ADVERTISEMENT

ದಿನ ಭವಿಷ್ಯ: ಸಂಗಾತಿಯಿಂದ ಉಡುಗೊರೆ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ನವೆಂಬರ್ 2025, 23:42 IST
Last Updated 19 ನವೆಂಬರ್ 2025, 23:42 IST
   
ಮೇಷ
  • ಸಕಲ ಜವಾಬ್ದಾರಿಗಳನ್ನು ಸುಲಭೋಪಾಯದಲ್ಲಿ ನಿಭಾಯಿಸಿ ಚಾಕಚಕ್ಯತೆಯನ್ನು ಪ್ರದರ್ಶಿಸುವಿರಿ. ಜಗಳಲ್ಲೂ ಉಪಾಯದಿಂದ ವರ್ತಿಸಿದರೆ ಸಹೋದರರ ಜತೆಗೆ ನಿಷ್ಠುರವಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.
  • ವೃಷಭ
  • ನಿಮ್ಮ ಸ್ವಂತಕ್ಕೆಂದು ನೀವು ತೆಗೆದಿಡುವ ಹಣವನ್ನು ಸಹ ಈ ಬಾರಿ ಇತರೆ ಖರ್ಚುಗಳಿಗೆ ಬಳಸುವಿರಿ. ದುಷ್ಟರ ಸಹವಾಸದಿಂದಾಗಿ ಹಾದಿ ತಪ್ಪುತ್ತಿರುವ ಮಕ್ಕಳ ಬಗ್ಗೆ ಎಷ್ಟು ಮೇಲ್ವಿಚಾರಣೆ ನಡೆಸಿದರು ಕಡಿಮೆ ಎಂದೆನಿಸಬಹುದು.
  • ಮಿಥುನ
  • ಯಾವ ವಿಷಯದ ಬಗ್ಗೆಯೇ ಆದರೂ ಅತ್ಯಂತ ಆಳವಾದ ಯೋಚನೆ ಬೇಡ. ವಿದೇಶ ಪ್ರಯಾಣ ಕೈಗೊಳ್ಳುವ ಕಾರ್ಯಕ್ರಮವಿರುವುದರಿಂದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುವಿರಿ. ಸಂಗಾತಿಯ ಸಲಹೆಗಳತ್ತ ಗಮನ ಕೊಡಿ.
  • ಕರ್ಕಾಟಕ
  • ಉದಯೋನ್ಮುಖ ಕವಿಗಳಿಗೆ ಛಂದೋಬದ್ಧ ಕೃತಿಗೆ ಹಿರಿಯ ಸಾಹಿತಿಗಳಿಂದ ಪ್ರಶಂಸೆ ದೊರೆಯುವುದು. ಸ್ನೇಹಿತರಲ್ಲಿ ಹಣಕಾಸಿನ ವಿಚಾರಕ್ಕೆ ಮನಸ್ಥಾಪ ಬರದಂತೆ ಎಚ್ಚರವಹಿಸಿ. ಔಷಧಿ ಮಾರಾಟಗಾರರಿಗೆ ಲಾಭ.
  • ಸಿಂಹ
  • ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿರುವ ನಿಮಗೆ ಹಲವಾರು ಕನಸುಗಳು ಈಡೇರುವ ಅವಕಾಶ ಅಪರಿಚಿತ ವ್ಯಕ್ತಿ ತೋರುವರು. ಕಡೆಯ ಸಮಯದದಲ್ಲಿ ಅಪಾಯದಿಂದ ಪಾರಾಗುವುದು ನಿರಾಳತೆ ತರಲಿದೆ.
  • ಕನ್ಯಾ
  • ಈ ದಿನ ನೀವು ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠವನ್ನು ಕಲಿಯುವಂತಾಗಲಿದೆ. ಮಕ್ಕಳ ಮಾತುಗಳು ಗೊಂದಲಗಳನ್ನು ಸೃಷ್ಟಿಸಬಹುದು. ನಿಮ್ಮ ವಿರೋಧಿಗಳು ರಾಜಿಯಾಗಲಿದ್ದಾರೆ.
  • ತುಲಾ
  • ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸಕಾರ್ಯದಲ್ಲಿ ತೊಡಗಿಸಿಕೊಂಡಲ್ಲಿ ನಿಧಾನವಾಗಿ ಯಶಸ್ಸು ಪ್ರಾಪ್ತಿಯಾಗುವುದು. ಕಟ್ಟಡ ನಿರ್ಮಾಣದವರು ಹೊರ ಊರಿನಲ್ಲಿನ ಗುತ್ತಿಗೆ ಪಡೆವಲ್ಲಿ ಯಶಸ್ವಿಯಾಗುವಿರಿ.
  • ವೃಶ್ಚಿಕ
  • ಮುಖ್ಯವಾದ ವಿಷಯವನ್ನು ಮುಖ್ಯವಾದ ವ್ಯಕ್ತಿಯ ಜೊತೆ ಮಾತನಾಡಲು ಮರೆತಿದ್ದರಿಂದ ದಿನಚರಿಯಲ್ಲಿ ವಿಳಂಬ ಅನುಭವಿಸುವಂತೆ ಆಗುವುದು. ಕೆಲವು ಮೂಲಭೂತ ಬದಲಾವಣೆಗಳಾಗುವ ಸಾಧ್ಯತೆ ಇದೆ.
  • ಧನು
  • ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳಬೇಕಿದ್ದರೆ ಅವಿರತ ಶ್ರಮ ಅಗತ್ಯವಾಗುವುದು. ರಾಸಾಯನಿಕ ಔಷಧಿಗಳ ಬಳಕೆಗಿಂತ ತೈಲಗಳ ಲೇಪನದಂತಹ ಚಿಕಿತ್ಸೆ ಮಾಡಿಕೊಳ್ಳುವುದರಿಂದ ಕಾಲು ನೋವು ನಿವಾರಣೆಯಾಗುವುದು.
  • ಮಕರ
  • ನಿಮ್ಮ ಹಳೇಯ ಶಾಲೆಗೆ ಭೇಟಿ ನೀಡುವುದರ ಜೊತೆಗೆ ಈಗಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವ ಮೂಲಕ ಅವರಿಗೆ ಮಾರ್ಗದರ್ಶನ ಮಾಡುವಿರಿ. ವ್ಯವಹಾರಸ್ಥರಿಗೆ ಲಾಭ ಹಾಗೆಯೇ ನಷ್ಟವೂ ಇರಲಾರದು.
  • ಕುಂಭ
  • ಷೇರುಗಳಲ್ಲಿ ಹೂಡಿಕೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಲಾಭದಾಯಕವಾಗಿ ತೋರುವುದಿಲ್ಲ. ವಾತ್ಸಲ್ಯ, ಪ್ರೀತಿಯಿಂದ ಕುಟುಂಬದವರ ಮನಸ್ಸನ್ನು ಗೆಲ್ಲುವಿರಿ. ವಿದ್ಯಾರ್ಥಿಗಳಿಗೆ ಜ್ಞಾನ ದೊರೆತು ಆನಂದವಾಗಲಿದೆ.
  • ಮೀನ
  • ತವರು ಮನೆಯ ಜಗಳ ಗಂಡನ ಮನೆಯಲ್ಲಿರುವ ನಿಮ್ಮ ಮನಃಶಾಂತಿಯನ್ನು ಕೆಡಿಸುತ್ತದೆ. ಕಾರ್ಮಿಕರ ಅಸಹಕಾರದಿಂದ ಗೃಹ ನಿರ್ಮಾಣ ವಿಳಂಬವಾಗುತ್ತದೆ. ಸಂಗಾತಿಯಿಂದ ಉಡುಗೊರೆ ಸಿಗಲಿದೆ.