ADVERTISEMENT

Today's Horoscope | ದಿನ ಭವಿಷ್ಯ – 08 ಜೂನ್‌ 2023

ಪ್ರಜಾವಾಣಿ ವಿಶೇಷ
Published 7 ಜೂನ್ 2023, 22:35 IST
Last Updated 7 ಜೂನ್ 2023, 22:35 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಆತ್ಮವಿಶ್ವಾಸದಿಂದ ಎಲ್ಲವನ್ನೂ ಸಾಧಿಸಲಿದ್ದೀರಿ. ಅವಿವಾಹಿತರು ಅಸ್ಪಷ್ಟ ನಿಲುವನ್ನು ಹೋಗಲಾಡಿಸಿದಲ್ಲಿ ಕಂಕಣಬಲದ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿದ್ದರೆ ಎಲ್ಲವನ್ನೂ ನಿಭಾಯಿಸಬಹುದು.
  • ವೃಷಭ
  • ಆತ್ಮವಿಶ್ವಾಸದಿಂದ ಎಲ್ಲವನ್ನೂ ಸಾಧಿಸಲಿದ್ದೀರಿ. ಅವಿವಾಹಿತರು ಅಸ್ಪಷ್ಟ ನಿಲುವನ್ನು ಹೋಗಲಾಡಿಸಿದಲ್ಲಿ ಕಂಕಣಬಲದ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿದ್ದರೆ ಎಲ್ಲವನ್ನೂ ನಿಭಾಯಿಸಬಹುದು.
  • ಮಿಥುನ
  • ವ್ಯವಹಾರಗಳ ವಿಷಯಕ್ಕೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ಜರೂರಿನಲ್ಲಿ ಚರ್ಚೆ ನಡೆಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಖಾಸಗೀ ಗುಮಾಸ್ತ ಕೆಲಸದಲ್ಲಿದ್ದವರಿಗೆ ಪೂರ್ಣ ವಿರಾಮ ಸಿಗುವಂತೆ ಆಗಬಹುದು.
  • ಕರ್ಕಾಟಕ
  • ವೃತ್ತಿರಂಗದ ಕೆಲವು ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಂಡರೆ ಉತ್ತಮ. ಕುಟುಂಬ ವರ್ಗದಲ್ಲಿ ಸಲಹೆಗಳಿಗೆ ಆದ್ಯತೆ ದೊರೆಯಲಿದೆ. ಮನೆಯಲ್ಲಿ ಮದುವೆ ಸಮಾರಂಭಗಳು ಜರುಗುವ ಸಾಧ್ಯತೆ ಇದೆ.
  • ಸಿಂಹ
  • ಗಣ್ಯ ವ್ಯಕ್ತಿಗಳ ಸಹಾಯದಿಂದ ಬಂದಂಥ ಸಮಸ್ಯೆಗಳನ್ನು ಉತ್ತಮವಾಗಿ ಜಯಿಸುವಿರಿ. ವಂಶಪಾಂಪರಿಕವಾಗಿ ಬಂದ ವ್ಯಾಪಾರ ವ್ಯವಹಾರ ಅಥವಾ ವೃತ್ತಿಯಲ್ಲಿ ಈ ದಿನ ಮತ್ತಷ್ಟು ಏಳಿಗೆ ಕಾಣಲಿದೆ.
  • ಕನ್ಯಾ
  • ರಿಯಲ್ ಎಸ್ಟೇಟುದಾರರಿಗೆ ಉತ್ತಮ ಧನಲಾಭವಿರುವ ಅವಕಾಶಗಳಿಂದ ವ್ಯವಹಾರಗಳು ವೃದ್ಧಿಗೊಳ್ಳಲಿದೆ. ಪೋಲಿಸ್ ವೃತ್ತಿಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರದ ಸಂಚಾರ ಕಂಡುಬರಲಿದೆ.
  • ತುಲಾ
  • ರಿಯಲ್ ಎಸ್ಟೇಟುದಾರರಿಗೆ ಉತ್ತಮ ಧನಲಾಭವಿರುವ ಅವಕಾಶಗಳಿಂದ ವ್ಯವಹಾರಗಳು ವೃದ್ಧಿಗೊಳ್ಳಲಿದೆ. ಪೋಲಿಸ್ ವೃತ್ತಿಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರದ ಸಂಚಾರ ಕಂಡುಬರಲಿದೆ.
  • ವೃಶ್ಚಿಕ
  • ಪ್ರಾರಂಭಿಸಿದ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು, ಅಭಿವೃದ್ಧಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಧನಾದಾಯಕ್ಕೆ ಅಡ್ಡಿ ಆತಂಕಗಳು ಇರುವುದಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕೆಲಸವಿರಲಿದೆ.
  • ಧನು
  • ಔದ್ಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ದೊರೆಯುವ ಸಂಭವವಿದೆ. ಧಾರ್ಮಿಕವಾಗಿ ಹೆಚ್ಚಿನ ಏಕಾಗ್ರತೆ ಹಾಗೂ ಉತ್ತಮ ರೀತಿಯಲ್ಲಿನ ಧ್ಯಾನಗಳಿಂದ ಮಾನಸಿಕವಾಗಿ ಸದೃಢರಾಗುವಿರಿ.
  • ಮಕರ
  • ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನ, ಗೌರವ ತೋರಿಬರುವುದು. ಆಸ್ತಿ ಕೊಳ್ಳುವುದರಲ್ಲಾಗಲೀ, ಮನೆ ಕಟ್ಟುವ ವಿಚಾರದಲ್ಲಾಗಲೀ ಅದೃಷ್ಟವು ನಿಮ್ಮ ಪಾಲಿಗೇ ಇರುತ್ತದೆ. ಒಪ್ಪಂದ ಬಹಳ ಸುಲಭವಾಗುವುದು.
  • ಕುಂಭ
  • ಕೆಲಸದ ಒತ್ತಡದಿಂದ ದೇಹಾಯಾಸ ಎದುರಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ನೀವು ಮಾಡುವ ಕೆಲಸ ಕಾರ್ಯಗಳಿಂದ ಗೌರವಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಳ್ಳಿ.
  • ಮೀನ
  • ಆಭರಣ ಖರೀದಿ ಅಥವಾ ಆಸ್ತಿ ಖರೀದಿ ಮಾಡುವ ವಿಚಾರದ ಬಗ್ಗೆ ಹೆಂಡತಿ ಮಕ್ಕಳೊಂದಿಗೆ ಚರ್ಚೆ ನಡೆಯಲಿದೆ. ಸಂಸಾರ ನಿರ್ವಹಣೆ ಮಾಡುವುದು ಸುಲಭವಲ್ಲ ಎಂದು ಅನಿಸಲಿದೆ. ಉಪಹಾರ ಗೃಹಗಳಿಂದ ಲಾಭ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.