ದಿನ ಭವಿಷ್ಯ: ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ನವೆಂಬರ್ 2025, 1:07 IST
Last Updated 23 ನವೆಂಬರ್ 2025, 1:07 IST
ದಿನ ಭವಿಷ್ಯ
ಮೇಷ
ಬಹುಜನರ ಅಭಿಪ್ರಾಯವನ್ನು ಕೇಳಿ ನೀವು ಆರಂಭಿಸಲು ಹೊರಟ ಕೆಲಸದಲ್ಲಿ ವಿಭಿನ್ನ ಅಭಿಪ್ರಾಯದಿಂದಾಗಿ ಗೊಂದಲಕ್ಕೆ ಒಳಗಾಗುವಿರಿ. ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ.
ವೃಷಭ
ವೈದ್ಯರು ಹೊಸ ಖಾಸಗಿ ಕಾರ್ಯಾಲಯವನ್ನು ಮಾಡುವ ಯೋಚನೆ ಮಾಡುವಿರಿ. ಧರ್ಮ ಕಾರ್ಯದಿಂದ ಶ್ರೇಯೋಭಿವೃದ್ಧಿಯಾಗುವುದು. ಅನುಭವದ ಕೊರತೆಯಿಂದಾಗಿ ಕೆಲಸಗಳಲ್ಲಿ ವಿಳಂಬವಾಗಬಹುದು.
ಮಿಥುನ
ಯಾವುದೇ ರೀತಿಯ ಅವಘಡಗಳಿಗೆ ನೇರವಾಗಿ ನೀವೇ ಹೊಣೆಯಾಗಿರುತ್ತೀರಿ. ಮಗನಲ್ಲಿ ಅನುಭವದ ಕೊರತೆಯನ್ನು ಕಂಡು ಬೇಸರಿಸುವಿರಿ. ಇದ್ದುದರಲ್ಲಿ ಖುಷಿ ಪಡುವುದು ಅಗತ್ಯವಾಗಿದೆ.
ಕರ್ಕಾಟಕ
ಪ್ರಾಣಿ ದಯಾ ಸಂಘದಲ್ಲಿ ಕೆಲಸ ಮಾಡುತ್ತಿರುವವರಿಗೆ ಇಂದಿನ ಹೃದಯ ವಿದ್ರಾವಕ ಘಟನೆಯು ಕಣ್ಣೀರಿಗೆ ಕಾರಣವಾಗುತ್ತದೆ. ಕಂಪನಿಯ ಕೆಲಸಕ್ಕಾಗಿ ತುರ್ತು ಪ್ರಯಾಣ ಮಾಡಬೇಕಾದ ಸಂದರ್ಭ ಬರುವುದು.
ಸಿಂಹ
ಆತ್ಮೀಯ ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯವನ್ನು ಹೊಂದುವಿರಿ. ಸ್ಥಿರವಾಗಿ ನಡೆಯುತ್ತಿದ್ದ ನಿಮ್ಮ ಉದ್ಯೋಗದಲ್ಲಿ ಅಭದ್ರತೆ ಕಾಡಬಹುದು. ಪ್ರಾಪಂಚಿಕ ಬದುಕಿನ ಬಗ್ಗೆ ತಿಳಿದುಕೊಳ್ಳಿ.
ಕನ್ಯಾ
ಹೂಡಿಕೆಯಿಂದ ಅಧಿಕ ಲಾಭ ಬಂದಿರುವ ಸುದ್ದಿ ತಿಳಿದು ಅತೀವ ಸಂತೋಷಗೊಳ್ಳುವಿರಿ. ಮಾತು ಅತಿರೇಕವಾಗದಂತೆ ಎಚ್ಚರ ವಹಿಸುವಿರಿ. ನಟನಾ ವೃತ್ತಿಯವರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ.
ತುಲಾ
ಮಗಳು ವಿವಾಹ ವಿಚಾರದಲ್ಲಿ ತೋರುತ್ತಿರುವ ಅಸಡ್ಡೆಯು ನಿಮ್ಮ ಅಸಮಾಧಾನಕ್ಕೆ ಕಾರಣವಾಗುವುದು. ಕಂಕಣ ಭಾಗ್ಯ ಕೂಡಿಬಂದಾಗ ತಳ್ಳಿಹಾಕುವುದು ತರವಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಲಾಭಪಡೆಯುವಿರಿ.
ವೃಶ್ಚಿಕ
ದ್ಯುತಿತಂತು ಸಾಧನಗಳ ತಯಾರಕ ಹಾಗೂ ಮಾರಾಟಗಾರರಿಗೆ ಲಾಭದಾಯಕ ದಿನವಾಗಿರುತ್ತದೆ. ಉನ್ನತ ವ್ಯಾಸಂಗಕ್ಕೆ ಅವಕಾಶ ಲಭಿಸುತ್ತದೆ. ಸದ್ಗುರು ದತ್ತಾತ್ರೇಯರ ಆರಾಧನೆಯಿಂದ ಜ್ಞಾನ ಸಂಪಾದಿಸಿಕೊಳ್ಳಿರಿ.
ಧನು
ಕೆಲ ವಿಚಾರಗಳನ್ನು ಅರಿತ ಮೇಲೆ ನೀವಿರುವ ಜಾಗದಲ್ಲಿ ನೀವು ಅಂದುಕೊಂಡ ರೀತಿಯ ಭವಿಷ್ಯ ಇರುವುದೇ ಎಂಬ ಚಿಂತೆ ಉಂಟಾಗುತ್ತದೆ. ತಂದೆಯ ನಿರ್ಧಾರಗಳನ್ನು ಗೌರವಿಸುವುದರಿಂದ ನಿಮ್ಮ ಗೌರವ ವೃದ್ಧಿಸುತ್ತದೆ.
ಮಕರ
ಊರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅದರಲ್ಲೂ ವಿಶೇಷವಾಗಿ ಸುಗಮ ಸಂಗೀತದಲ್ಲಿ ನೀವು ಭಾಗವಹಿಸುವಿರಿ. ಏಕ ಕಾಲದಲ್ಲಿ ಹತ್ತಾರು ಕೆಲಸಗಳನ್ನು ಮಾಡುವಂತಹ ಉತ್ಸಾಹ ಉಂಟಾಗುವುದು.
ಕುಂಭ
ವೃತ್ತಿಯಲ್ಲಿ ಬಡ್ತಿಯನ್ನು ಬಯಸುವ ನೀವು ಅದರೊಂದಿಗೆ ಸ್ಥಾನ ಬದಲಾವಣೆಗೂ ಸಹ ತಯಾರಿರಬೇಕಾಗುತ್ತದೆ. ನಿಮ್ಮ ಜೀವನದ ಹಳೆಯ ನೆನಪುಗಳನ್ನು ಮರೆತು ಭವಿಷ್ಯದತ್ತ ಗಮನಹರಿಸುವುದು ಉತ್ತಮ.
ಮೀನ
ರಕ್ಷಕರು ಕಾವಲಿಗೆ ಇರುವ ಸಮಯದಲ್ಲಿ ಯಾವುದೇ ಸೋಮಾರಿತನ ಮಾಡಬೇಡಿ, ನಿಮ್ಮ ನಿರ್ಲಕ್ಷ್ಯ ಹಲವು ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಒಳ್ಳೆಯ ಕನಸುಗಳಿಗೆ ಜೀವ ಬಂದಂತೆ ಭಾಸವಾಗುತ್ತದೆ.