡುಬರಲಿದೆ.
  • ಮೀನ
  • ಇತರರೊಂದಿಗೆ ಜೊತೆಗೂಡಿ ಕೆಲಸ ಮಾಡುವುದು, ನಾಲ್ಕಾರು ಜನರ ಜೊತೆಯಲ್ಲಿ ಬೆರೆಯುವುದನ್ನುಅಭ್ಯಾಸ ಮಾಡಿಕೊಳ್ಳಿ. ಗುಪ್ತಚರದಳ ಮಂದಿಗೆ ಕಾರ್ಯಭಾರ ಹೆಚ್ಚಲಿದೆ. ಕೋರ್ಟಿನ ವಿಚಾರದಲ್ಲಿ ಜಯಲಭಿಸಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.