ದಿನಭವಿಷ್ಯ: ಈ ರಾಶಿಯ ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಆಗಸ್ಟ್ 2024, 23:30 IST
Last Updated 23 ಆಗಸ್ಟ್ 2024, 23:30 IST
ಮೇಷ
ದೈವಾನುಕೂಲದಿಂದ ನಡೆಯಬೇಕಾದ ಶುಭ ಕಾರ್ಯಗಳನ್ನು ಹಿರಿಯರೊಂದಿಗೆ ಕುಳಿತು ನಿಶ್ಚಯ ಮಾಡಬಹುದು. ನಿಮ್ಮ ಶಕ್ತಿಗೂ ಮೀರಿ ನೀವು ಮಾಡಿದ ಕೆಲಸಗಳಿಂದಾಗಿ ದೈಹಿಕ ಆಯಾಸ ಉಂಟಾಗಬಹುದು.
ವೃಷಭ
ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ ಹಾಗೂ ಅದ್ದರಿಂದ ಹಗುರಾಗುವಿರಿ. ಮಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ.
ಮಿಥುನ
ಪೂರ್ವ ನಿಯೋಜಿತವಾದ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯುತ್ತದೆ. ಆರೋಗ್ಯದಲ್ಲಿ ಉದಾಸೀನತೆ ತೋರದಿರಿ. ಇನ್ನೊಬ್ಬರನ್ನು ಅಥವಾ ಮೂಕ ಪ್ರಾಣಿಯನ್ನು ದಂಡಿಸುವುದು ಸರಿಯಲ್ಲ.
ಕರ್ಕಾಟಕ
ಲೇವಾದೇವಿ ವ್ಯವಹಾರ ಮಾಡುವವರಿಗೆ ಜವಾಬ್ದಾರಿಯ ಹೊರೆ, ಮಾನಸಿಕ ಒತ್ತಡ ಹೆಚ್ಚಲಿದೆ. ಕಾರ್ಖಾನೆಯಲ್ಲಿ ಹೊಸ ವಿದ್ಯುತ್ ಉಪಕರಣಗಳನ್ನು ಅಳವಡಿಸುವಲ್ಲಿ ಅಧಿಕ ಬಂಡವಾಳವನ್ನು ಹೂಡುವಿರಿ.
ಸಿಂಹ
ಸ್ನೇಹಿತರ ಹಾಗೂ ಬಂಧುಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವ ಬಗ್ಗೆ ತಂದೆಯವರಲ್ಲಿ ಮಾತನಾಡಿ.
ಕನ್ಯಾ
ಅದೃಷ್ಟವು ಚೆನ್ನಾಗಿರುವ ಕಾರಣ ಬಂದ ಅವಕಾಶಗಳನ್ನು ಬಳಸಿಕೊಂಡಲ್ಲಿ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು. ನಿಮ್ಮ ಉದ್ಯೋಗದಲ್ಲಿನ ಬದಲಾವಣೆಯು ಉತ್ಸಾಹವನ್ನು ಹೆಚ್ಚಿಸುವುದು.
ತುಲಾ
ಹಿರಿಯ ಅಧಿಕಾರಿಗಳೊಬ್ಬರ ಭೇಟಿಯಿಂದ ಎಲ್ಲಾ ಕಾರ್ಯಗಳು ಸರಾಗವಾಗಿ ನಡೆಯುವುದು. ನೆರೆ-ಹೊರೆಯವರ ವಿಶ್ವಾಸ ಹೆಚ್ಚಿ ವ್ಯವಹಾರದಲ್ಲಿ ಲಾಭ ಅಧಿಕವಾಗುವುದು. ಕಾಗದದ ಉದ್ಯಮದವರಿಗೆ ಲಾಭ ಇರುವುದು.
ವೃಶ್ಚಿಕ
ನೂತನ ಮನೆ ನಿರ್ಮಾಣ, ನಿವೇಶನ ಖರೀದಿಯ ಆಲೋಚನೆಗಳಿಗೆ ಪೂರಕ ವಾತಾವರಣ ಸ್ನೇಹಿತರಿಂದ ಸಿಗಲಿದೆ. ವೀರಾಂಜನೇಯನಿಗೆ ಜೇನುತುಪ್ಪ ಅಭಿಷೇಕದಿಂದ ವ್ಯಾಧಿಗಳು ದೂರವಾಗುತ್ತದೆ.
ಧನು
ಹಣದ ಆಸೆಯಿಂದ ಹೊರಬರುವ ಪ್ರಯತ್ನವು ನೆಮ್ಮದಿಯ ಜೀವನಕ್ಕೆ ಕಾರಣವಾಗುತ್ತದೆ. ಮಗನ ಸಹಾಯದಿಂದ ಸಂಬಂಧಿಕರೊಬ್ಬರ ಕೆಲಸ ಸುಗಮವಾಗಿ ಕೈಗೂಡುವುದರಿಂದ ಹೆಚ್ಚಿನ ಸಂತಸವಿರುವುದು.
ಮಕರ
ಬಂಧುಗಳ ಮನೆಯಲ್ಲಿನ ಕೆಲವು ವಿಚಿತ್ರವಾದ ಆಚರಣೆಗಳು ಗೊಂದಲ ಉಂಟುಮಾಡಬಹುದು. ಅವಿವಾಹಿತರಿಗೆ ನಿರೀಕ್ಷೆಗೆ ಪೂರಕವಾದ ಪ್ರಚೋದನೆ ಲಭಿಸಲಿದೆ. ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ.
ಕುಂಭ
ವಿವೇಚನೆಯಿಂದ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನವಹಿಸುವುದರಿಂದ ಯಶಸ್ಸು. ಸಂಸಾರದ ಜೊತೆಯಲ್ಲಿ ಕಾಲಕಳೆಯುವ ಸಮಯವಾಗಿದೆ.
ಮೀನ
ಕಾರ್ಯಶೈಲಿಯು ಆಫೀಸಿನಲ್ಲಿ ಮೆಚ್ಚುವ ಮಾತಾಗುವುದು. ಮನೆಯಲ್ಲಿ ಶುಭ ಕಾರ್ಯಗಳ ತಯಾರಿ ಉತ್ತಮ ರೀತಿಯಲ್ಲಿ ನಡೆಯುವುದು. ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ.